ನಟಿ ಪಾರ್ವತಿ ನಾಯರ್ ಅವರು ಚೆನ್ನೈನಲ್ಲಿ ಉದ್ಯಮಿ ಅಶ್ರೀತ್ ಜೊತೆ ಗುರು ಹಿರಿಯರ ಸಮ್ಮುಖದಲ್ಲಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ದಳಪತಿ ವಿಜಯ್ ನಟನೆಯ ‘ದಿ ಗೋಟ್’ ಸಿನಿಮಾದಲ್ಲಿ ನಟಿಸಿದ್ದ ಪಾರ್ವತಿ ನಾಯರ್ ಬಹುಕಾಲದ ಗೆಳೆಯ ಅಶ್ರೀತ್ ಜೊತೆ ಗುರು ಹಿರಿಯರ ಸಮ್ಮುಖದಲ್ಲಿ ಅದ್ದೂರಿಯಾಗಿ ಹಸೆಮಣೆಯೆರಿದ್ದಾರೆ. ಪಾರ್ವತಿ ನಾಯರ್ ಮದುವೆ ಸಂಭ್ರಮದಲ್ಲಿ ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರೀಶ್ ಸೇರಿದಂತೆ ಅನೇಕರು ಭಾಗಿಯಾಗಿ ಹೊಸ ಜೋಡಿಗೆ ಶುಭ ಹಾರೈಸಿದ್ದಾರೆ.
ಕಳೆದ ವಾರ ಪಾರ್ವತಿ ನಾಯರ್ ನಿಶ್ಚಿತಾರ್ಥ ಫೋಟೋ ಹಂಚಿಕೊಂಡು ಮದುವೆ ರಿವೀಲ್ ಮಾಡಿದ್ದರು. ಭಾವಿ ಪತಿ ಜೊತೆಗಿನ ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿ ತಾವು ಎಂಗೇಜ್ ಆಗಿರೋದಾಗಿ ಅಧಿಕೃತವಾಗಿ ತಿಳಿಸಿದ್ದರು.
ಪಾರ್ವತಿ ನಾಯರ್ ಅವರು ಕನ್ನಡದ ಸ್ಟೋರಿ ಕಥೆ, ಕಿಶೋರ್ ನಟನೆಯ ‘ವಾಸ್ಕೋಡಿಗಾಮ’ ಸಿನಿಮಾದಲ್ಲಿ ಪಾರ್ವತಿ ನಾಯರ್ ನಟಿಸಿದ್ದಾರೆ. ಪಾರ್ವತಿ ನಾಯರ್ ಫೆ.7ರಂದು ತೆರೆಕಂಡ ಕನ್ನಡದ ‘ಮಿಸ್ಟರ್ ರಾಣಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಮಲಯಾಳಂ, ಪಾರ್ವತಿ ನಾಯರ್ ತೆಲುಗು, ತಮಿಳು ಸಿನಿಮಾಗಳಲ್ಲಿ ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ.

Be the first to comment