ಸೆಂಚುರಿ ಸ್ಟಾರ್ ಡಾ ಶಿವರಾಜಕುಮಾರ್ ಪತಿ ಬೇಕು.ಕಾಂ ಚಿತ್ರದ ಸುಮಧುರ ಹಾಗೂ ಭಾವನೆಗಳು ತುಂಬಿದ ಹಾಡು `ಯಾಕಪ್ಪಾ ದೇವರೇ ಅಡೂಸ್ತ್ಯ ಕ್ಯಾಬರೆ…ಅಷ್ಟು ಇಷ್ಟನಾ ಹೆಣ್ಮಕ್ಕಳ ತೊಂದರೆ…..’ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ಚಿತ್ರದ ಹೂರಣವನ್ನು ಅರ್ಥ ಮಾಡಿಕೊಂಡು ಹೇಳಿದ ಶಿವಣ್ಣ ಈ ಚಿತ್ರ ಎಲ್ಲರೂ ನೋಡುವ ಅಂಶ ಇಟ್ಟುಕೊಂಡಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.ಶಿವಣ್ಣ ಅವರು `ರುಸ್ತುಂ’ ಸೆಟ್ಟಿನಲ್ಲಿ ಬಿಡುಗಡೆ ಮಾಡಿದ ಹಾಡು ಸಾಮಾಜಿಕ ಜಾಲತಾಣದಲ್ಲಿ ಈಗಾಗಲೆ 50000 ಹಿಟ್ಸ್ ಪಡೆದುಕೊಂಡಿದೆ. ಚಿತ್ರದ ಟ್ರೈಲರ್ ಕಳೆದ ತಿಂಗಳು 26 ರಂದು ಸುದೀಪ್ ಅವರು ಬಿಡುಗಡೆ ಮಾಡಿದ್ದು 4 ಲಕ್ಷ ನೋಡುಗರನ್ನು ಅಂತರ್ಜಾಲದಲ್ಲಿ ಸಂಪಾದಿಸಿಕೊಂಡಿದೆ.
ಬೆಂಗಳೂರಿನ ಸುತ್ತ ಮುತ್ತಲೇ ನಾಯಕಿ ಶೀತಲ್ ಶೆಟ್ಟಿ ಅವರ ಮೇಲೆ ಚಿತ್ರೀಕರಣ ಆಗಿರುವ ಈ ಹಾಡನ್ನು ಶ್ರುತಿ ಪ್ರಭು ಹಾಡಿರುವ ಯಾಕಪ್ಪಾ ದೇವರೇ….ಹಾಡನ್ನು ನಾಗರ್ಜುನ ಶರ್ಮ ರಚಿಸಿದ್ದಾರೆ. ಇದು ಹೆಣ್ಣುಮಕ್ಕಳ ಜೀವನದ ನೋವು ವ್ಯಕ್ತ ಮಾಡುತ್ತದೆ. ಕೌಶಿಕ್ ಹರ್ಷ ಈ ಚಿತ್ರಕ್ಕೆ ಸಂಗೀತ ಒದಗಿಸಿದ್ದಾರೆ.
ರಾಕೇಶ್ ನಿರ್ದೇಶಕ ಅಷ್ಟೇ ಅಲ್ಲದೆ ಜಂಟಿ ನಿರ್ಮಾಪಕರಾಗಿ ಶ್ರೀನಿವಾಸ್ ಹಾಗೂ ಮಂಜುನಾಥ್ ಜೊತೆ ನಿರ್ಮಾಣ ಮಾಡಿದ್ದಾರೆ. ಯೋಗಿ ಛಾಯಾಗ್ರಾಹಕರು.
ಶೀತಲ್ ಶೆಟ್ಟಿ ಈ ಚಿತ್ರದ ಪ್ರಧಾನ ಭೂಮಿಕೆ. ಹರಿಣಿ ಹಾಗೂ ಕೃಷ್ಣ ಅಡಿಗ ಪÇೀಷಕ ಕಲಾವಿದರುಗಳು. ಮುಂದಿನ ತಿಂಗಳು ಈ ಚಿತ್ರ ಬಿಡುಗಡೆ ಆಗುವ ಸಾಧ್ಯತೆ ಇದೆ.
Be the first to comment