Pathan ಶಾರುಖ್ ಕಾಲೆಳೆದ ಆರ್ ಜಿವಿ

ಯಶ್ 500 ಕೋಟಿ ರೂ. ಬಿಸ್ನೆಸ್ ಮಾಡುವಾಗ ಪಠಾಣ್​ ಯಶಸ್ಸು ಯಾವ ಲೆಕ್ಕ ಎಂದು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಶಾರುಖ್ ಕಾಲೆಳೆದಿದ್ದಾರೆ.

‘ಬಾಲಿವುಡ್​​​ನಲ್ಲಿ ಯಾರಿಗೂ ಗೊತ್ತಿಲ್ಲದ ವ್ಯಕ್ತಿ ಯಶ್ ಅವರು 500 ಕೋಟಿ ರೂಪಾಯಿ ಬಿಸ್ನೆಸ್ (ಕೆಜಿಎಫ್ 2) ಮಾಡುವಾಗ ಶಾರುಖ್ ಖಾನ್ ಅವರು 500 ಕೋಟಿ ಕಮಾಯಿ ಮಾಡುವುದರಲ್ಲಿ ವಿಶೇಷ ಏನಿದೆ?’ ಎಂದು ರಾಮ್​ ಗೋಪಾಲ್ ವರ್ಮಾ ಪ್ರಶ್ನೆ ಮಾಡಿದ್ದಾರೆ.

‘ಸ್ಟಾರ್​ಡಂ ಅನ್ನೋದು ಮೊದಲಿನ ರೀತಿ ಇಲ್ಲ. ಸಿನಿಮಾ ಯಾವ ರೀತಿ ಇದೆ ಅನ್ನೋದು ಮಾತ್ರ ಮುಖ್ಯವಾಗುತ್ತದೆ. ಯಶ್​ಗಿಂತ ಶಾರುಖ್​ ಖಾನ್ ಅವರದ್ದು ದೊಡ್ಡ ಹೆಸರು. ಆದರೆ ಯಶ್ ಕೂಡ ಬಿಸ್ನೆಸ್ ಮಾಡುತ್ತಾರೆ. ಕಾಂತಾರ, ಪುಷ್ಪದಂತಹ ಸಿನಿಮಾ ಕೂಡ ದೊಡ್ಡ ಗೆಲುವು ಕಾಣುತ್ತದೆ. ಹೀಗಾಗಿ ಸ್ಟಾರ್​​ಡಂ ಅನ್ನೋದು ಮೊದಲಿನ ರೀತಿಯೇ ಇದೆ ಎಂದು ನನಗೆ ಅನಿಸುತ್ತಿಲ್ಲ’ ಎಂದಿದ್ದಾರೆ.

“ಹಿಂದಿಯಲ್ಲಿ ಯಾರಿಗೂ ಅಲ್ಲೂ ಅರ್ಜುನ್ ಗೊತ್ತಿಲ್ಲ. ಹಿಂದೆ ಇದ್ದಂತೆ ಸ್ಟಾರ್ಢಮ್ ಇದೆ ಅನ್ನೋದು ನನಗೀಗ ಅನುಮಾನ” ಎಂದು ‘ಪಠಾಣ್’ ಗೆದ್ದ ಬೆನ್ನಲ್ಲೇ ರಾಮ್ ಗೋಪಾಲ್ ವರ್ಮಾ ಟೀಕೆ ಮಾಡಿದ್ದಾರೆ.

ಶಾರುಖ್ ಖಾನ್ ನಟನೆಯ ‘ಪಠಾಣ್​’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಏಳು ದಿನಕ್ಕೆ 300 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!