ಕನ್ನಡ ಸಿನಿಮಾ #ಪಾರುಪಾರ್ವತಿ 2025 ರ ಅತಿದೊಡ್ಡ ಯಶಸ್ಸಿನ ಕಥೆಗಳಲ್ಲಿ ಒಂದಾಗಿ ಹೊರಹೊಮ್ಮುತ್ತಿದೆ. ಈ ಸಿನಿಮಾ ಬಿಡುಗಡೆಯಾಗಿ ಮೂರನೇ ವಾರಕ್ಕೆ ಕಾಲಿರಿಸಿದ್ದು, ಇದೀಗ ₹1.8 ಕೋಟಿ ಗಳಿಸುವ ಮೂಲಕ ಗಲ್ಲಾಪೆಟ್ಟಿಗೆಯಲ್ಲಿ ತನ್ನ ಪ್ರಾಬಲ್ಯವನ್ನು ಸಾಬೀತುಪಡಿಸಿದೆ.
ಪ್ರೇಕ್ಷಕರು ಈ ಚಿತ್ರವನ್ನು ಈ ವರ್ಷದ ಅತ್ಯುತ್ತಮ ಕನ್ನಡ ಚಿತ್ರಗಳಲ್ಲಿ ಒಂದು ಎಂದು ಶ್ಲಾಘಿಸಿದ್ದಾರೆ. ಚಿತ್ರದ ಆಕರ್ಷಕ ಕಥಾವಸ್ತು, ಅದ್ಭುತ ಛಾಯಾಗ್ರಹಣ ಮತ್ತು ಮಧುರವಾದ ಸಂಗೀತವನ್ನು ಪ್ರೇಕ್ಷಕರು ಮತ್ತು ವಿಮರ್ಶಕರು ಮುಕ್ತಕಂಠದಿಂದ ಹೊಗಳಿದ್ದಾರೆ.
ಮೊದಲ ವಾರದಿಂದಲೇ #ಪಾರುಪಾರ್ವತಿ ಚಿತ್ರವನ್ನು ವಿಮರ್ಶಕರು ಮತ್ತು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಅನೇಕರು ಇದರ ಕಥೆ ಹೇಳುವ ಶೈಲಿ ಮತ್ತು ದೃಶ್ಯಗಳನ್ನು ಅಂತರಾಷ್ಟ್ರೀಯ ಸಿನಿಮಾಗಳಿಗೆ ಹೋಲಿಸಿದ್ದಾರೆ. ಚಿತ್ರದ ಹೊಸ ದೃಷ್ಟಿಕೋನ ಮತ್ತು ಭಾವನಾತ್ಮಕ ಆಳವನ್ನು ಶ್ಲಾಘಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಸಿನಿಮಾ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
ಈ ಚಿತ್ರವು EIGHTEEN THIRTY SIX ಪಿಕ್ಚರ್ಸ್ ಬ್ಯಾನರ್ ನಡಿ ನಿರ್ಮಿಸಿರುವ ಚೊಚ್ಚಲ ಚಿತ್ರವಾಗಿದೆ. ಪಿ ಬಿ ಪ್ರೇಮನಾಥ್ ನಿರ್ಮಾಣದಲ್ಲಿ, ರೋಹಿತ್ ಕೀರ್ತಿ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ದೀಪಿಕಾ ದಾಸ್, ಪೂನಂ ಸರ್ ನಾಯಕ್, ಫವಾಸ್ ಅಶ್ರಫ್ ಸೇರಿದಂತೆ ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ.
ಛಾಯಾಗ್ರಾಹಕ ಅಭಿನ್ ರಾಜೇಶ್ ಅವರ ಅದ್ಭುತ ದೃಶ್ಯಗಳು, ಜೈಸಲ್ಮೇರ್‌ನ ಮರುಭೂಮಿಗಳಿಂದ ಹಿಡಿದು ನೀತಿ ಕಣಿವೆಯ ಹಿಮಚ್ಛಾದಿತ ಶಿಖರಗಳವರೆಗೆ ಪ್ರೇಕ್ಷಕರನ್ನು ಬೆರಗುಗೊಳಿಸುತ್ತದೆ. ಸಿ.ಕೆ. ಕುಮಾರ್ ಅವರ ಸಂಕಲನ ಮತ್ತು ಆರ್. ಹರಿ ಅವರ ಸಂಗೀತ ಚಿತ್ರಕ್ಕೆ ಮತ್ತಷ್ಟು ಮೆರುಗು ನೀಡಿದೆ.
ಈ ಚಿತ್ರದ ಯಶಸ್ಸು ಈ ಚಿತ್ರದ ನಿರ್ಮಾಣ ಸಂಸ್ಥೆಗೆ ಇನ್ನಷ್ಟು ಒಳ್ಳೆಯ ಚಿತ್ರಗಳನ್ನು ನಿರ್ಮಾಣ ಮಾಡಲು ಪ್ರೇರಣೆ ನೀಡಿದೆ ಎಂದು ಚಿತ್ರತಂಡದ ಅಭಿಪ್ರಾಯವಾಗಿದೆ.

Be the first to comment