ಮಕ್ಕಳ ಚಿತ್ರ ‘ಪಂಚ ರತ್ನಗಳು’ ಮಾರ್ಚ್ 6ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ಮೈಸೂರು ಮೂಲದ ಗಾಯಕ ಗೌತಮ್ ಆರ್. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಮಾಡಿದ್ದಾರೆ. ಜೊತೆಗೆ ಮೂರು ಹಾಡುಗಳಿಗೆ ಸಾಹಿತ್ಯ ರಚನೆ ಮಾಡಿದ್ದಾರೆ.
ಚಿತ್ರದಲ್ಲಿ ಬಾಲ ಕಲಾವಿದರಾದ ಪ್ರಥಮ್, ಯಶಸ್, ವಿಹಾನ್, ತನ್ವಿ, ಆಧ್ಯ ಪ್ರಥಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ತಾಯಿ ಪಾತ್ರದಲ್ಲಿ ಬಿಂದೂ ಆಚಾರ್ಯ, ಶಿಕ್ಷಣ ಸಚಿವರ ಪಾತ್ರದಲ್ಲಿ ಆನಂದ್ ನಗರ್ಕರ್ ಅಭಿನಯಿಸಿದ್ದಾರೆ.
ಸಂಗೀತ ನಿರ್ದೇಶನ ಪ್ರಣವ್, ಛಾಯಾಗ್ರಹಣ ಅನಿಲ್ ಕಶ್ಯಪ್ , ಸಂಕಲನ ಅಭಿಷೇಕ್, ಸಿಂಕ್ ಸೌಂಡ್ ಕೆಲಸ ಅಜಿತ್ ನಿರ್ವಹಿಸಿದ್ದಾರೆ. ವೆಂಕಟ್ ಗೌಡ ಅವರು ಚಿತ್ರವನ್ನು ಸುಮಾರು 60 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಿದ್ದಾರೆ.
ಸಿನಿಮಾ ಬೆಂಗಳೂರು ಸುತ್ತಮುತ್ತ ಚಿತ್ರೀಕರಣಗೊಂಡಿದೆ. ಮಕ್ಕಳಿಗೆ ಮನರಂಜನೆ ಜೊತೆಗೆ ಸಮಾಜಕ್ಕೆ ಸಂದೇಶ ನೀಡುವ ಪ್ರಯತ್ನ ಚಿತ್ರತಂಡ ಮಾಡಿದೆ.
“ಸಮಾಜದ ಸಮಸ್ಯೆಗಳನ್ನು ದೊಡ್ಡವರು ಗಮನಿಸದಾಗ 5 ಮಕ್ಕಳು ಮುಂದೆ ಬಂದು ಬದಲಾವಣೆ ತರುವ ನಿರ್ಧಾರಕ್ಕೆ ಬರುತ್ತಾರೆ” ಎಂದು ನಿರ್ದೇಶಕರು ಚಿತ್ರದ ಕಥೆ ಹೇಳಿದ್ದಾರೆ.





Be the first to comment