“ಪದ್ಮಾವತಿ” ಯಲ್ಲಿ ಗಾನಕೋಗಿಲೆ ಗಂಗಮ್ಮನ ಹಾಡು
ಈ ಹಿಂದೆ ತಲೆ ಬಾಚ್ಕೊಳಿ ಪೌಡರ್ ಹಾಕ್ಕೊಳಿ ಎಂದು ಹೇಳುತ್ತ ಸಿನಿ ರಸಿಕರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಿದ್ದ ವಿಕ್ರಂ ಆರ್ಯ ಈಗ ಮತ್ತೆ ತೆರೆಮೇಲೆ ಬರುತ್ತಿದ್ದಾರೆ. ಪದ್ಮಾವತಿ ಎಂಬ ಹೊಸ ಚಿತ್ರವನ್ನು ಕನ್ನಡ ಸಿನಿ ರಸಿಕರಿಗಾಗಿ ತಂದಿದ್ದಾರೆ. ಹೆಣ್ಣಿನ ಮನದ ಭಾವನೆಗಳನ್ನು ಆಕೆಯ ತಪ್ಪು ಒಪ್ಪುಗಳನ್ನು ಹೇಳುವಂತ ಕಥಾ ಹಂದರವನ್ನು ಹೊಂದಿರುವ ಈ ಚಿತ್ರದಲ್ಲಿ ಹಳ್ಳಿಗಾಡಿನ ಗಾನ ಕೋಗಿಲೆ ಕೊಪ್ಪಳದ ಗಂಗಮ್ಮ 3 ಹಾಡುಗಳಿಗೆ ದನಿಯಾಗಿದ್ದಾರೆ. ಒಂದು ಹೆಣ್ಣು ಗರ್ಭವತಿಯಾದ ಸಂಧರ್ಭದಲ್ಲಿ ಆಕೆಗೆ ಸೀಮಂತ ಮಾಡುವ ಸನ್ನಿವೇಶದಲ್ಲಿ ಬರುವಂತಹ ಹಾಡನ್ನು ಗಾನ ಕೋಗಿಲೆ ಗಂಗಮ್ಮ ಅವರು ಕಳೆದ ಮಂಗಳವಾರ ಬೆಂಗಳೂರಿನ ವಿಜಯ್ ಫಿಲಂ ಇನ್ಸ್‍ಟಿಟ್ಯೂಟ್‍ನಲ್ಲಿ ಹಾಡಿದರು “ಹಚ್ಚಿರೆ ಹರಿಶಿನವ…. ಪೂಸೀರೇ ಗಂಧಾವಾ…..” ಹಾಗೂ “ಕುಹೂ ಕುಹೂ ಕೋಗಿಲೆ ಒಮ್ಮೆ ಕೂಗಬಾರದೆ” ಎಂಬ ಎರಡು ಹಾಡುಗಳನ್ನು ಗಂಗಮ್ಮ ಅವರ ಕಂಠ ಸಿರಿಯಲ್ಲಿ ಧ್ವನಿಮುದ್ರಿಸಿಕೊಳ್ಳಲಾಯಿತು.
ಈ ಹಿಂದೆ ವಿಕ್ರಂ ಆರ್ಯ, ಉಪೇಂದ್ರ ಪುನೀತರಂಥಹ ಸ್ಟಾರ್ ನಟರ ಕೈಲಿ ಹಾಡಿಸಿದ್ದರು. ಈಗ ಚಿತ್ರದ ಕಥೆಗೆ ಅನುಗುಣವಾಗಿ ಅಪ್ಪಟ ಗ್ರಾಮೀಣ ಕಂಠದ ಅವಶ್ಯಕತೆ ಇದ್ದುದ್ದರಿಂದ ಗಂಗಮ್ಮ ಅವರಾದ ಈ ಚಿತ್ರದಲ್ಲಿ ಒಟ್ಟು 3 ಹಾಡುಗಳನ್ನು ಹಾಡಿಸಿದ್ದಾರೆ. ದಿನೇಶ್ ಕುಮಾರ್ ಅವರ ಸಂಗೀತ ಸಂಯೋಜನೆಯಲ್ಲಿ ಒಟ್ಟು 8 ಹಾಡುಗಳು ಈ ಚಿತ್ರದಲ್ಲಿದ್ದು ಪ್ರೇಮ್ ಸಾಯಿ, ಹರೀಶ್ ಜಿ ರಾವ್ ಸಾಹಿತ್ಯ ಬಸಿದಿದ್ದಾರೆ. ಕಿರುತೆರೆಯಲ್ಲಿ ಮೂರು ಸಾವಿರಕ್ಕೂ ಹೆಚ್ಚು ಎಪಿಸೋಡ್‍ಗಳನ್ನು ನಿರ್ದೇಶಿಸಿದ ಮಿಥುನ್ ಚಂದ್ರಶೇಖರ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ರಾವ್ ಅಂಡ್ ರಾವ್ ಸಿನಿಮಾಸ್ ಮೂಲಕ ದಾಮೋದರ್ ರಾವ್ ಹಾಗೂ ನಾಮದೇವ ಭಟ್ಟರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಶೋಹೆಬ್ ಅಹಮದ್ ಅವರ ಛಾಯಾಗ್ರಹಣ, ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದ್ದು ಶಿವಮೊಗ್ಗ ಹೊಸನಗರ ಹಾಗೂ ಸಕಲೇಶಪುರದ ಸುತ್ತಮುತ್ತ ಈ ಚಿತ್ರಕ್ಕೆ ಚಿತ್ರಿಕರಣ ನಡೆಸಲಾಗಿದೆ. ಸದ್ಯ ರೀರೆಕಾರ್ಡಿಂಗ್ ಹಂತದಲ್ಲಿರುವ ಪದ್ಮಾವತಿ ಚಿತ್ರದ ಆಡಿಯೋ ಅನಾವರಣ ಇದೇ ತಿಂಗಳ ಅಂತ್ಯದಲ್ಲಿ ನಡೆಯಲಿದೆ. ವಿಕ್ರಂ ಆರ್ಯಾ, ಸಾಕ್ಷಿ ಮೇಘನ, ದಾಮೋದರ್ ರಾವ್, ರಾಘವ ಕಲಾಲ್, ಕೀರ್ತಿ ಎನ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
Be the first to comment