ಮನಸೋ ಇಚ್ಚೆ ಅಶ್ಲೀಲ ಚಿತ್ರಗಳನ್ನೇ ನಿರ್ಮಾಣ ಮಾಡುತ್ತಿದ್ದ 25 ಒಟಿಟಿಗಳನ್ನು ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಇಲಾಖೆ ಬ್ಯಾನ್ ಮಾಡಿದೆ.
ಭಾರತದ ಪ್ರಸಾರ ಕಾಯ್ದೆಯನ್ನು ಗಾಳಿಗೆ ತೂರಿ ಅಶ್ಲೀಲ ಚಿತ್ರ ನಿರ್ಮಾಣ ಮಾಡುತ್ತಿದ್ದ ಒಟಿಟಿಗಳನ್ನು ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ಮತ್ತು ಮಾಹಿತಿ ತಂತ್ರಜ್ಞಾನ ನಿಯಮ- 2021 ಅಡಿಯಲ್ಲಿ ತೆಗೆದು ಹಾಕಲು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ ನಿರ್ದೇಶನ ನೀಡಿದೆ.
ಬ್ಯಾನ್ ಆಗಿರುವ ಒಟಿಟಿ: ALTBalaji (ALTT), Ullu, Big Shots App, Desiflix, Boomex, NeonX VIP, Navarasa Lite, Gulab App, Kangan App, Bull App, ShowHit, Jalva App, Wow Entertainment, Look Entertainment, Hitprime, Fugi, Feneo, ShowX, Sol Talkies, Adda TV, HotX VIP, Hulchul App, MoodX, Triflicks, Mojflix.
ಕೇಂದ್ರ ಸರ್ಕಾರ ಬ್ಯಾನ್ ಮಾಡಿರುವ ಒಟಿಟಿ ಆಪ್ ಗಳ ಪೈಕಿ ಏಕ್ತಾ ಕಪೂರ್ ಒಡೆತನ ಆಲ್ಟ್ ಬಾಲಾಜಿ ಕೂಡ ಇದೆ. ಈ ಒಟಿಟಿ ಮೂಲಕ ಅಸಹ್ಯ ಅಶ್ಲೀಲ ಕಾಮ ಪ್ರಚೋದಕ ಚಿತ್ರಗಳನ್ನು ನಿರ್ಮಾಣ ಮಾಡಲಾಗಿತ್ತು.
2020ರಲ್ಲಿ ”ಪಬ್ಲಿಕ್ ಜಾಗೃತಿ ಮಿಷನ್” ಎಂಬ ಟ್ರಸ್ಟ್ , ಬಾಲಾಜಿ ಟೆಲಿಫಿಲ್ಮ್ಸ್ ಮತ್ತು ಆಲ್ಟ್ ಬಾಲಾಜಿಯ ವಿರುದ್ಧ ಕೋರ್ಟ್‌ನ ಮೊರೆ ಹೋಗಿತ್ತು. ಕಳೆದ ವರ್ಷ ”ಗಂಧಿ ಬಾತ್” ವೆಬ್ ಸರಣಿಯಲ್ಲಿ ಅಪ್ರಾಪ್ತ ಬಾಲಕಿಯರ ಅಶ್ಲೀಲ ದೃಶ್ಯಗಳನ್ನು ತೋರಿಸಲಾಗಿದೆ ಎಂದು ಆರೋಪಿಸಿ ”ಆಲ್ಟ್ ಬಾಲಾಜಿ”ಯ ಏಕ್ತಾ ಕಪೂರ್ ಮತ್ತು ಅವರ ತಾಯಿ ಶೋಭಾ ಕಪೂರ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
—





Be the first to comment