Pathan ಪಠಾಣ್‌ ಬಾಯ್ಕಾಟ್‌ ಎಂದವರಿಗೆ ಪ್ರಕಾಶ್ ರೈ ಚಾಟಿ

ಹಿಂದಿ ಚಿತ್ರ ಪಠಾಣ್‌ ಪರ ಮಾತನಾಡಿರುವ ಬಹುಭಾಷಾ ನಟ ಪ್ರಕಾಶ್‌ ರೈ ಬಾಯ್ಕಾಟ್‌ ಎಂದವರಿಗೆ ಮಾತಿನ ಚಾಟಿ ಬೀಸಿದ್ದಾರೆ.

ಈ ಕುರಿತು ಟ್ಟೀಟ್‌ ಮಾಡಿರುವ ಅವರು, ʼಹೇ ಬಾಯ್ಕಾಟ್‌ ಬಿಗೋಟ್ಸ್.. ಶ್‌.. #ಹಲ್ಲಾಬೋಲ್ ಕಿಂಗ್ ಖಾನ್ ಎಸ್‌ಆರ್‌ಕೆ ಈಸ್‌ ಬ್ಯಾಕ್‌, ಕೀಪ್‌ ರಾಕಿಂಗ್‌ ದೀಪಿಕಾʼ ಎಂದು ಬರೆದು ಶಾರುಖ್‌ ಖಾನ್‌ ಹಾಗೂ ದೀಪಿಕಾ ಪಡುಕೋಣೆ ಅವರನ್ನು ಟ್ಯಾಗ್‌ ಮಾಡಿದ್ದಾರೆ.

ʼಪಠಾಣ್‌ʼ ಸಿನಿಮಾದ ಬೇಷರಂ ರಂಗ್‌ ಹಾಡು ಬಿಡುಗಡೆಯಾದ ಬೆನ್ನಲ್ಲೇ ವಿರೋಧ ವ್ಯಕ್ತವಾಗಿತ್ತು. ಹಾಡಿನಲ್ಲಿ ದೀಪಿಕಾ ತೊಟ್ಟಿದ್ದ ಕೇಸರಿ ಬಿಕಿನಿ ವಿವಾದ ಸೃಷ್ಟಿಸಿತ್ತು. ಚಿತ್ರವನ್ನು ಬಹಿಷ್ಕಾರ ಮಾಡುವಂತೆ ಹಿಂದೂ ಸಂಘಟನೆಗಳು ಸೇರಿದಂತೆ ಕೆಲ ರಾಜಕೀಯ ನಾಯಕರು ಧ್ವನಿ ಎತ್ತಿದ್ದರು. ಸೆನ್ಸಾರ್‌ ಮಂಡಳಿಯೂ ಚಿತ್ರದ ಕೆಲ ಸೀನ್‌ಗಳಿಗೆ ಕತ್ತರಿ ಹಾಕುವಂತೆ ಸೂಚನೆ ನೀಡಿತ್ತು.

ನಿನ್ನೆ ʼಪಠಾಣ್‌ʼ ತೆರೆ ಮೇಲೆ ಅಪ್ಪಳಿಸಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಪಠಾಣ್ ಭಾರತದಲ್ಲಿ ಮೊದಲ ದಿನವೇ 54 ಕೋಟಿ ಗಳಿಸಿದೆ ಎಂದು ವಿಶ್ಲೇಷಕ ರಮೇಶ್ ಬಾಲಾ ಟ್ವೀಟ್ ಮಾಡಿದ್ದಾರೆ.

ಶಾರುಖ್ ಖಾನ್ ಅಭಿನಯದ ʼಪಠಾಣ್ʼ ಅಭಿಮಾನಿಗಳ ನಿರೀಕ್ಷೆಯನ್ನು ಈಡೇರಿಸಿದೆ. ಎಸ್‌ಆರ್‌ಕೆ ಪಠಾಣ್‌ ಮೂಲಕ ಕಮ್‌ಬ್ಯಾಕ್‌ ಮಾಡಿದ್ದಾರೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಚಿತ್ರ ಈಗಾಗಲೇ 50 ಕೋಟಿ ಗಡಿ ದಾಟುವ ಮೂಲಕ ಗ್ರ್ಯಾಂಡ್‌ ಓಪನಿಂಗ್ ಪಡೆದುಕೊಂಡಿದೆ.
_

Be the first to comment

Leave a Reply

Your email address will not be published. Required fields are marked *

Translate »
error: Content is protected !!