Padavi Poorva Movie : ಭಾರೀ ಮೊತ್ತಕ್ಕೆ ಪದವಿಪೂರ್ವ ಸಾಂಗ್ಸ್ ಸೇಲ್

ಯೋಗರಾಜ್ ಸಿನಿಮಾಸ್ ಹಾಗೂ ರವಿ ಶಾಮನೂರ್ ಫಿಲಂಸ್‌ ಜಂಟಿಯಾಗಿ ನಿರ್ಮಿಸಿ ಭಟ್ಟರ ಬಳಗದವರೇ ಆದ ಹರಿಪ್ರಸಾದ್ ಜಯಣ್ಣ ನಿರ್ದೇಶಿಸುತ್ತಿರುವ (Hariprasad Jayanna direction) ‘ಪದವಿಪೂರ್ವ'(Padavi purva Song) ಚಿತ್ರತಂಡದಿಂದ ಎರಡೆರಡು ಖುಷಿ ಸುದ್ದಿಗಳು ಒಮ್ಮೆಲೇ ಹೊರಬಿದ್ದಿವೆ.

ಹೌದು ಫಸ್ಟ್ ಖುಷಿ ಸುದ್ದಿ ‘ಪದವಿಪೂರ್ವ’ ಚಿತ್ರದ ಆಡಿಯೋ ರೈಟ್ಸನ್ನು ಲಹರಿ ಮ್ಯೂಸಿಕ್ (Lohari music)ಸಂಸ್ಥೆ ಭರ್ಜರಿ ಮೊತ್ತ ನೀಡಿ ಖರೀದಿ ಮಾಡಿದೆ ಎಂಬುದು. ಇದರಲ್ಲಿ ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಸಂಗೀತ(Arjun Janya music) ಸಂಯೋಜನೆಗೆ ವಿಕಟಕವಿ ಯೋಗರಾಜ್ ಭಟ್ ಸಾಹಿತ್ಯ ರಚಿಸಲಿದ್ದಾರೆ . ಎಂಬ ಸುದ್ದಿ ಹೊರಬಿದ್ದಾಗಲೇ ಚಿತ್ರದ ಹಾಡುಗಳ ಬಗ್ಗೆ ಸಿನಿಪ್ರಿಯರಲ್ಲಿ ಕುತೂಹಲ ಮನೆ ಮಾಡಿತ್ತು. ಈಗ ನಿರೀಕ್ಷೆಗೆ ತಕ್ಕಂತ ಪದವಿಪೂರ್ವ ಚಿತ್ರದ ಹಾಡುಗಳ ಹಕ್ಕನ್ನು ಕನ್ನಡದ ಪ್ರತಿಷ್ಠಿತ ಆಡಿಯೋ ಸಂಸ್ಥೆ ‘ಲಹರಿ ಮ್ಯೂಸಿಕ್’ ತನ್ನ ತಕ್ಕೆಗೆ ಹಾಕಿಕೊಂಡಿದೆ.

ಇನ್ನೂ ಎರಡನೆಯ ಖುಷಿ ಸುದ್ದಿಯೂ ಮೊದಲನೇ ಖುಷಿ ಸುದ್ದಿಯ ಮುಂದುವರಿದ ಭಾಗವೇ ಆಗಿದೆ. ಅದೇನೆಂದರೆ, ಪದವಿಪೂರ್ವ ಚಿತ್ರದ ಸುಂದರ ಗೀತೆಗಳಲ್ಲಿ ಒಂದಾದ ‘ಫ್ರೆಂಡ್ಸ್ ಇದ್ರೇನೆ ಜೀವನ’ ಎಂಬ ಹಾಡು ಫ್ರೆಂಡ್‌ಶಿಪ್ ಡೇ ಪ್ರಯುಕ್ತ ಇದೇ ಆಗಸ್ಟ್ 06 ರಂದು ಸಂಜೆ 04:32ಕ್ಕೆ ‘ಲಹರಿ ಮ್ಯೂಸಿಕ್’ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. ಯೋಗರಾಜ್ ಭಟ್ ಸಾಹಿತ್ಯವಿರುವ ಈ ಹಾಡಿಗೆ ಕನ್ನಡದ ಹೆಮ್ಮೆಯ ಗಾಯಕ ವಿಜಯ್ ಪ್ರಕಾಶ್ ಧ್ವನಿಯಾಗಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!