ಔಟ್ ಆಫ್ ಸಿಲಬಸ್

Movie Review: ಪ್ರೀತಿಯ ಪಾಠ ‘ಔಟ್ ಆಫ್ ಸಿಲೆಬಸ್’

ಚಿತ್ರ: ಔಟ್ ಆಫ್ ಸಿಲಬಸ್
ನಿರ್ದೇಶನ: ಪ್ರದೀಪ್ ದೊಡ್ಡಯ್ಯ
ನಿರ್ಮಾಪಕ: ವಿಜಯ ಕಲಾ ಸುಧಾಕರ್
ತಾರಾ ಬಳಗ: ಪ್ರದೀಪ್ ದೊಡ್ಡಯ್ಯ, ಹೃತಿಕಾ, ಯೋಗರಾಜ ಭಟ್, ಅಚ್ಚುತ್ ಕುಮಾರ್ ಇತರರು
ರೇಟಿಂಗ್: 3.5

ಕಾಲೇಜಿನ ಜೀವನಕ್ಕಿಂತ ಬದುಕಿನ ಸನ್ನಿವೇಶಗಳು ಔಟ್ ಆಫ್ ಸಿಲಬಸ್ ಆಗಿರುತ್ತವೆ ಎನ್ನುವ ಚಿತ್ರಣವನ್ನು ನೀಡುವ ಚಿತ್ರ ಈ ವಾರ ತೆರೆಗೆ ಬಂದಿರುವ ಔಟ್ ಆಫ್ ಸಿಲಬಸ್.

ಚಿತ್ರದಲ್ಲಿ ಕಾಲೇಜಿನ ಸನ್ನಿವೇಶಗಳಿವೆ. ಅದರ ಜೊತೆಗೆ ಜೀವನದ ಹಲವು ಪಾಠಗಳಿವೆ. ಹೀಗಾಗಿ ನೋಡುಗರಿಗೆ ಚಿತ್ರ ಹೊಸ ಅನುಭವವನ್ನು ನೀಡುತ್ತದೆ.

ಔಟ್ ಆಫ್ ಸಿಲಬಸ್

ಚಿತ್ರದ ನಾಯಕ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾ ಇರುವಾಗ ಓದಲು ಅವನನ್ನು ಕಂಪೆನಿಯಿಂದ ಕಾಲೇಜಿಗೆ ಕಳಿಸುತ್ತಾರೆ. ಅಲ್ಲಿ ಅವನಿಗೆ ನಾಯಕಿ ಜೊತೆಗೆ ಪ್ರೇಮ ಹುಟ್ಟಿಕೊಳ್ಳುತ್ತದೆ. ಮುಂದೆ ಅವನು ಉನ್ನತ ಶಿಕ್ಷಣಕ್ಕೆ ಅಮೆರಿಕಕ್ಕೆ ಹೋಗುತ್ತಾನೆ. ಆಗ ಅವನು ಪ್ರೀತಿಸಿದ ಹುಡುಗಿ ಒಂಟಿಯಾಗುತ್ತಾಳೆ. ಮುಂದೆ ಅವಳು ನಾಯಕನಿಗಾಗಿ ಕಾದು ಸಾಕಾಗಿ ಮನೆಯವರು ನೋಡಿದ ಹುಡುಗನನ್ನು ಮದುವೆಯಾಗಲು ಮುಂದಾಗುತ್ತಾಳೆ. ಮುಂದೆ ಏನಾಗುತ್ತೆ? ಅವರಿಬ್ಬರು ಮದುವೆಯಾಗುತ್ತಾರಾ ಎನ್ನುವುದಕ್ಕೆ ಚಿತ್ರವನ್ನು ನೋಡಬೇಕಿದೆ.

ತಮ್ಮ ಮೊದಲ ಚಿತ್ರದಲ್ಲಿ ಪ್ರದೀಪ್ ದೊಡ್ಡಯ್ಯ ಸರಳ ಸುಂದರವಾದ ಕಾಲೇಜ್ ಲವ್ ಸ್ಟೋರಿ ಹೇಳುವ ಪ್ರಯತ್ನವನ್ನು ಮಾಡಿದ್ದಾರೆ. ಚಿತ್ರದಲ್ಲಿ ವಿದ್ಯಾರ್ಥಿಗಳಿಗೆ ಅಲ್ಲಲ್ಲಿ ಉತ್ತಮ ಸಂದೇಶಗಳನ್ನು ನೀಡುವ ಯತ್ನವನ್ನು ಮಾಡಲಾಗಿದೆ. ಕ್ಲೈಮಾಕ್ಸ್ ಟ್ವಿಸ್ಟ್ ಚಿತ್ರದ ಹೈಲೈಟ್ ಆಗಿ ಮೂಡಿ ಬಂದಿದೆ.

ಔಟ್ ಆಫ್ ಸಿಲಬಸ್

ಪ್ರದೀಪ ದೊಡ್ಡಯ್ಯ ನಟನೆಯ ಮೂಲಕ ಗಮನ ಸೆಳೆಯುತ್ತಾರೆ. ನಾಯಕಿ ಹೃತಿಕಾ ಗೊಂದಲದ ಗೂಡಿನಲ್ಲಿ ಸಿಲುಕಿರುವ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಯೋಗರಾಜ್ ಭಟ್ ನಗುವಿನ ಮೂಲಕ ಕಚಗುಳಿ ಇರುತ್ತಾರೆ.

ಪ್ರೀತಿಸುವ ಜೋಡಿಗಳಿಗೆ ಕಲಿಯಬೇಕಾದ ಹಲವು ಪಾಠಗಳು ಚಿತ್ರದಲ್ಲಿವೆ. ಔಟ್ ಆಫ್ ಚಿತ್ರವನ್ನು ಕಾಲೇಜು ಪ್ರೇಮಿಗಳು ಒಮ್ಮೆ ನೋಡಬಹುದು.

ಔಟ್ ಆಫ್ ಸಿಲಬಸ್

Be the first to comment

Leave a Reply

Your email address will not be published. Required fields are marked *

Translate »
error: Content is protected !!