ರಾಕಿ ಸೋಮ್ಲಿ ನಿರ್ದೇಶನದ ಪಟ್ಲಿ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ.
ಚಿತ್ರಕ್ಕೆ A brutal war ಎನ್ನುವ ಅಡಿ ಬರಹವನ್ನು ನೀಡಲಾಗಿದೆ. ಯಾವುದೇ ಕಥಹಂದರವನ್ನು ಬಿಟ್ಟುಕೊಡದ ಚಿತ್ರತಂಡ ಟೈಟಲ್ ಪೋಸ್ಟರ್ ಡಿಸೈನ್ ಮೂಲಕ ಗಮನ ಸೆಳೆದಿದೆ.
ಗಧಾದಾರಿ ಹನುಮಾನ್ ಚಿತ್ರ ನಿರ್ಮಾಣ ಮಾಡಿದ್ದ ವಿರಾಬ್ ಸ್ಟುಡಿಯೋಸ್ ನ ಬಸವರಾಜ್ ಹುರಕಡ್ಲಿ ಮತ್ತು ರೇಣುಕಾ ಪ್ರಸಾದ್ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಚಿತ್ರತಂಡ ಕಥೆಯ ಮೇಲೆ ಕೆಲಸ ಮಾಡುತ್ತಿದೆ. ದೊಡ್ಡ ಮಟ್ಟದಲ್ಲಿ ಚಿತ್ರವನ್ನು ನಿರ್ಮಾಣ ಮಾಡಲು ಚಿತ್ರ ತಂಡ ಮುಂದಾಗಿದೆ.
ಗಧಾದಾರಿ ಹನುಮಾನ್ ಚಿತ್ರದ ರವಿಕಿರಣ್ ಅವರು ಈ ಬಾರಿ ಪ್ಯಾನ್ ಇಂಡಿಯಾ ಚಿತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ. ಗಧಾದಾರಿ ಹನುಮಾನ್ ಚಿತ್ರದ ಬಿಡುಗಡೆ ಬಳಿಕ ಪಟ್ಲಿ ಚಿತ್ರ ಸೆಟ್ಟೇರಲಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ.
ಪಟ್ಲಿ ಚಿತ್ರದ ಬಗ್ಗೆ ಚಿತ್ರತಂಡ ಹೆಚ್ಚಿನ ಮಾಹಿತಿಯನ್ನು ನೀಡಲು ನಿರಾಕರಿಸಿದೆ. ಚಿತ್ರಕ್ಕೆ ಅಧಿಕೃತ ಚಾಲನೆ ಕೊಡುವ ಸಂದರ್ಭದಲ್ಲಿ ಹೆಚ್ಚಿನ ಮಾಹಿತಿ ಲಭ್ಯವಾಗುವ ನಿರೀಕ್ಷೆ ಇದೆ. ಅಲ್ಲಿವರೆಗೆ ಸಿನಿಮಾ ಪ್ರಿಯರು ಕಾಯಬೇಕಿದೆ.





Be the first to comment