ಪಂಖುರಿ ಚಿತ್ರದ ಟೈಲರ್ ರಿಲೀಸ್ ಆಗಿದ್ದು, ನಿರೀಕ್ಷೆ ಮೂಡಿಸಿದೆ.
A2 music ನಲ್ಲಿ ಟ್ರೈಲರ್ ಬಿಡುಗಡೆ ಆಗಿದ್ದು ಸದ್ದು ಮಾಡುತ್ತಿದೆ. ಟ್ರೈಲರ್ ನಲ್ಲಿ ನಾಯಕ ನಟಿ ಕುಂದನಾ ರೆಡ್ಡಿ ಮಹಿಳಾ ದೌರ್ಜನ್ಯ ವಿರುದ್ಧ ಹೋರಾಡುವ ಕಥಾ ಹಂದರ ಗಮನ ಸೆಳೆಯುತ್ತಿದೆ.
ಚಿತ್ರದಲ್ಲಿ ಒಂಟಿ ಹೆಣ್ಣಿಗೆ ಸಮಾಜದಲ್ಲಿ ಎದುರಾಗುವ ಸಮಸ್ಯೆಗಳೇನು ಎನ್ನುವುದನ್ನು ಎಳೆ ಎಳೆಯಾಗಿ ತೋರಿಸಲಾಗಿದೆ. ಈ ಸಿನಿಮಾದಲ್ಲಿ ಕುಂದನಾ ಜತೆ ಶಶಿಶೇಖರ್ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಡ್ರಗ್ಸ್, ನಶೆ, ಅಪರಾಧ, ಮಹಿಳೆಯ ಹೋರಾಟ ಟ್ರೈಲರ್ ನಲ್ಲಿ ಕಂಡು ಬಂದಿದೆ.
ಪ್ರಕೃತಿ ಪಿಕ್ಚರ್ಸ್ ಬ್ಯಾನರ್ ನಲ್ಲಿ , ಅಫ್ಜಲ್ ಅವರ ಸಹಯೋಗದೊಂದಿಗೆ ಸಿನಿಮಾ ನಿರ್ಮಾಣದ ಮೂಲಕ ಯುವ ನಿರ್ಮಾಪಕಿ ಆಗಿಯೂ ಪಂಖುರಿ ಚಿತ್ರದ ನಟಿ ಕುಂದನಾ ಭಡ್ತಿ ಹೊಂದಿದ್ದಾರೆ. ಶಾರದ ಹೆಸರಿನ ಪಾತ್ರದಲ್ಲಿ ಕುಂದನಾ ನಟಿಸುತ್ತಿದ್ದಾರೆ. ಅವರು ‘ಪಂಖುರಿ’ ಚಿತ್ರದ ಮೂಲಕ ಕನ್ನಡ ಚಂದನವನಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ರಾಜೇಶ್ ಕೃಷ್ಣನ್ ಹಾಡಿರುವ ನಂಗೆ ಯಾರೂ ಇಲ್ಲ ಇಲ್ಲಿ ಸಾಂಗ್ ಕೆಲ ದಿನಗಳ ಹಿಂದೆ ರಿಲೀಸ್ ಆಗಿ ಸದ್ದು ಮಾಡಿತ್ತು.
_______

Be the first to comment