ಚಿತ್ರದ ಹಾಡುಗಳು ಜನರಿಗೆ ಮೊದಲ ಆಹ್ವಾನಪತ್ರಿಕೆ ಎನ್ನುವಂತೆ ಕ್ರೈಮ್, ಥ್ರಿಲ್ಲರ್ ಕತೆ ಹೊಂದಿರುವ ‘ಡಾಟರ್ ಆಫ್ ಪಾರ್ವತಮ್ಮ’ ಸಿನಿಮಾದ ಧ್ವನಿಸಾಂದ್ರಿಕೆಯು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಅನಾವರಣಗೊಂಡಿತು. ಎರಡು ಗೀತೆಗಳ ಪೈಕಿ ಒಂದು ಹಾಡಿಗೆ ಸಾಹಿತ್ಯ ರಚಿಸಿರುವ ಡಾಲಿಧನಂಜಯ್ ಟ್ರೈಲರ್ ಬಿಡುಗಡೆ ಮಾಡಿ, ನಾನು ಸಾಹಿತಿ ಅಲ್ಲ. ನಟನೆಯಲ್ಲಿ ಬಿಡುವು ಇದ್ದಾಗ ಹಾಗೇ ಸುಮ್ಮನೆ ಮನಸ್ಸಿನಲ್ಲಿರುವ ಪದಗಳನ್ನು ಪೇಪರಿನಲ್ಲಿ ಬರದುಕೊಳ್ಳುತ್ತಿದ್ದೆ ಎಂದು ಹೇಳಿದರು.
ಶೀರ್ಷಿಕೆ ಪಾರ್ವತಮ್ಮ ಇದ್ದರೂ ಇದು ಹರಿಪ್ರಿಯಾ ಸಿನಿಮಾವೆಂದು ಅಮ್ಮನಾಗಿ ಕಾಣಿಸಿಕೊಂಡಿರುವ ಸುಮಲತಾಅಂಬರೀಷ್ ಬಣ್ಣಿಸಿದರು. ಮಾತು ಮುಂದುವರೆಸುತ್ತಾ ಐದು ಭಾಷೆಗಳಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರೂ, ಮಧ್ಯಮ ವರ್ಗದ ತಾಯಿಯಾಗಿ ಥ್ರಿಲ್ಲರ್ ಜಾನರ್‍ನಲ್ಲಿ ನಟಿಸಿದ್ದು ಇದೇ ಮೊದಲಾಗಿದೆ. ತಾಯಿ ಮಗಳ ದೃಶ್ಯಗಳು ಸಹಜವಾಗಿ ಮೂಡಿಬಂದಿದೆ. ನಮ್ಮ ಕಾಲದಲ್ಲಿ ಚಿತ್ರರಂಗ ಸುಲಭವಾಗಿತ್ತು. ಈಗ ತುಂಬ ಬದಲಾವಣೆ ಆಗಿದೆ. ಹರಿಪ್ರಿಯಾ 25ನೇ ಚಿತ್ರವೆಂಬುದು ಮೈಲಿಗಲ್ಲಾಗಿದೆ. ಬಂಡವಾಳ ಹೂಡುವವರಲ್ಲಿ ಶ್ರದ್ದೆ, ಆಸಕ್ತಿ ಇಲ್ಲವೆಂದರೆ ಏನು ಮಾಡೋಕೆ ಆಗೋಲ್ಲವೆಂದು ಅಭಿಪ್ರಾಯಪಟ್ಟರು.
ಇದಕ್ಕೂ ಮುನ್ನ ಮೈಕ್ ತೆಗೆದುಕೊಂಡ ಹರಿಪ್ರಿಯಾ, ಇಂದು ರಿಯಲ್,ರೀಲ್ ಅಮ್ಮ ಇರುವುದರಿಂದ ದುಗುಡ ಆಗುತ್ತಿದೆ. ಸಂಗೀತದಿಂದ ಚಿತ್ರವನ್ನು ಮೇಲಕ್ಕೆ ಎತ್ತಬಹುದು. ಇಲ್ಲಿಯವರೆಗೂ 37 ಚಿತ್ರಗಳಲ್ಲಿ ನಟಿಸಲಾಗಿದೆ. ಕನ್ನಡದಲ್ಲಿ 25 ಆಗಿದೆ ಅಂತ ನಿರ್ದೇಶಕರು ಲೆಕ್ಕ ಹಾಕಿರುವುದು ಸಂಭ್ರಮಿಸುವ ವಿಷಯವಾಗಿದೆ. ಪವರ್‍ಫುಲ್ ಟೈಟಲ್ ಆಗಿರುವುದರಿಂದ ಜವಬ್ದಾರಿ ಜಾಸ್ತಿ ಇತ್ತು. ಅಮ್ಮ ನಟಿಸಿದ ನಂತರ ಚಿತ್ರಕ್ಕೆ ನ್ಯಾಯ ಸಂದಿದೆ. ತನಿಖಾದಿಕಾರಿ ವೈದ್ಯಳಾಗಿ ಖಡಕ್ ಆಗಿ ಪೋಲೀಸ್ ಇಲಾಖೆಯಲ್ಲಿ ಮಹಿಳಾ ಅಧಿಕಾರಿಗಳು ಹೇಗೆ ಬುದ್ದಿವಂತಿಕೆಯಿಂದ ಅಪರಾದಿಗಳನ್ನು ಭೇದಿಸುವಂತೆ ಇದರಲ್ಲಿ ತೋರಿಸಲಾಗಿದೆ. ಕೃತಕವಾಗಿ ಫೈಟ್ ಮಾಡಲಾಗಿ, ನಾಯಕನನ್ನು ರಕ್ಷಣೆ ಮಾಡುತ್ತೇನೆ. 23 ಮತ್ತು 24 ಎರಡು ದಿನಗಳು ಗೆಲುವು ಅಗಲಿ ಎಂದು ಮೇಡಂರನ್ನು ನೋಡುತ್ತಾ ಮಾತಿಗೆ ವಿರಾಮ ಹಾಕಿದರು.
ಕಲಾವಿದರಾದ ಸೂರಜ್‍ಗೌಡ, ಪ್ರಭು, ತರಂಗವಿಶ್ವ, ಸಂಗೀತ ನಿರ್ದೇಶಕ ಮಿಥುನ್‍ಮುಕುಂದನ್, ಕತೆ,ಚಿತ್ರಕತೆ,ನಿರ್ದೇಶಕ ಶಂಕರ್.ಜೆ ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಶಶಿಧರ್.ಕೆ., ವಿಜಯಲಕ್ಷೀಕೃಷ್ಣಗೌಡ, ಸಂದೀಪ್‍ಶಿವಮೊಗ್ಗ ಮತ್ತು ಶ್ವೇತಮಧುಸೂಧನ್ ನಿರ್ಮಾಪಕರುಗಳಾಗಿ ಹೊಸ ಅನುಭವ. ವಿಜಯ್ ಸಿನಿಮಾಸ್ ಮುಖಾಂತರ ಸುಮಾರು 150 ಕೇಂದ್ರಗಳಲ್ಲಿ ಮೇ ನಾಲ್ಕನೆ ವಾರದಂದು ಅಮ್ಮ-ಮಗಳ ಬಾಂದವ್ಯವನ್ನು ನೋಡಬಹುದು.
Be the first to comment