60ರ ದಶಕದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳು ತಯಾರಾಗಿದ್ದವು ಎಂದು ಖ್ಯಾತ ನಟ ಕಮಲ್ ಹಾಸನ್ ಹೇಳಿದ್ದಾರೆ.
‘ಕೆಜಿಎಫ್’ ಹಾಗೂ ‘ಆರ್ಆರ್ಆರ್’ ತಂಡದ್ದು ಪ್ಯಾನ್ ಇಂಡಿಯಾ ವಿಚಾರದಲ್ಲಿ ಹೊಸ ಪ್ರಯತ್ನವಲ್ಲ ಎಂದು ಕಮಲ್ ಹಾಸನ್ ಅಭಿಪ್ರಾಯಪಟ್ಟಿದ್ದಾರೆ.
‘ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಮೊದಲಿನಿಂದಲೂ ಇತ್ತು. ವಿ. ಶಾಂತಾರಾಮ್ ಅವರು ಪ್ಯಾನ್ ಇಂಡಿಯಾ ಸಿನಿಮಾ ಮಾಡಿದ್ದರು. 1960ರ ‘ಮುಘಲ್-ಇ-ಅಜಾಮ್’ ಹಾಗೂ 1965ರ ‘ಚೆಮ್ಮೀನ್’ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿತ್ತು ‘ಆರ್ಆರ್ಆರ್’, ‘ಕೆಜಿಎಫ್’ ಮಾಡಿರುವುದು ಹೊಸತಲ್ಲ. ನಾವು ಬೇರೆ ಭಾಷೆಗಳನ್ನು ಮಾತನಾಡುತ್ತೇವೆ. ಆದರೆ ದೇಶಮಟ್ಟದಲ್ಲಿ ನಾವೆಲ್ಲರೂ ಒಂದು’ ಎಂದು ಅವರು ಹೇಳಿದ್ದಾರೆ.
‘ವಿಕ್ರಮ್’ ಸಿನಿಮಾ ಪ್ರಚಾರ ಕಾರ್ಯದಲ್ಲಿ ನಿರತವಾಗಿರುವ ಕಮಲ್ ಹಾಸನ್, “ನಾನು ಭಾರತೀಯ. ನೀವು ಯಾರು? ಮಧುರೈ ದೇವಸ್ಥಾನಕ್ಕೆ ನೀವು ತೆರಳಬಹುದು. ನಾನು ಕಾಶ್ಮೀರಕ್ಕೆ ಹೋಗಬಹುದು” ಎಂದು ಹೇಳುವ ಮೂಲಕ ಉತ್ತರ, ದಕ್ಷಿಣ ಸಿನಿಮಾಗಳ ನಡುವಿನ ವಿವಾದಕ್ಕೆ ಉತ್ತರ ನೀಡಿದ್ದಾರೆ.
ಕಮಲ್ ಹಾಸನ್ ಅವರು ಸುಮಾರು 200ರಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ, ತಮಿಳು, ತೆಲುಗು ಮೊದಲಾದ ಭಾಷೆಗಳಲ್ಲಿ ಅಭಿನಯಿಸಿರುವ ಅವರ ‘ವಿಕ್ರಮ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.
___
Be the first to comment