Pankhuri 3ನೇ ವಾರಕ್ಕೆ ಪಂಖುರಿ

ಮಹಿಳಾ ಪ್ರಧಾನ ಚಿತ್ರವಾದ ಪಂಖುರಿ ಮೂರನೇ ವಾರಕ್ಕೆ ಕಾಲಿಟ್ಟಿದೆ.

ಚಿತ್ರದಲ್ಲಿ ಒಂಟಿ ಹೆಣ್ಣಿಗೆ ಸಮಾಜದಲ್ಲಿ ಎದುರಾಗುವ ಸಮಸ್ಯೆಗಳೇನು ಎನ್ನುವುದನ್ನು ಎಳೆ ಎಳೆಯಾಗಿ ತೋರಿಸಲಾಗಿದೆ. ಈ ಸಿನಿಮಾದಲ್ಲಿ ಕುಂದನಾ ರೆಡ್ಡಿ ಜತೆ ಶಶಿಶೇಖರ್ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಡ್ರಗ್ಸ್, ನಶೆ, ಅಪರಾಧ, ಮಹಿಳೆಯ ಹೋರಾಟ ಚಿತ್ರದಲ್ಲಿದೆ.

ಪ್ರಕೃತಿ ಪಿಕ್ಚರ್ಸ್ ಬ್ಯಾನರ್ ನಲ್ಲಿ , ಅಫ್ಜಲ್ ಅವರ ಸಹಯೋಗದೊಂದಿಗೆ ಸಿನಿಮಾ ನಿರ್ಮಾಣದ ಮೂಲಕ ಯುವ ನಿರ್ಮಾಪಕಿ ಆಗಿಯೂ ಪಂಖುರಿ ಚಿತ್ರದ ನಟಿ ಕುಂದನಾ ಭಡ್ತಿ ಹೊಂದಿದ್ದಾರೆ. ಶಾರದ ಹೆಸರಿನ ಪಾತ್ರದಲ್ಲಿ ಕುಂದನಾ ನಟಿಸಿದ್ದಾರೆ. ಈ ಚಿತ್ರದ ಮೂಲಕ ಕುಂದನಾ ಚಂದನವನಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ರಾಜೇಶ್ ಕೃಷ್ಣನ್ ಹಾಡಿರುವ ನಂಗೆ ಯಾರೂ ಇಲ್ಲ ಇಲ್ಲಿ ಸೇರಿದಂತೆ ಚಿತ್ರದ ಹಾಡುಗಳು ಸದ್ದು ಮಾಡುವಲ್ಲಿ ಯಶಸ್ವಿ ಆಗಿವೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!