ಭವಿಷ್ಯದಲ್ಲಿ ಗೂಗ್ಲಿ 2 ನಿರ್ಮಾಣ ಸಾಧ್ಯತೆ

ಗೂಗ್ಲಿ 2 ಸಿನಿಮಾ ಮಾಡುವ ಆಸೆ ಇದೆ. ಆದರೆ ಯಾವಾಗ ಎಂದು ಗೊತ್ತಿಲ್ಲ ಎಂದು ನಿರ್ದೇಶಕ ಪವನ್ ಒಡೆಯರ್ ಹೇಳಿದ್ದಾರೆ.
“ಈಗಿನ ಪರಿಸ್ಥಿತಿ, ಟ್ರೆಂಡ್‌ಗೆ ತಕ್ಕಂತೆ ಸ್ಕ್ರಿಪ್ಟ್ ಮಾಡಬೇಕಿದೆ. ಆಮೇಲೆ ಯಶ್ ಅವರನ್ನು ಅಪ್ರೋಚ್ ಮಾಡಬೇಕು. ಗೂಗ್ಲಿ ದೊಡ್ಡ ಮಟ್ಟದಲ್ಲಿ ಹಿಟ್ ಆದ ಚಿತ್ರ. ಆ ಕಥೆ ಮುಂದುವರಿಸಬೇಕು ಅಂದ್ರೆ ಅದಕ್ಕೆ ಎಲ್ಲಾ ರೀತಿಯ ತಯಾರಿ ಮಾಡಬೇಕು. ಬಹಳ ಇಂಟರೆಸ್ಟಿಂಗ್ ಆಗಿ ಪ್ಯಾನ್ ಇಂಡಿಯಾ ಮಟ್ಟಕ್ಕೆ ಸಿನಿಮಾ ಮಾಡಬೇಕಾಗುತ್ತದೆ” ಎಂದು ಅವರು ಹೇಳಿದ್ದಾರೆ.

ಗೂಗ್ಲಿ 2 ಚಿತ್ರ ನಿರ್ಮಾಣ ಮಾಡುವಂತೆ ಅಭಿಮಾನಿಗಳು ಒತ್ತಾಯ ಮಾಡುತ್ತಿರುವ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ” ಗೂಗ್ಲಿ 2 ಸಿನಿಮಾ ನಿರ್ಮಾಣ ಬಗ್ಗೆ ಆಗ್ರಹ ಹೆಚ್ಚಾಗುತ್ತಿದೆ. ಗೂಗ್ಲಿ 2 ಚಿತ್ರದ ಬಗ್ಗೆ ನಾನು ಅಥವಾ ಯಶ್ ಯೋಚನೆ ಅಥವಾ ಚರ್ಚೆ ಕೂಡಾ ಮಾಡಿಲ್ಲ. ಚಿತ್ರ ಮಾಡುವ ಸಾಧ್ಯತೆ ಇದ್ದರೆ ಅದಕ್ಕೆ ಹೆಚ್ಚು ಸಮಯ ಬೇಕಾಗುತ್ತದೆ. ಯಶ್ ಈಗ ದೊಡ್ಡ ಸ್ಟಾರ್. ಅವರ ಇಮೇಜ್‌ಗೆ ತಕ್ಕಂತೆ ಸ್ಕ್ರಿಪ್ಟ್ ಮಾಡಬೇಕಾಗುತ್ತದೆ” ಎಂದಿದ್ದಾರೆ.

2013ರಲ್ಲಿ ತೆರೆಕಂಡಿದ್ದ ‘ಗೂಗ್ಲಿ’ ಸಿನಿಮಾದಲ್ಲಿ ಯಶ್ ಜೊತೆಗೆ ಕೃತಿ ಕರಬಂಧ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಈ ರೊಮ್ಯಾಂಟಿಕ್ ಲವ್ ಸ್ಟೋರಿ ಸಿನಿಮಾವನ್ನು ಜಯಣ್ಣ-ಭೋಗೇಂದ್ರ ನಿರ್ಮಾಣ ಮಾಡಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಯಶ್ ಹಾಗೂ ಪವನ್ ಒಡೆಯರ್ ಅಭಿಮಾನಿಗಳು ಗೂಗ್ಲಿ 2 ಸಿನಿಮಾ ನಿರ್ಮಾಣಕ್ಕೆ ಒತ್ತಾಯಿಸುತ್ತಿದ್ದು ಈ ಕಾರಣದಿಂದ ಪವನ್ ಒಡೆಯರ್ ಹೇಳಿಕೆ ಮಹತ್ವ ಪಡೆದಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!