ಜೀ಼ ಕನ್ನಡದಲ್ಲಿ ಹೊಸ ಬರಹಗಾರಿಗೆ ಅವಕಾಶ!

ಜೀ಼ ಕನ್ನಡದಲ್ಲಿ ಹೊಸ ಬರಹಗಾರಿಗೆ ಅವಕಾಶ!

ಮನರಂಜನೆಗೆ ಮತ್ತೊಂದು ಹೆಸರೇ ಜೀ಼ ಕನ್ನಡ. ತನ್ನ ವಿಭಿನ್ನ ಕಥಾ ಹಂದರದಿಂದ ನಿಮ್ಮ ಮನಕದ್ದ ಜೀ಼ ಕನ್ನಡ ಈಗ ನಿಮಗಾಗಿ ಮತ್ತೊಂದು ಸರ್ಪ್ರೈಸ್ ತಂದಿದೆ. ಹೌದು, ಆ ವಿಭಿನ್ನ ಕಥೆ ಬರೆಯುವ ಬರಹಗಾರರು ನೀವೇ ಯಾಕಾಗಬಾರದು?

ಚೆನ್ನಾಗಿ ಕಥೆ ಬರೆಯುತ್ತೀರಾ? ಒಳ್ಳೆ ಸಂಭಾಷಣೆಯ ಕಲೆ ನಿಮ್ಮಲ್ಲಿ ಇದ್ಯಾ? ನೀವು ಬರಹಗಾರರಾಗಬೇಕೇ? ನಿಮ್ಮ ಪ್ರತಿಭೆಗೆ ತಕ್ಕ ಪ್ರತಿಫಲ ಸಿಗುತ್ತಿಲ್ಲವೇ? ಡೋಂಟ್ ವರಿ. ಪ್ರತಿಭಾವಂತ ಬರಹಗಾರರಿಗೆ ಎಲ್ಲಿಯೂ ಸಿಗದ ಅವಕಾಶವನ್ನು ಹೊತ್ತು ಜೀ ಕನ್ನಡ ನಿಮ್ಮ ಮುಂದೆ ಬರ್ತಿದೆ. ನಿಮ್ಮೊಳಗಿರುವ ಕಥೆಗಾರ ಮತ್ತು ಸಂಭಾಷಣೆಕಾರರಿಗೆ ಇದು ಅತ್ಯುತ್ತಮ ವೇದಿಕೆಯಾಗಿದ್ದು, ನಿಮ್ಮ ಕಲೆಗೆ ಈ ವೇದಿಕೆಯಲ್ಲಿ ಬೆಲೆ ಸಿಗಲಿದೆ. ಜೀ ಕನ್ನಡ ‘ರೈಟರ್ಸ್ ಆಡಿಷನ್‘ನಲ್ಲಿ ನಿಮ್ಮ ಅತ್ಯುತ್ತಮ ಬರವಣಿಗೆ ಸಾಮರ್ಥ್ಯವನ್ನು ಪ್ರದರ್ಶಿಸಲು ಒಂದು ಅವಕಾಶವನ್ನು ನೀಡುವುದರ ಜೊತೆಗೆ ಉದ್ಯೋಗಾವಕಾಶವನ್ನು ಕಲ್ಪಿಸಿಕೊಡುತ್ತಿದೆ.

ಜೀ಼ ಕನ್ನಡದಲ್ಲಿ ಹೊಸ ಬರಹಗಾರಿಗೆ ಅವಕಾಶ!

ಇದೇ ಜನವರಿ 11 ರಂದು ಶನಿವಾರ ಬೆಳಗ್ಗೆ 9 ಗಂಟೆಗೆ 3 ಜಿಲ್ಲೆಗಳಲ್ಲಿ ಆಡಿಷನ್ ಶುರುವಾಗಲಿದೆ. ಶನಿವಾರದಂದು ದಾವಣಗೆರೆಯ ಬಿ.ಎಸ್. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜು, ಎಸ್. ಎಸ್, ಲೇಔಟ್ ಎ ಬ್ಲಾಕ್, ಎಸ್.ಎಸ್. ಲೇಔಟ್, ಶಿವಮೊಗ್ಗದ ಬಸವೇಶ್ವರ ವಿದ್ಯಾಸಂಸ್ಥೆ, ತಾಲೂಕು ಕಚೇರಿ ರಸ್ತೆ, ಕಾರ್ಪೊರೇಷನ್ ಹತ್ತಿರ ಹಾಗೂ ಮಂಗಳೂರಿನ ಮನೆಲ್ ಶ್ರೀನಿವಾಸ್ ನಾಯಕ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, MSNIM ಬೆಸೆಂಟ್ ಕ್ಯಾಂಪಸ್, ಬೊಂದೇಲ್ ನಲ್ಲಿ ನಡೆಯಲಿದೆ.

ಜನವರಿ 12 ರಂದು ಭಾನುವಾರ ಬೆಳಗ್ಗೆ 9 ಗಂಟೆಗೆ ಬೆಂಗಳೂರು, ಮೈಸೂರು ಮತ್ತು ತುಮಕೂರಿನಲ್ಲಿ ಆಡಿಷನ್ ನಡೆಯಲಿದೆ. ಬೆಂಗಳೂರಿನ ಸೈಂಟ್ ಸೋಫಿಯಾ ಕಾನ್ವೆಂಟ್ ಹೈ ಸ್ಕೂಲ್, ಸಿ ಎನ್ ನಂ.06, 10ನೇ ಬ್ಲಾಕ್, 2ನೇ ಫೇಸ್, ನಾಗರಭಾವಿ, ಮೈಸೂರಿನ ಶ್ರೀ ವಿವೇಕ ಬಾಲೋದ್ಯಾನ ಶಾಲೆ, 2ನೇ ಮುಖ್ಯರಸ್ತೆ, ಸರ್ಕಾರಿ ಪ್ರೌಢಶಾಲೆ ಎದುರು ಜಯನಗರ, ಕುವೆಂಪುನಗರದಲ್ಲಿ ಹಾಗು ತುಮಕೂರಿನ ಸೈಂಟ್ ಮೋಸಸ್ ಆಂಗ್ಲ ಶಾಲೆ ಆದರ್ಶನಗರ, ತುಡಾ ಕಚೇರಿ ಹತ್ತಿರ, ಬೆಳಗುಂಬು ರಸ್ತೆಯಲ್ಲಿ ನಡೆಯಲಿದೆ.

ಬನ್ನಿ ಜೀ಼ ಕನ್ನಡ ನಡೆಸಿಕೊಡುತ್ತಿರುವ ರೈಟರ್ಸ್ ಆಡಿಷನ್ ನಲ್ಲಿ ಪಾಲ್ಗೊಂಡು ಬರಹಗಾರರರಾಗುವ ನಿಮ್ಮ ಕನಸನ್ನು ನನಸಾಗಿಸಿ!

Be the first to comment

Leave a Reply

Your email address will not be published. Required fields are marked *

Translate »
error: Content is protected !!