‘ರೋಸಿ’ ಮೂಲಕ ‘ಒರಟ’ ಪ್ರಶಾಂತ್‌ ರೀಎಂಟ್ರಿ

ಲೂಸ್ ಮಾದ ಯೋಗೀಶ್ ಅವರ 50ನೇ ಚಿತ್ರ ‘ರೋಸಿ’ ಸಿನಿಮಾದಲ್ಲಿ ‘ಒರಟ ಐ ಲವ್ ಯೂ’ ಖ್ಯಾತಿಯ ಪ್ರಶಾಂತ್ ಪ್ರಮುಖ ಪಾತ್ರನಿರ್ವಹಿಸುತ್ತಿದ್ದು, ಅಣ್ಣ ಸ್ವಾಮಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಶೂನ್ಯ ನಿರ್ದೇಶನದ  ‘ರೋಸಿ’ ಸಿನಿಮಾ ಮೂಲಕ ಸುದೀರ್ಘ ವಿರಾಮದ ನಂತರ ಪ್ರಶಾಂತ್ ನಟನೆಗೆ ರೀಎಂಟ್ರಿ ಮಾಡುತ್ತಿದ್ದಾರೆ. ಚಿತ್ರತಂಡ ಪ್ರಶಾಂತ್ ಪಾತ್ರವನ್ನು ಪರಿಚಯಿಸುವ ಪೋಸ್ಟರ್ ನ್ನು ಬಿಡುಗಡೆ ಮಾಡಿದೆ.

”ನನಗೆ ಅನೇಕ ಅವಕಾಶಗಳು ಬಂದವು. ಆದರೆ ನಿರ್ದೇಶಕ ಶೂನ್ಯ ಅವರು ಹೇಳಿದ ಕಥೆಗೆ ನಾನು ಸಾಕಷ್ಟು ಆಕರ್ಷಿತನಾಗಿದ್ದೆ. ನನ್ನ ಪಾತ್ರ ವಿನ್ಯಾಸ ವಿಶೇಷವಾಗಿ ಆಕರ್ಷಕವಾಗಿತ್ತು. ಅದಕ್ಕಿಂತ ಹೆಚ್ಚಾಗಿ ನಾನು ಯೋಗಿ ಜೊತೆ ಕೆಲಸ ಮಾಡುವ ಹಂಬಲವನ್ನು ಹೊಂದಿದ್ದೇನೆ” ಎಂದಿದ್ದಾರೆ ಪ್ರಶಾಂತ್.

”ಇನ್ನೆರಡು ಪಾತ್ರಗಳ ಪರಿಚಯ ಬಾಕಿಯಿದೆ” ಎಂದು ಶೂನ್ಯ ತಿಳಿಸಿದ್ದಾರೆ. ಪಾತ್ರಗಳ ಚಿತ್ರೀಕರಣವನ್ನು ಪೂರ್ಣಗೊಳಿಸಿದ ನಂತರವೇ ಚಿತ್ರತಂಡ ಅವರ ಹೆಸರನ್ನು ಬಹಿರಂಗ ಪಡಿಸಲಿದೆ.

ಡಿವೈ ರಾಜೇಶ್ ಮತ್ತು ಡಿವೈ ವಿನೋದ್ ನಿರ್ಮಾಣದ ‘ರೋಸಿ’ ಚಿತ್ರಕ್ಕೆ ಎಸ್‌ಕೆ ರಾವ್ ಅವರ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ, ಗುರುಕಿರಣ್ ಅವರ ಸಂಗೀತ ನಿರ್ದೇಶನವಿದೆ.

ರೋಸಿಯನ್ನು ಸ್ಟೈಲಿಶ್ ಗ್ಯಾಂಗ್‌ಸ್ಟರ್ ನಾಟಕ ಎಂದಿದ್ದಾರೆ ಶೂನ್ಯ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!