ಪದವಿ ಪೂರ್ವ ಚಿತ್ರದ ಎರಡನೇ ಟ್ರ್ಯಾಕ್ ಏಕೆ ಸಿಕ್ಕೆಯನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿದ್ದಾರೆ.
ಹಾಡು ಆನಂದ್ ಆಡಿಯೋದಲ್ಲಿ ಬಿಡುಗಡೆಯಾಗಿದೆ. ‘ಯಾಕೆ ಸಿಕ್ಕೆ…’ ಎಂದು ಸಾಗುವ ಈ ಹಾಡಿಗೆ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದು, ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿದೆ.
ಯೋಗರಾಜ್ ಭಟ್ ಮತ್ತು ರವಿ ಶಾಮನೂರು ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರಕ್ಕೆ ಟಾಪ್ ನಟರು ಬೆಂಬಲ ನೀಡಿದ್ದಾರೆ. ಗೆಳೆತನದ ಕುರಿತಾದ ಮೊದಲ ಟ್ರ್ಯಾಕ್ ನ್ನು ಜಗ್ಗೇಶ್ ಅವರು ಬಿಡುಗಡೆ ಮಾಡಿದ್ದರು.
‘ಪದವಿಪೂರ್ವ’ ಮೂಲಕ ಪೃಥ್ವಿ ಶಾಮನೂರು ನಾಯಕನಾಗಿ ಡೆಬ್ಯೂ ಮಾಡುತ್ತಿದ್ದಾರೆ. ಅವರಿಗೆ ಅಂಜಲಿ ನಾಯಕಿಯಾಗಿದ್ದು, ಯಶಾ ಶಿವಕುಮಾರ್ ಪ್ರಮುಖ ತಾರಾಗಣದಲ್ಲಿದ್ದಾರೆ.
ಹರಿಪ್ರಸಾದ್ ನಿರ್ದೇಶನದ ಪದವಿ ಪೂರ್ವ ಸಿನಿಮಾ ಡಿಸೆಂಬರ್ 30 ರಂದು ಬಿಡುಗಡೆಯಾಗಲಿದೆ.
___

Be the first to comment