ಈ ಮುದ್ದು ಚೆಲುವೆ ಪಲ್ಲವಿ ಗೌಡ

‘ಸವಿರುಚಿ’ ಕಾರ್ಯಕ್ರಮದ ಮೂಲಕ ಪರಿಚಯ ಆದ ಪಲ್ಲವಿ, ನಂತರ ‘ಮನೆಯೊಂದು ಮೂರು ಬಾಗಿಲು, ಪರಿಣಯ, ಚಂದ್ರ ಚಕೋರಿ, ಗಾಳಿಪಟ, ಜೋಡಿ ಹಕ್ಕಿ, ಸೇವಂತಿ ಹಾಗೂ ಇನ್ನಿತರ ಮೆಗಾ ಧಾರಾವಾಹಿಗಳಲ್ಲಿ ನಟಿಸಿದರು. ನಂತರ ‘ಪ್ರೇಮ ಗೀಮ ಜಾನೆ ದೋ’ ಸಿನಿಮಾ ಮೂಲಕ ಬೆಳ್ಳಿ ತೆರೆಗೆ ಕೂಡಾ ಅವರು ಕಾಲಿರಿಸಿದರು. ‘ಕಿಡಿ’ ಚಿತ್ರದಲ್ಲಿ ಕೂಡಾ ಅವರಿಗೆ ಒಳ್ಳೆ ಪಾತ್ರವೊಂದು ದೊರೆತಿತ್ತು. ಇದೀಗ ಅವರು ‘ಕೊಡೆ ಮುರುಗ’ ಎಂಬ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

‘ಜೋಡಿಹಕ್ಕಿ’ ಹಾಗೂ ‘ನಂ ಗಣಿ ಬಿಕಾಂ ಪಾಸು’ ಸಿನಿಮಾದಲ್ಲಿ ಪಲ್ಲವಿ ನೆಗೆಟಿವ್ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿ ಆಗಿ ಮಿಂಚುವ ಅವಕಾಶ ಇದ್ದರೂ ಅವರಿಗೆ ಖಳನಾಯಕಿ ಪಾತ್ರದಲ್ಲೇ ಹೆಚ್ಚು ಆಸಕ್ತಿ ಇದೆಯಂತೆ. ಕನ್ನಡ ಮಾತ್ರವಲ್ಲ ಈಗಾಗಲೇ ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಕೂಡಾ ಪಲ್ಲವಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!