ಪ್ರತಿಷ್ಠಿತ ಆಸ್ಕರ್ 2024ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ದಿನಾಂಕ ನಿಗದಿಯಾಗಿದೆ.
ಚಿತ್ರೋದ್ಯಮಕ್ಕೆ ನೀಡಲಾಗುವ ಅತ್ಯುತ್ತಮ ಪ್ರಶಸ್ತಿಯಾದ ಆಸ್ಕರ್ ಪ್ರಶಸ್ತಿ ಸಮಾರಂಭ 2024 ರ ಮಾರ್ಚ್ 10 ರಂದು ಅದ್ದೂರಿಯಾಗಿ ನಡೆಯಲಿದೆ.
ಅಕಾಡೆಮಿಯು ಆಸ್ಕರ್ ಸಾಮಾನ್ಯ ವಿಭಾಗಕ್ಕೆ ಅರ್ಜಿ ಸಲ್ಲಿಸಲು 2023 ರ ನವೆಂಬರ್ 18 ರವರೆಗೆ ಗಡುವು ನಿಗದಿಪಡಿಸಿದೆ. ತಾತ್ಕಾಲಿಕ ಪಟ್ಟಿಯ ಪ್ರಾಥಮಿಕ ಮತದಾನವು ಡಿಸೆಂಬರ್ 18 ರಂದು ಪ್ರಾರಂಭವಾಗುತ್ತದೆ. ಡಿಸೆಂಬರ್ 21 ರಂದು ಫಲಿತಾಂಶಗಳನ್ನು ಪ್ರಕಟಿಸಲಾಗುತ್ತದೆ. ನಾಮನಿರ್ದೇಶನಗಳ ಮತದಾನದ ಅವಧಿಯು 2024 ರ ಜನವರಿ 11 ರಿಂದ 16 ರವರೆಗೆ ನಡೆಯುತ್ತದೆ.
ಜನವರಿ 23 ರಂದು ಅಧಿಕೃತ ನಾಮನಿರ್ದೇಶನಗಳ ಪಟ್ಟಿಯನ್ನು ಘೋಷಿಸಲಾಗುತ್ತದೆ. ಫೆಬ್ರವರಿ 22 ರಂದು ಪ್ರಾರಂಭವಾಗುವ ನಾಮ ನಿರ್ದೇಶನಗಳು ಮತ್ತು ಅಂತಿಮ ಮತದಾನದ ಪ್ರಕ್ರಿಯೆಯು 4 ವಾರ ನಡೆಯುತ್ತದೆ.
ಆಸ್ಕರ್ ಸಮಾರಂಭವು ಲಾಸ್ ಏಂಜಲೀಸ್ನ ಡಾಲ್ಫಿ ಥಿಯೇಟರ್ನಲ್ಲಿ ನಡೆಯಲಿದೆ. ಕಾರ್ಯಕ್ರಮವೂ ಎಬಿಸಿ ಸೇರಿದಂತೆ 200 ಕ್ಕೂ ಹೆಚ್ಚು ಫ್ಲಾಟ್ಫಾರ್ಮ್ಗಳಲ್ಲಿ ನೇರಪ್ರಸಾರವಾಗಲಿದೆ.
—-
Be the first to comment