ಫಹಾದ್‌ ಗೆ ಪವನ್ ಕುಮಾರ್ ಡೈರೆಕ್ಷನ್

ಲೂಸಿಯಾ ಖ್ಯಾತಿಯ ನಿರ್ದೇಶಕ ಪವನ್‌ಕುಮಾರ್‌ ಮಲಯಾಳಗೆ ಕಾಲಿಟ್ಟಿದ್ದು, ಮಲಯಾಳದ ಜನಪ್ರಿಯ ನಟ ಫಹಾದ್‌ ಫಾಸಿಲ್‌ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ.

ಹೊಂಬಾಳೆ ಫಿಲಂಸ್‌ ನೂತನ ಚಿತ್ರ ‘ಧೂಮಂ’ಚಿತ್ರದ ಟೈಟಲ್‌ ಹಾಗೂ ಪೋಸ್ಟರ್‌ ಇಂದು ಬಿಡುಗಡೆಗೊಂಡಿದೆ. ಅದನ್ನು ಪವನ್‌ಕುಮಾರ್‌ ತಮ್ಮ ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ತೆಲುಗಿನಲ್ಲಿ ಒಟಿಟಿಗಾಗಿ ವೆಬ್‌ ಸಿರಿಸ್‌ ನಿರ್ದೇಶಿಸಿದ್ದ ಪವನ್‌ ಕುಮಾರ್‌, ಫಹಾದ್‌ಗೆ ಚಿತ್ರ ನಿರ್ದೇಶಿಸುವ ವದಂತಿ ಬಹಳ ಕಾಲದಿಂದಲೂ ಇತ್ತು. ಪವನ್‌ ಹಾಗೂ ಫಹಾದ್‌ ಸ್ನೇಹವೂ ಇದಕ್ಕೆ ಕಾರಣ. ಧೂಮಂ ಮಲಯಾಳ, ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ತೆರೆಗೆ ಬರಲಿದೆ.

ಮಲಯಾಳ ಹೊರತುಪಡಿಸಿ ಬೇರೆ ಭಾಷೆಯ ಸಿನಿಮಾಗಳಲ್ಲಿಯೂ ಫಹಾದ್‌ ಮಿಂಚುತ್ತಿದ್ದಾರೆ. ಪುಷ್ಪ, ವಿಕ್ರಂ ಸಿನಿಮಾಗಳಲ್ಲಿ ಅಬ್ಬರಿಸಿರುವ ಫಹಾದ್‌ ಅತ್ಯಂತ ಬೇಡಿಕೆಯ ನಟ. ಮಲಯಾಳದಲ್ಲಿ ಅವರ ಕಾಲ್‌ಶೀಟ್‌ ಸಿಗುವುದೇ ಕಷ್ಟ ಎಂಬ ಪರಿಸ್ಥಿತಿ ಇದೆ. ಇಂಥ ನಟನಿಗೆ ನಿರ್ದೇಶಿಸುವ ಅವಕಾಶ ಕನ್ನಡದ ಪವನ್‌ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.

ಲೂಸಿಯಾ, ಯೂಟರ್ನ್‌ ನಂತರ ಪವನ್‌ಕುಮಾರ್‌ ಪುನಿತ್‌ ರಾಜ್‌ಕುಮಾರ್‌ಗೆ ದ್ವಿತ್ವ ಮಾಡಬೇಕಿತ್ತು. ಹೊಂಬಾಳೆ ಫಿಲಂಸ್‌ ನಿರ್ಮಾಣದ ಚಿತ್ರದ ಟೈಟಲ್‌, ಪೋಸ್ಟರ್‌ ಎಲ್ಲವೂ ಬಿಡುಗಡೆಗೊಂಡಿತ್ತು. ದುರಾದೃಷ್ಟವಶಾತ್‌ ಪುನೀತ್‌ ರಾಜ್‌ಕುಮಾರ್‌ ಹೃದಯಘಾತದಿಂದ ತೀರಿಕೊಂಡರು. ಬಳಿಕ ದ್ವಿತ್ವದ ಅಪ್‌ಡೇಟ್‌ ಬರಲಿಲ್ಲ. ಪವನ್‌ ಕುಮಾರ್‌ ಗಾಳಿ‍ಪಟ-2 ನಟನೆಯಲ್ಲಿ ತೊಡಗಿದರು.

ದ್ವಿತ್ವವನ್ನು ಕನ್ನಡ, ತೆಲುಗಿನಲ್ಲಿ ಪುನಿತ್‌, ಮಲಯಾಳ, ತಮಿಳಿನಲ್ಲಿ ಫಹಾದ್‌ ಮಾಡಲಿದ್ದಾರೆ ಎಂಬ ಸುದ್ದಿಗಳು ಹಬ್ಬಿದ್ದವು. ಧೂಮಂ ಬೇರೆಯದೇ ಕಥೆಯೇ ಅಥವಾ ದ್ವಿತ್ವವನ್ನೇ ಧೂಮಂ ಆಗಿ ತೆರೆಗೆ ತರಲಾಗುತ್ತಿದೆಯೇ ಎಂಬ ಕುರಿತು ಚಿತ್ರತಂಡದಿಂದ ಯಾವುದೇ ಮಾಹಿತಿ ದೊರೆತಿಲ್ಲ.

ಅಪರ್ಣಾ ಬಾಲಮುರಳಿ ಫಾಹದ್ ಫಾಸಿಲ್ ಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅಕ್ಟೋಬರ್ 9ರಿಂದ ಸಿನಿಮಾದ ಶೂಟಿಂಗ್ ಆರಂಭವಾಗಲಿದ್ದು 2023ರ ಹೊತ್ತಿಗೆ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!