ಪದವಿಪೂರ್ವಕ್ಕೆ ಜಗ್ಗೇಶ್

ಹರಿಪ್ರಸಾದ್ ಜಯಣ್ಣ ನಿರ್ದೇಶಿಸಿ, ಯೋಗರಾಜ್ ಭಟ್ ಹಾಗು ರವಿ ಶಾಮನೂರ್ ಅವರು ಜಂಟಿಯಾಗಿ ನಿರ್ಮಿಸುತ್ತಿರುವ “ಪದವಿಪೂರ್ವ” ಚಿತ್ರದ ಶೂಟಿಂಗ್ ಸೆಟ್‌ಗೆ ಹಿರಿಯ ನಟ ನವರಸನಾಯಕ ಜಗ್ಗೇಶ್ ಭೇಟಿ ನೀಡಿ ತಂಡಕ್ಕೆ ಶುಭಕೋರಿ ಹಾರೈಸಿದ್ದಾರೆ. ತಮ್ಮ 40 ವರ್ಷಗಳ ಸಿನಿಪಯಣದ ಸಂಭ್ರಮದ ಮೂಡ್‌ನಲ್ಲಿರುವ ಜಗ್ಗೇಶ್ “ಪದವಿಪೂರ್ವ” ಚಿತ್ರದ ಸೆಟ್‌ಗೆ ಸರ್ಪ್ರೈಸ್ ಭೇಟಿ ನೀಡಿದ್ದಲ್ಲದೆ, ಅದಾಗಲೇ ಚಿತ್ರೀಕರಿಸಿದ್ದ ಕೆಲ ದೃಶ್ಯಗಳನ್ನು ನೋಡಿ ಖುಶಿಪಟ್ಟು, ಚಿತ್ರದ ನಿರ್ದೇಶಕ ಹರಿಪ್ರಸಾದ್ ಜಯಣ್ಣ ಹಾಗು ಛಾಯಾಗ್ರಾಹಕ ಸಂತೋಷ್ ರೈ ಪತಾಜೆ ಕಾರ್ಯದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಚಿತ್ರತಂಡದೊಂದಿಗೆ ಒಂದು ಗಂಟೆಗೂ ಹೆಚ್ಚು ಕಾಲ ಜಾಲಿಯಾಗಿ ಬೆರೆತು ಸಮಯ ಕಳೆದ ಜಗ್ಗೇಶ್, ಚಿತ್ರದ ಪ್ರಮುಖ ಪಾತ್ರದಾರಿಗಳಿಗೆ ಕೆಲವು ಅತ್ಯಮೂಲ್ಯ ಸಲಹೆಗಳನ್ನು ನೀಡುವ ಮೂಲಕ ತಮ್ಮ ಅನುಭವವನ್ನು ಧಾರೆ ಎರೆದು ಯುವ ನಟ ನಟಿಯರನ್ನು ಪ್ರೋತ್ಸಾಹಿಸಿದ್ದು ತಂಡದಲ್ಲಿದ್ದ ಉತ್ಸಾಹವನ್ನು ದುಪ್ಪಟ್ಟು ಮಾಡಿದೆ.

ಚಿತ್ರವು ಕಳೆದ ವಾರವಷ್ಟೇ ಮುಹೂರ್ತ ಆಚರಿಸಿಕೊಂಡಿದ್ದು, ಚಿತ್ರದ ಚಿತ್ರೀಕರಣವು ಬೆಂಗಳೂರಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಭರದಿಂದ ಸಾಗುತ್ತಿದೆ. ಯುವ ತಾಂತ್ರಿಕ ವರ್ಗವನ್ನೊಳಗೊಂಡಿರುವ “ಪದವಿಪೂರ್ವ” ಚಿತ್ರದಲ್ಲಿ ನಾಯಕನಾಗಿ ಪೃಥ್ವಿ ಶಾಮನೂರ್ ಹಾಗೂ ನಾಯಕಿಯರಾಗಿ ಅಂಜಲಿ ಅನೀಶ್ ಹಾಗು ಯಶಾ ಶಿವಕುಮಾರ್ ಅಭಿನಯಿಸುತ್ತಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!