ಪ್ಯಾನ್​ ಇಂಡಿಯಾ ಫೀಲ್ಡ್​ನಲ್ಲಿ ಮಡ್ಡಿ ಟೀಸರ್ ಹವಾ

ಹೊಸಬರು ಪಳಗಿದ ತಂತ್ರಜ್ಱರ ಜಪತೆ ಸೇರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿದ್ಧವಾದ ಹೊಸ ಪ್ರಯತ್ನ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಮತ್ತು ಹಿಂದಿಯಲ್ಲಿ ಬಿಡುಗಡೆಗೊಳ್ಳಲಿದೆ. ಪಿಕೆ7 ಪ್ರೊಡಕ್ಷನ್ಸ್ ಹೌಸ್ ಅಡಿಯಲ್ಲಿ ಪ್ರೇಮ್ ಕೃಷ್ಣ ದಾಸ್ ನಿರ್ಮಾಣದಲ್ಲಿ ಡಾ. ಪ್ರಗ್ಬಲ್ ದಾಸ್ ನಿರ್ದೇಶನದ ಮೊದಲ ಹೆಜ್ಜೆ. ಈ ಚಿತ್ರದ ಮೊದಲ ಟೀಸರ್ ಶುಕ್ರವಾರ ಬಿಡುಗಡೆ ಆಗಿದ್ದು, ಅಭೂತಪೂರ್ವ ಮೆಚ್ಚುಗೆ ಪಡೆದುಕೊಂಡಿದೆ.

ಕನ್ನಡದಲ್ಲಿ ಶಿವರಾಜ್​ಕುಮಾರ್, ಹಿಂದಿಯಲ್ಲಿ ಅರ್ಜುನ್ ಕಪೂರ್, ತಮಿಳಿನಲ್ಲಿ ಜಯಂ ರವಿ, ಮಲಯಾಳಂನಲ್ಲಿ ಫಹಾದ್ ಫಾಸಿಲ್ ಸೇರಿ ಸಾಕಷ್ಟು ಸಿನಿಮಂದಿ ಟೀಸರ್​ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ತಮ್ಮ ಸೋಷಿಯಲ್ ಮೀಡಿಯಾ ವೇದಿಕೆಯಲ್ಲಿ ಟೀಸರ್​ ಲಿಂಕ್ ಶೇರ್ ಮಾಡಿಕೊಂಡು, ಚಿತ್ರಕ್ಕೆ ಶುಭ ಹಾರೈಸಿದ್ದಾರೆ.

ಈ ಮೊದಲು ಮಡ್ಡಿ ಸಿನಿಮಾದ ಮೋಷನ್ ಪೋಸ್ಟರ್ ಅನ್ನು ಕನ್ನಡದಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ ರೀಲಿಸ್ ಮಾಡಿದರೆ, ತಮಿಳಿನ ವಿಜಯ್ ಸೇತುಪತಿ ಬಿಡುಗಡೆ ಮಾಡಿ ಶುಭಕೋರಿದ್ದರು. ಇದೀಗ ಟೀಸರ್ ಗೆ ಇಡೀ ಭಾರತೀಯ ಚಿತ್ರರಂಗದ ಘಟಾನುಘಟಿಗಳು ಸಾಥ್ ನೀಡಿದ್ದಾರೆ.

ಬಿಡುಗಡೆಯಾದ ಕೆಲವೇ ಗಂಟೆಯಲ್ಲಿ 50ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡ ಟೀಸರ್

 

-ಮಡ್ಡಿ ಚಿತ್ರಕ್ಕೆ ರವಿ ಬಸ್ರೂರು ಸಂಗೀತ; ಚಿತ್ರತಂಡದ ಬಗ್ಗೆ ಬಸ್ರೂರು ಹೇಳುವುದೇನು?
ಈ ಚಿತ್ರಕ್ಕೆ ಸಂಗೀತ ನೀಡಿರುವ ಕೆಜಿಎಫ್ ಸಿನಿಮಾ ಖ್ಯಾತಿಯ ರವಿ ಬಸ್ರೂರು ಈ ಹೊಸಬರ ಹೊಸ ಪ್ರಯತ್ನದ ಬಗ್ಗೆ ಮಾತನಾಡಿದ್ದಾರೆ. ‘ಇದೊಂದು ಕಂಪ್ಲೀಟ್​ ಟೆಕ್ನಿಷಿಯನ್ ಸಿನಿಮಾ. ಪಕ್ಕಾ ಕಾರ್ಪೋರೇಟ್ ಶೈಲಿಯಲ್ಲಿ ಬಂದರೆ ಹೇಗಿರುತ್ತದೆ, ಆ ರೀತಿಯೇ ಆಗಮಿಸುತ್ತಿದ್ದಾರೆ. ಈಗಾಗಲೇ ಸೆನ್ಸಾರ್ ಮುಗಿಸಿಕೊಂಡಿದೆ. ಇಡೀ ತಂಡದ ಕೆಲಸ ನೋಡಿದರೆ, ನಮ್ಮ ಆರಂಭದ ಕೆಲಸ ನೆನಪಿಗೆ ಬಂತು. ಕಳೆದ ಹಲವು ವರ್ಷಗಳಿಂದ ಈ ಸಿನಿಮಾಕ್ಕೆ ಪ್ಲಾನಿಂಗ್​ನಲ್ಲಿಯೇ ಹೆಚ್ಚು ವರ್ಷ ಕಳೆದಿದ್ದಾರೆ. ಅದನ್ನು ತೆರೆಮೇಲೆ ತರುವುದಕ್ಕೂ ಅಷ್ಟೇ ಶ್ರಮಪಟ್ಟಿದ್ದಾರೆ. ಮಡ್ ರೇಸ್​ ಎಲ್ಲ ಕಡೆ ಇರುವುದರಿಂದ ಎಲ್ಲ ಕಡೆಗೂ ಈ ಕಥೆ ಕನೆಕ್ಟ್ ಆಗುತ್ತದೆ. ರಿಯಲ್ ಆಗಿ ನಡೆಯುವುದನ್ನೇ ಸಿನಿಮಾದಲ್ಲಿ ತೋರಿಸಿದ್ದಾರೆ. ಸಂಗೀತಕ್ಕೆ ಸಂಬಂಧಿಸಿದಂತೆ ಆ ವಿಭಾಗಕ್ಕೆ ಬೇಕಾದ ಸಂಗೀತವನ್ನು ಕೊಟ್ಟಿದ್ದೇನೆ. ಸಿನಿಮಾ ದಿನೇ ದಿನೇ ಹಿರಿದಾಗುತ್ತಿದ್ದಂತೆ, ಯಾಕೆ ಇದು ಪ್ದಯಾನ್ ಇಂಡಿಯಾ ಆಗಬಾರದೆಂಬ ಐಡಿಯಾ ಬಂತು. ಅದರಂತೆ ಇದೀಗ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆ ಆಗಲು ಸಿದ್ಧತೆ ಮಾಡಿಕೊಳ್ಳುತ್ತಿದೆ.

ಈ ಚಿತ್ರದ ಕಲಾವಿದರೆಲ್ಲ ಯಾವುದೇ ಡ್ಯೂಪ್ ಬಳಸದೆ ಹಲವು ಶೈಲಿಯ ಮಡ್​ ರೇಸ್​ನಲ್ಲಿ ಪರಿಣಿತಿ ಪಡೆದಿದ್ದಾರೆ. ಒಟ್ಟು 13 ಕ್ಯಾಮರಾಗಳನ್ನು ಶೂಟಿಂಗ್ನಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ. ಸ್ಯಾನ್​ ಲೋಕೇಶ್​ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಅದೇ ರೀತಿ ಹಾಲಿವುಡ್​ ಸಿನಿಮಾಗಳ ಛಾಯಾಗ್ರಹಣ ವಿಭಾಗದಲ್ಲಿ ಕೆಲಸ ಮಾಡಿರುವ ಕೆ.ಜಿ ರತೀಶ್​ ಈ ಸಿನಿಮಾಕ್ಕೆ ಕ್ಯಾಮರಾಮನ್ ಆಗಿದ್ದಾರೆ. ಕಲರಿಸ್ಟ್​ ಆಗಿ ರಂಗ ಕೆಲಸ ಮಾಡಿದ್ದಾರೆ.

ಕಳೆದ ಐದು ವರ್ಷಗಳ ಕಾಲ ಮಡ್ ರೇಸ್​ ಬಗ್ಗೆ ಅಧ್ಯಯನ ನಡೆಸಿ ಈ ಸಿನಿಮಾ ಮಾಡಿರುವ ಪ್ರಗ್ಬಲ್​, ಎರಡು ತಂಡಗಳ ನಡುವಿ ಸ್ಪರ್ಧೆಯನ್ನು ಈ ಸಿನಿಮಾದಲ್ಲಿ ತೋರಿಸಿದ್ದಾರೆ. ಇದರ ಜತೆಗೆ ಫ್ಯಾಮಿಲಿ ಸೆಂಟಿಮೆಂಟ್, ಭಾವನಾತ್ಮಕ ಅಂಶಗಳು ಮತ್ತು ಅಡ್ವೆಂಚರಸ್​ ತಿರುವುಗಳನ್ನೂ ಈ ಸಿನಿಮಾದಲ್ಲಿ ಮಿಶ್ರಣ ಮಾಡಿದ್ದಾರೆ.

ನೈಜ ಅರಣ್ಯ ಪ್ರದೇಶದಲ್ಲಿ ಇಡೀ ಸಿನಿಮಾದ ಶೂಟಿಂಗ್ ಆಗಿದ್ದು, ಸಿಂಕ್ ಸೌಂಡ್ ಟೆಕ್ನಾಲಜಿ ಬಳಸಿ ಸಿನಿಮಾ ಮೂಡಿಬಂದಿದ್ದು, ಬಹುತೇಕ ಹೊಸಬರೇ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಯುವನ್, ರಿಧಾನ್ ಕೃಷ್ಣ, ಅನುಷಾ ಸುರೇಶ್, ಅಮಿತ್ ಶಿವದಾಸ್ ನಾಯರ್, ಹರೀಶ್ ಪೆರಾಡಿ, ವಿಜಯನ್, ರೆಂಜಿ ಪೆನಿಕರ್ ತಾರಾಗಣದಲ್ಲಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!