ಸತೀಶ್ ಜೊತೆ ‘ಪರಿಮಳ ಲಾಡ್ಜ್’ನಲ್ಲಿ ಕಾಣಿಸಿಕೊಂಡ ನಟಿ ಸುಮನ್ ರಂಗನಾಥ್

ನಿರ್ದೇಶಕ ವಿಜಯ್ ಪ್ರಸಾದ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಪರಿಮಳ ಲಾಡ್ಜ್ ನಲ್ಲಿ ಸತೀಶ್ ಮತ್ತು ಯೋಗಿ ಇಬ್ಬರು ಸಲಿಂಗ ಕಾಮಿಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೆ ಚಿತ್ರದ ಟೀಸರ್ ರಿಲೀಸ್ ಆಗಿದ್ದು ಟೀಸರ್ ನಲ್ಲಿ ಇಬ್ಬರನ್ನು ಸಲಿಂಗ ಕಾಮಿಗಳು ಎಂದು ಪರಿಚಯಿಸಲಾಗಿದೆ.
 
ಸಿದ್ಲಿಂಗು, ನೀರ್ ದೋಸೆ ಸಿನಿಮಾಗಳಂತೆ ಪರಿಮಳ ಲಾಡ್ಜ್ ಸಿನಿಮಾದಲ್ಲು ಒಂದಿಷ್ಟು ಪೋಲಿ ಸಂಭಾಷಣೆಯ ಜೊತೆಗೆ ಒಂದೊಳ್ಳೆ ಸಂದೇಶವನ್ನು ಹೇಳುವ ಪ್ರಯತ್ನ ಮಾಡುತ್ತಿದ್ದಾರೆ ನಿರ್ದೇಶಕ ವಿಜಯ್ ಪ್ರಸಾದ್. ಸದ್ಯ ರಿಲೀಸ್ ಆಗಿರುವ ಟ್ರೈಲರ್ ನಲ್ಲಿ ಪೋಲಿ ಮಾತುಗಳ ಜೊತೆಗೆ ಪಾತ್ರಗಳ ಪರಿಚಯ ಮಾಡಿಸಿದ್ದಾರೆ.
ಇದು ಪಕ್ಕ ವಿಜಯ್ ಪ್ರಸಾದ್ ಫ್ಲೇವರ್ ನ ಸಿನಿಮಾ ಇದಾಗಿದ್ದು, ಪರಿಮಳ ಲಾಡ್ಜ್ ನಲ್ಲಿ ನೀನಾಸಂ ಸತೀಶ್ ಮತ್ತು ಯೋಗಿಯ ಜೊತೆಗೆ ನಟಿ ಸುಮನ್ ರಂಗನಾಥ್, ದತ್ತಣ್ಣ, ಬುಲೆಟ್ ಪ್ರಕಾಶ್ ಸೇರಿದಂತೆ ಅನೇಕರಿದ್ದಾರೆ. ಇತ್ತೀಚಿಗಷ್ಟೆ ಪರಿಮಳ ಲಾಡ್ಜ್ ಟೀಸರ್ ಅನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
This Article Has 1 Comment
  1. Pingback: Power to Choose

Leave a Reply

Your email address will not be published. Required fields are marked *

Translate »
error: Content is protected !!