ಪ್ರತಿಷ್ಠಿತ ಅಕಾಡೆಮಿ ಆಸ್ಕರ್ ಪ್ರಶಸ್ತಿಗಳು ಘೋಷಣೆಯಾಗಿದ್ದು, ಜಪಾನ್ನ ‘ಡ್ರೈವ್ ಮೈ ಕಾರ್’ಗೆ ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ದೊರೆತಿದೆ.
ಅತ್ಯುತ್ತಮ ನಟ ಪ್ರಶಸ್ತಿಗೆ ವಿಲ್ ಸ್ಮಿತ್ (ಕಿಂಗ್ ರಿಚರ್ಡ್), ಅತ್ಯುತ್ತಮ ನಟಿ ಪ್ರಶಸ್ತಿಗೆ ಜೆಸ್ಸಿಕಾ ಚಸ್ಟೈನ್ (ದಿ ಐಸ್ ಆಫ್ ಟಾಮಿ ಫಾಯೆ) ಪಾತ್ರರಾಗಿದ್ದಾರೆ.
ಇದೇ ವೇಳೆ ‘ಡ್ಯೂನ್’ ಚಿತ್ರಕ್ಕೆ ಆರು ಆಸ್ಕರ್ ಪ್ರಶಸ್ತಿಗಳು ಲಭಿಸಿವೆ. ಅತ್ಯುತ್ತಮ ಧ್ವನಿ ವಿನ್ಯಾಸ, ಅತ್ಯುತ್ತಮ ಸಂಕಲನ, ಅತ್ಯುತ್ತಮ ವಿಶ್ಯುವಲ್ ಎಫೆಕ್ಟ್, ಅತ್ಯುತ್ತಮ ಛಾಯಾಗ್ರಹಣ ವಿಭಾಗಗಳಲ್ಲಿ ಡ್ಯೂನ್ ಚಿತ್ರಕ್ಕೆ ಪ್ರಶಸ್ತಿ ಸಿಕ್ಕಿವೆ.
ಸ್ಟೀವನ್ ಸ್ಪೀಲ್ಬರ್ಗ್ ನಿರ್ದೇಶನದ ‘ವೆಸ್ಟ್ ಸೈಡ್’ ಚಿತ್ರದ ಅಭಿನಯಕ್ಕಾಗಿ ‘ಅರಿಯಾನಾ ಡಿಬೋಸ್’ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ. ‘ಕೊಡ’ ಚಿತ್ರದಲ್ಲಿನ ಅಭಿನಯಕ್ಕಾಗಿ ‘ಟ್ರಾಯ್ ಕೊಟ್ಸೂರ್’ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದಿದ್ದಾರೆ.
ಪ್ರಶಸ್ತಿ ವಿಜೇತ ಚಿತ್ರಗಳ ಪಟ್ಟಿ ಇಲ್ಲಿದೆ.
ಅತ್ಯುತ್ತಮ ಚಿತ್ರ: ಕೊಡ
*ಅತ್ಯುತ್ತಮ ನಿರ್ದೇಶಕ: ಜೇನ್ ಕ್ಯಾಂಪಿಯನ್ (ದ ಪವರ್ ಆಫ್ ದಿ ಡಾಗ್)
*ಅತ್ಯುತ್ತಮ ನಟಿ: ಜೆಸ್ಸಿಕಾ ಚಸ್ಟೈನ್ (ದಿ ಐಸ್ ಆಫ್ ಟಾಮಿ ಫಾಯೆ)
*ಅತ್ಯುತ್ತಮ ನಟ: ವಿಲ್ ಸ್ಮಿತ್ (ಕಿಂಗ್ ರಿಚರ್ಡ್)
*ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ: ಡ್ರೈವ್ ಮೈ ಕಾರ್(ಜಪಾನ್)
*ಅತ್ಯುತ್ತಮ ಪೋಷಕ ನಟ: ಟ್ರಾಯ್ ಕೊಟ್ಸೂರ್(ಕೊಡ)
*ಅತ್ಯುತ್ತಮ ಪೋಷಕ ನಟಿ: ಅರಿಯಾನಾ ಡಿಬೋಸ್(ವೆಸ್ಟ್ ಸೈಡ್)
*ಅತ್ಯುತ್ತಮ ವಿಶ್ಯುವಲ್ ಎಫೆಕ್ಟ್: ಡ್ಯೂನ್
*ಅತ್ಯುತ್ತಮ ಧ್ವನಿ ವಿನ್ಯಾಸ: ಡ್ಯೂನ್
*ಅತ್ಯುತ್ತಮ ಸಂಕಲನ: ಡ್ಯೂನ್
*ಅತ್ಯುತ್ತಮ ಛಾಯಾಗ್ರಹಣ: ಡ್ಯೂನ್
*ಅತ್ಯುತ್ತಮ ಮೂಲ ಚಿತ್ರಕಥೆ: ಬೆಲ್ಫಾಸ್ಟ್
*ಅತ್ಯುತ್ತಮ ಸಾಕ್ಷ್ಯಚಿತ್ರ: ಸಮ್ಮರ್ ಆಫ್ ಸೋಲ್
*ಅತ್ಯುತ್ತಮ ಅನಿಮೇಟೆಡ್ ಚಲನಚಿತ್ರ: ಎನ್ಕಾಂಟೊ
*ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರ: ದಿ ಕ್ವೀನ್ ಆಫ್ ಬಾಸ್ಕೆಟ್ಬಾಲ್
*ಅತ್ಯುತ್ತಮ ಅನಿಮೇಟೆಡ್ ಕಿರುಚಿತ್ರ: ದಿ ವಿಂಡ್ಶೀಲ್ಡ್ ವೈಪರ್
*ಅತ್ಯುತ್ತಮ ಲೈವ್ ಆಯಕ್ಷನ್ ಕಿರುಚಿತ್ರ: ದಿ ಲಾಂಗ್ ಗುಡ್ಬೈ
*ಅತ್ಯುತ್ತಮ ಹಾಡು: ನೋ ಟೈಮ್ ಟು ಡೈ (ನೋ ಟೈಮ್ ಟು ಡೈ)
*ಅತ್ಯುತ್ತಮ ಮೇಕಪ್, ಹೇರ್ ಸ್ಟೈಲ್: ದಿ ಐಸ್ ಆಫ್ ಟಾಮಿ ಫಾಯೆ.
ಭಾರತದ ಯಾವುದೇ ಚಿತ್ರಕ್ಕೆ ಪ್ರಶಸ್ತಿ ಸಿಗದೇ ಇರುವುದು ಸಿನಿಪ್ರಿಯರಿಗೆ ನಿರಾಸೆ ಮೂಡಿಸಿದೆ.
__

Be the first to comment