Parimala D’Souza: ಸೆಪ್ಟಂಬರ್ 15ಕ್ಕೆ ‘ಪರಿಮಳ ಡಿಸೋಜ’ ತೆರೆಗೆ

ಹಿರಿಯ ನಟಿ ಭವ್ಯ ಮುಖ್ಯ ಭೂಮಿಕೆಯಲ್ಲಿರುವ ಪರಿಮಳ ಡಿಸೋಜ ಚಿತ್ರ ಸೆಪ್ಟೆಂಬರ್ 15ರಂದು ಬಿಡುಗಡೆ ಆಗಲಿದೆ.

ಡಾ. ಗಿರಿಧರ್ ಎಚ್ ಟಿ ಅವರು ನಿರ್ದೇಶನ ಮಾಡಿರುವ ಬಹು ತಾರಾಗಣದ ಈ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಸೆನ್ಸರ್ ಮಂಡಳಿ ಈ ಚಿತ್ರವನ್ನು ವೀಕ್ಷಿಸಿ ಯು/ ಎ ಪ್ರಮಾಣ ಪತ್ರವನ್ನು ನೀಡಿದೆ. ಈಗಾಗಲೇ ಚಿತ್ರದ ಟ್ರೈಲರ್ ಬಿಡುಗಡೆ ಆಗಿದ್ದು 10 ಲಕ್ಷಕ್ಕೂ ಹೆಚ್ಚು ಜನರು ಟ್ರೈಲರ್ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚಿತ್ರದಲ್ಲಿ ಕೋಮಲ ಬನವಾಸೆ, ಶ್ರೀನಿವಾಸ್ ಪ್ರಭು, ಶ್ವೇತಾ ರಮೇಶ್, ವಿನೋದ್ ಶೇಷಾದ್ರಿ, ಪೂಜಾ ರಾಮಚಂದ್ರ, ಉಗ್ರಂ ರೆಡ್ಡಿ, ಲಕ್ಷ್ಮಣ್ ಗೌಡ ಸೇರಿದಂತೆ ಹಲವರು ನಟಿಸಿದ್ದಾರೆ.

ಡಾ. ವಿ ನಾಗೇಂದ್ರ ಪ್ರಸಾದ್, ಜಯಂತ್ ಕಾಯ್ಕಿಣಿ, ಕೆ ಕಲ್ಯಾಣ್ ಅವರು ಚಿತ್ರಕ್ಕೆ ಹಾಡುಗಳನ್ನು ಬರೆದಿದ್ದಾರೆ. ಕ್ರಿಷ್ಟೋಫರ್ ಜೇಸನ್ ಅವರು ಸಂಗೀತ ನೀಡಿದ್ದಾರೆ. ಕೆ ರಾಮ್ ಅವರ ಛಾಯಾಗ್ರಹಣ, ಸಂಜೀವ್ ರೆಡ್ಡಿ ಅವರ ಸಂಕಲನ ಚಿತ್ರಕ್ಕಿದೆ.

ವಿಲೇಜ್ ರೋಡ್ ಫಿಲಂಸ್ ಸಂಸ್ಥೆ ಲಾಂಛನದಲ್ಲಿ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ವಿನೋದ್ ಶೇಷಾದ್ರಿ ಅವರು ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರವನ್ನು ಕರ್ನಾಟಕ ಅಲ್ಲದೆ ಚೆನ್ನೈ, ಮುಂಬೈ, ಹೈದರಾಬಾದ್ ಹಾಗೂ ವಿದೇಶದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.
_

Be the first to comment

Leave a Reply

Your email address will not be published. Required fields are marked *

Translate »
error: Content is protected !!