ಅಮೆರಿಕದ ಲಾಸ್ ಏಂಜಲೀಸ್ ನಲ್ಲಿ ಕಾಡ್ಗಿಚ್ಚು ಹಬ್ಬಿಸದ್ಯದಲ್ಲೇ ನಡೆಯಬೇಕಿದ್ದ ಆಸ್ಕರ್ ಅವಾರ್ಡ್ ಕಾರ್ಯಕ್ರಮ ರದ್ದಾಗುತ್ತದೆ ಎಂಬ ವದಂತಿ ಕೇಳಿ ಬಂದಿತ್ತು. ಈ ಬಗ್ಗೆ ಸ್ಪಷ್ಟನೆ ಸಿಕ್ಕಿದ್ದು ನಿಗದಿಪಡಿಸಿದ ಮಾರ್ಚ್ 2ರಂದು ಕಾರ್ಯಕ್ರಮ ನಡೆಯಲಿದೆ ಎನ್ನಲಾಗಿದೆ.
ಆಸ್ಕರ್ ಗೆ ಭಾರತದಿಂದ ಕೆಲವು ಸಿನಿಮಾಗಳನ್ನು ಕಳುಹಿಸಲಾಗಿತ್ತು. ನಾಮನಿರ್ದೇಶನಗೊಂಡಿರುವ ಸಿನಿಮಾಗಳಿಗೆ ಮತದಾನ ಪ್ರಕ್ರಿಯೆ ಜನವರಿ 8ರಿಂದ ಆರಂಭಗೊಂಡಿದ್ದು ಜನವರಿ 12ರಂದು ಮತದಾನ ಮುಕ್ತಾಯಗೊಂಡಿದೆ. ಅಂತಿಮ ನಾಮನಿರ್ದೇಶನಗೊಂಡ ಸಿನಿಮಾಗಳ ಹೆಸರನ್ನು ಇಂದು ಪ್ರಕಟಿಸಲಿದೆ. ಆಸ್ಕರ್-2025ರ ಸಮಾರಂಭ ಮಾರ್ಚ್ 2ರಂದು ಓವೇಶನ್ ಹಾಲಿವುಡ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯಲಿದೆ.
ಅಮೆರಿಕದಲ್ಲಿ ಕಾಡ್ಗಿಚ್ಚು ಸಾಕಷ್ಟು ಹಾನಿ ಉಂಟು ಮಾಡಿದೆ. ಈ ಮೊದಲು ‘ಹಾಲಿವುಡ್’ ಸ್ಟುಡಿಯೋಗೂ ಬೆಂಕಿ ಬಿದ್ದಿದೆ. ಅದರ ಲೋಗೋ ಸುಟ್ಟಿದೆ ಎಂದೆಲ್ಲ ಎಐ ವಿಡಿಯೋಗಳನ್ನು ಹರಿಬಿಡಲಾಗಿತ್ತು. ಆದರೆ ಆ ರೀತಿ ಆಗಿಲ್ಲ ಎಂದು ವರದಿ ಆಗಿದೆ.
96 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿ ಆಸ್ಕರ್ ಅವಾರ್ಡ್ ಕಾರ್ಯಕ್ರಮ ರದ್ದಾಗುತ್ತಿದೆ ಎಂದು ವರದಿ ಹರಿದಾಡಿತ್ತು. ಆದರೆ ಆಸ್ಕರ್ ಮೂಲಗಳು ಇದನ್ನು ಅಲ್ಲಗಳೆದಿವೆ. ಈ ಸಂಸ್ಥೆಯಿಂದ ಸಾವಿರಕ್ಕೂ ಅಧಿಕ ಜನರಿಗೆ ಕೆಲಸ ಸಿಕ್ಕಿದೆ. ಪ್ರತಿ ವರ್ಷವೂ ಇದರಿಂದ ಸಾಕಷ್ಟು ಜನರಿಗೆ ಲಾಭ ಆಗುತ್ತಿದೆ. ಕೊವಿಡ್ ಸಂದರ್ಭದಲ್ಲೂ ಇದನ್ನು ನಿಲ್ಲಿಸಿರಲಿಲ್ಲ. ಈ ಬಾರಿಯೂ ಅವಾರ್ಡ್ ಕಾರ್ಯಕ್ರಮ ನಡೆಯಲಿದೆ ಎಂದು ವರದಿ ಆಗಿದೆ.
—
Be the first to comment