pathan ‘ಪಠಾಣ್’ ಚಿತ್ರದ ಟ್ರೈಲರ್ ಆನ್‌ಲೈನ್‌ನಲ್ಲಿ ಲೀಕ್

ಶಾರುಖ್ ಖಾನ್‌ ನಟನೆಯ ‘ಪಠಾಣ್’ ಚಿತ್ರದ ಟ್ರೈಲರ್ ಆನ್‌ಲೈನ್‌ನಲ್ಲಿ ಲೀಕ್ ಆಗಿದೆ.

‘ಪಠಾಣ್’ ಹಾಡಿನ ವಿವಾದದ ಬಳಿಕ ಟ್ರೈಲರ್‌ ರಿಲೀಸ್‌ಗೆ ಮುಹೂರ್ತ ಫಿಕ್ಸ್ ಮಾಡಲಾಗಿತ್ತು. ಜನವರಿ 5ಕ್ಕೆ ದೀಪಿಕಾ ಪಡುಕೋಣೆ ಹುಟ್ಟುಹಬ್ಬ ಇದ್ದು, ಇದೇ ದಿನದಂದು ಟ್ರೈಲರ್ ರಿಲೀಸ್ ಮಾಡಲು ಮುಂದಾಗಿತ್ತು. ಈ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಕೌಂಟ್‌ಡೌನ್ ಶುರು ಮಾಡಿತ್ತು.

ಇನ್ನೇನು ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಉಳಿದಿರುವಾಗಲೇ ಆನ್‌ಲೈನ್‌ನಲ್ಲಿ ಟ್ರೈಲರ್‌ನ ಕೆಲವು ತುಣುಕುಗಳು ಲೀಕ್ ಆಗಿವೆ.

ಲೀಕ್ ಆಗಿರೋ ವಿಡಿಯೋದಲ್ಲಿ ಶಾರುಖ್ ಖಾನ್ ಫುಲ್ ಆಕ್ಷನ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿಕ್ಕದೊಂದು ತುಣುಕಿನಲ್ಲಿ ಶಾರುಖ್ ಖಾನ್ ಟ್ರೈನ್‌ನಲ್ಲಿ ಹೆವಿ ಫೈಟ್ ಮಾಡುತ್ತಿರುವ ದೃಶ್ಯವಿದೆ. ಈ ಫೈಟ್ ಸೀಕ್ವೆನ್ಸ್ ನೋಡಿ ಪ್ರೇಕ್ಷಕರು ಫುಲ್ ಫಿದಾ ಆಗಿದ್ದಾರೆ. ಫುಲ್ ಟ್ರೈಲರ್‌ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.

ಸಿನಿಮಾದಲ್ಲಿ ಶಾರುಖ್ ಖಾನ್ ‘ರಾ’ ಏಜೆಂಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ ಶಾರುಖ್ ಪಾತ್ರದ ಕೋಡ್ ನೇಮ್ ‘ಪಠಾಣ್’ ಎನ್ನಲಾಗಿದೆ. ಹೈ ಲೆವೆಲ್ ಆಕ್ಷನ್ ಥ್ರಿಲ್ಲರ್ ಸೀಕ್ವೆನ್ಸ್‌ ಈ ಸಿನಿಮಾದಲ್ಲಿದ್ದು, ಜನವರಿ 25ರಂದು ಸಿನಿಮಾ ವಿಶ್ವದಾದ್ಯಂತ ಬಿಡುಗಡೆ ಮಾಡುವುದಕ್ಕೆ ಸಜ್ಜಾಗಿ ನಿಂತಿದೆ. ಹಿಂದಿ ಸೇರಿದಂತೆ ತೆಲುಗು, ತಮಿಳು ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.

ಡಿಸೆಂಬರ್ 12ರಂದು ‘ಪಠಾಣ್’ ಸಿನಿಮಾದ “ಭೇಷರಂ ರಂಗ್…” ಬಿಡುಗಡೆಯಾಗಿತ್ತು. ಈ ಹಾಡಿನಲ್ಲಿ ದೀಪಿಕಾ ಪಡುಕೋಣೆ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದರು. ಕೇಸರಿ ಬಣ್ಣದ ಬಿಕಿನಿಯಲ್ಲಿ ಹೆಜ್ಜೆ ಹಾಕಿದ್ದು ಹಲವರ ಕೋಪಕ್ಕೆ ಕಾರಣ ಆಗಿತ್ತು. ಹಿಂದೂ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆರೋಪ ಮಾಡಲಾಗಿತ್ತು. ಇನ್ನೂ ಕೆಲವರು ಇಲ್ಲಿ ಅಶ್ಲೀಲ ದೃಶ್ಯಗಳಿವೆ ಎಂದು ದೂರಿದ್ದರು.
____

Be the first to comment

Leave a Reply

Your email address will not be published. Required fields are marked *

Translate »
error: Content is protected !!