ಕಬ್ಜ 2ರಲ್ಲಿ ಟಾಲಿವುಡ್ ಸ್ಟಾರ್ ನಟ ಪವನ್ ಕಲ್ಯಾಣ್ ಅಭಿನಯಿಸಲಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ.
ಕನ್ನಡ ಸಿನಿಮಾಗಳಿಗೆ ತೆಲುಗಿನಲ್ಲಿ ಮಾರ್ಕೆಟ್ ಇದೆ. ಕೆಜಿಎಫ್ ಸಿನಿಮಾದ ನಂತರ ತೆಲುಗಿನಲ್ಲಿಯೂ ಕನ್ನಡ ಸಿನಿಮಾಗಳು ಭರ್ಜರಿಯಾಗಿ ಸದ್ದು ಮಾಡುತ್ತಿವೆ. ಈ ಕಾರಣಕ್ಕೆ ಪವನ್ ಕಲ್ಯಾಣ್ ಕರೆತರುವ ಪ್ರಯತ್ನ ನಡೆದಿದೆ ಎನ್ನಲಾಗಿದೆ.
ಕಬ್ಜ ಸಿನಿಮಾ ಮೊದಲ ದಿನವೇ 25 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಸಿನಿಮಾ ಬೇರೆ ಭಾಷೆಗಳಲ್ಲಿಯೂ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.
ಕಬ್ಜ ಸಿನಿಮಾದಲ್ಲಿ ಉಪೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸಿದ್ದು ನಟಿ ಶ್ರಿಯಾ ಶರಣ್ ಹೀರೋಯಿನ್. ಕಿಚ್ಚ, ಶಿವಣ್ಣ ಕೂಡಾ ಸ್ಪೆಷಲ್ ಆಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಕನ್ನಡ ಸಿನಿಮಾ ರಿಲೀಸ್ ಆಗಿದೆ.
ಚಂದ್ರು ಅವರು ನಿರ್ದೇಶನ ಮಾಡಿರುವ ಕನ್ನಡದ ಕಬ್ಜ ಸಿನಿಮಾ ಎಲ್ಲೆಡೆ ಸದ್ದು ಮಾಡುತ್ತಿದೆ. ಚಿತ್ರದಲ್ಲಿ ಶಿವಣ್ಣ ಅವರು ಕೊನೆಯ ಸೀನ್ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಸುದೀಪ್ ಕಥೆ ಹೇಳುತ್ತಾ ಹೋಗುತ್ತಾರೆ.
___

Be the first to comment