ಪದವಿ ಪೂರ್ವ ಟೀಸರ್ ರಿಲೀಸ್

ಪದವಿ ಪೂರ್ವ ಚಿತ್ರದ ಟೀಸರ್ ರಿಲೀಸ್ ಆಗಿದ್ದು ಕಾಲೇಜು ದಿನಗಳನ್ನ ನೆನಪು ಮಾಡುತ್ತಿದೆ.

ಡಿ.30 ಸಿನಿಮಾ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ನವರಸನಾಯಕ ಜಗ್ಗೇಶ್ ಪದವಿ ಪೂರ್ವ ಟೀಸರ್ ರಿಲೀಸ್ ಮಾಡಿದ್ದಾರೆ.

ಯೋಗರಾಜ್ ಭಟ್ರು ಬೆಲ್ ಹೊಡೆದು ಹೇಳೋಕೆ ಹೊರಟಿರೋ ಪೀಪಿ ನವೀನ ಹಾಗೂ ನಿತ್ಯಾ ಲವ್ ಸ್ಟೋರಿ 90ರ ದಶಕದ್ದು. ಕಾಲೇಜು ಲವ್ವು, ಡವ್ವು ಅವಾಂತರವನ್ನು ಫ್ಲ್ಯಾಶ್ ಬ್ಯಾಕ್ ಗೆ ಹೋಗಿ ಹೇಳೋ ಕಥೆಯೇ ಇದಾಗಿದೆ.

ಚಿತ್ರದ ಟೀಸರ್ ಈಗ ಲಹರಿ ಮ್ಯೂಸಿಕ್ ನ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿದೆ. ಡಿಜಿಟಲ್ ದುನಿಯಾದಿಂದ ವಾಪಸ್ ಅನಲಾಗ್ ಕಾಲಕ್ಕೆ ಕರ್ಕೊಂಡು ಹೋಗ್ತಿರೋ ಸಿನಿಮಾ ಇದಾಗಿದೆ.

ಯೋಗರಾಜ್ ಭಟ್ ಮೂವಿಸ್ ಹಾಗೂ ರವಿ ಶಾಮನೂರ್ ಫಿಲಮ್ಸ್ ಬ್ಯಾನರ್ ನಲ್ಲಿ ನಿರ್ಮಾಣವಾಗಿರೋ ಸಿನಿಮಾಗೆ ಹರಿಪ್ರಸಾದ್ ಜಯಣ್ಣ ಆಯಕ್ಷನ್ ಕಟ್ ಹೇಳಿದ್ದಾರೆ.

ಪೃಥ್ವಿ ಶಾಮನೂರ್, ಅಂಜಲಿ ಅನೀಶ್, ಯಶ ಶಿವಕುಮಾರ್ ಜೊತೆಗೆ ಅದಿತಿ ಪ್ರಭುದೇವ, ದಿವ್ಯಾ ಉರುಡುಗ, ನಯನ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ರಂಗಾಯಣ ರಘು, ಶರತ್ ಲೋಹಿತಾಶ್ವ ಸೇರಿದಂತೆ ದೊಡ್ಡ ಪೋಷಕ ನಟರ, ಕಾಮಿಡಿ ಕಿಲಾಡಿಗಳ ದಂಡು ಚಿತ್ರದಲ್ಲಿ ಇದೆ. ಚಿತ್ರತಂಡ ಸಿನಿಮಾ ಪ್ರಚಾರದ ಸಲುವಾಗಿ ರಾಜ್ಯದ ಮೂಲೆ ಮೂಲೆಯ ಕಾಲೇಜುಗಳಿಗೆ ತೆರಳಲಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!