ಒಟಿಟಿ ಫ್ಲ್ಯಾಟ್ ಫಾರಂನಲ್ಲಿ ಭಜರಂಗಿ2 ರಿಲೀಸ್

ಶಿವರಾಜ್ ಕುಮಾರ್ ನಟನೆಯ ಭಜರಂಗಿ2 ಚಿತ್ರ ಡಿಸೆಂಬರ್ 23ರಂದು ಜೀ5 ಒಟಿಟಿ ಫ್ಲ್ಯಾಟ್ ಫಾರಂನಲ್ಲಿ ಬಿಡುಗಡೆಯಾಗಲಿದೆ.

ಬಾಕ್ಸ್ ಆಫೀಸ್ ನಲ್ಲಿ ಭಜರಂಗಿ2 ಚಿತ್ರ ಯಶಸ್ವಿ ಎನಿಸಿದೆ. ಚಿತ್ರಮಂದಿರಗಳಲ್ಲಿ ಯಶಸ್ಸು ಕಂಡಿದ್ದ ಭಜರಂಗಿ-2 ಈಗ ಒಟಿಟಿ ಪ್ಲ್ಯಾಟ್ ಫಾರ್ಮ್ ನಲ್ಲಿ ಬಿಡುಗಡೆಯಾಗಲಿದ್ದು ಭಜರಂಗಿ ಚಿತ್ರವನ್ನು ಥಿಯೇಟರ್‌ನಲ್ಲಿ ನೋಡಲು ಆಗದ ಆಸಕ್ತರು ಒಟಿಟಿ ಫ್ಲ್ಯಾಟ್ ಫಾರಂನಲ್ಲಿ ಸಿನಿಮಾ ನೋಡಿ ಆನಂದಿಸಬಹುದು.

ಭಜರಂಗಿ2 ಚಿತ್ರ ಅಕ್ಟೋಬರ್ 29ರಂದು ಬಿಡುಗಡೆ ಆಗಿತ್ತು. ಅಂದೇ ಪುನೀತ್ ರಾಜ್ ಕುಮಾರ್ ನಿಧನ ಆದ ಕಾರಣ ಚಿತ್ರ ಪ್ರದರ್ಶನವನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. ಕೆಲ ದಿನಗಳ ಬಳಿಕ ಚಿತ್ರ ಪ್ರದರ್ಶನ ಮತ್ತೆ ಆರಂಭಿಸಲಾಯಿತು. ನಿಧಾನವಾಗಿ ಪ್ರೇಕ್ಷಕರು ಚಿತ್ರಮಂದಿರದ ಕಡೆಗೆ ಹೆಜ್ಜೆ ಮೂಲಕ ಚಿತ್ರ ಯಶಸ್ಸಿನ ಹಾದಿ ಹಿಡಿಯಿತು.

ನಿರ್ದೇಶಕ ಎ. ಹರ್ಷ ನಿರ್ದೇಶನದ ಭಜರಂಗಿ 2 ಚಿತ್ರದಲ್ಲಿ ಶಿವಣ್ಣ, ಭಾವನಾ ಜೊತೆಗೆ ಸೌರವ್ ಲೋಕೇಶ್, ಶಿವರಾಜ್ ಕೆ.ಆರ್.ಪೇಟೆ ಸೇರಿದಂತೆ ಇನ್ನೂ ಹಲವರು ನಟಿಸಿದ್ದಾರೆ. ಹಿರಿಯ ನಟಿ ಶ್ರುತಿ ಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಅದ್ದೂರಿ ಸೆಟ್‌, ಬಹು ತಾರಾಗಣದ ಈ ಚಿತ್ರಕ್ಕೆ ಜಯಣ್ಣ-ಭೋಗೇಂದ್ರ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

ಈ ವರ್ಷದ ಲಾಕ್ ಡೌನ್ ನಂತರ ಕೋಟಿಗೊಬ್ಬ3, ಸಲಗ ಬಳಿಕ ರಿಲೀಸ್ ಆದ ಮೂರನೇ ಬಿಗ್ ಬಜೆಟ್ ಸಿನಿಮಾ ಭಜರಂಗಿ2 ಆಗಿದೆ. ಬಹುತಾರಾಗಣದ ಚಿತ್ರ ಈ ವರ್ಷದ ಯಶಸ್ವಿ ಚಿತ್ರಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.
_______

Be the first to comment

Leave a Reply

Your email address will not be published. Required fields are marked *

Translate »
error: Content is protected !!