ಔಟ್ ಆಫ್ ಸಿಲಬಸ್

‘ಔಟ್ ಆಫ್ ಸಿಲಬಸ್’ ಚಿತ್ರದ ಟ್ರೈಲರ್ ಬಿಡುಗಡೆ

ಶ್ರೀಮತಿ ವಿಜಯಕಲಾ ಸುಧಾಕರ್, ತನುಷ್ ಎಸ್ ವಿ, ದೇಸಾಯಿ ಗೌಡ ಜಂಟಿಯಾಗಿ ನಿರ್ಮಾಣ ಮಾಡಿರುವ, ಪ್ರದೀಪ್ ದೊಡ್ಡಯ್ಯ ನಟಿಸಿ, ನಿರ್ದೇಶನ ಮಾಡಿರುವ ಔಟ್ ಆಫ್ ಸಿಲಬಸ್ ಚಿತ್ರದ ಟ್ರೈಲರ್ ಬಿಡುಗಡೆ ಜೊತೆಗೆ ಚಿತ್ರ ಬಿಡುಗಡೆಯ ದಿನಾಂಕವನ್ನು ಸಹ ಚಿತ್ರ ತಂಡ ಅಧಿಕೃತವಾಗಿ ಘೋಷಣೆ ಮಾಡಿತು.

ಔಟ್ ಆಫ್ ಸಿಲಬಸ್ ಟ್ರೈಲರ್ ಸಖತ್ ಇಂಟರೆಸ್ಟಿಂಗ್ ಆಗಿದ್ದು,ಯುವ ಜನತೆಯನ್ನು ಕೇಂದ್ರವಾಗಿಟ್ಟು, ಭರ್ಜರಿ ಮನೋರಂಜನೆ ಕೊಡುವ ಎಲ್ಲ ಅಂಶಗಳನ್ನು ಒಳಗೊಂಡಿದೆ, ಚಿತ್ರವೂ ರಾಜ್ಯಾದ್ಯಂತ ಇದೇ ಡಿಸೆಂಬರ್ 27ಕ್ಕೆ ಬಿಡುಗಡೆ ಆಗುತ್ತಿದೆ.

ನಾಯಕ ಪ್ರದೀಪ್ ದೊಡ್ಡಯ್ಯ ಜೊತೆಗೆ,ನಾಯಕಿಯಾಗಿ ಹೃತಿಕಾ ಶ್ರೀನಿವಾಸ್, ಇನ್ನುಳಿದ ಕಲಾವಿದರ ಪಟ್ಟಿಯಲ್ಲಿ ಅಚ್ಯುತ್ ಕುಮಾರ್, ಯೋಗರಾಜ್ ಭಟ್, ರಾಮಕೃಷ್ಣ, ಚಿತ್ಕಲ ಬಿರಾದಾರ, ಮಂಜು ಪಾವಗಡ, ಮಹಾಂತೇಶ್ ಹಿರೇಮಠ್ ಇದ್ದಾರೆ.

ಇನ್ನು ಚಿತ್ರದ ತಾಂತ್ರಿಕ ವಿಭಾಗದಲ್ಲಿ,ದೇವ ವಡ್ಡೆ ಛಾಯಾಗ್ರಹಣ,ಉಮೇಶ್ ಆರ್ ಬೀ ಸಂಕಲನ,ಸೇರಿದ್ದಾರೆ.

ಮೋಟಿವೇಶನ ಸ್ಪೀಕರ್ ಆಗಿ, ಹಲವಾರು ಮಕ್ಕಳಿಗೆ ಸ್ಪೂರ್ತಿದಾಯಕ ಮಾತುಗಳನ್ನ ಹೇಳಿ, ಅದರ ಜೊತೆಗೆ ಜಾಹೀರಾತು ಸಂಸ್ಥೆ ಮೂಲಕ ಕನ್ನಡ ಚಿತ್ರೋದ್ಯಮದ ಜೊತೆ ನಿರಂತರವಾದ ಸಂಪರ್ಕ ಹೊಂದಿರುವ, ಪ್ರದೀಪ್ ದೊಡ್ಡಯ್ಯ, ಕನ್ನಡದ ಬಹಳಷ್ಟು ಖ್ಯಾತ ನಿರ್ದೇಶಕರುಗಳ ಜೊತೆಗೆ ಕೆಲಸ ಮಾಡಿದ ಅನುಭವ ಇರುವುದು ಸ್ವತಃ ಪ್ರದೀಪ್ ಗೆ ದೊಡ್ಡ ಶಕ್ತಿ ತುಂಬಿದ ಹಾಗಿದೆ.

ಔಟ್ ಆಫ್ ಸಿಲಬಸ್

Be the first to comment

Leave a Reply

Your email address will not be published. Required fields are marked *

Translate »
error: Content is protected !!