‘ಆಪರೇಷನ್ ಸಿಂಧೂರ’ ಸಿನಿಮಾವನ್ನು ನಿಕಿ ವಿಕಿ ಭಗ್ನಾನಿ ಫಿಲ್ಮ್ಸ್ & ದಿ ಕಂಟೆಂಟ್ ಎಂಜಿನಿಯರ್ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸಲು ಮುಂದಾಗಿವೆ.
ಈ ಚಿತ್ರದಲ್ಲಿ ಯಾರೆಲ್ಲಾ ನಟಿಸಲಿದ್ದಾರೆ ಅನ್ನೋದನ್ನು ಚಿತ್ರತಂಡ ರಿವೀಲ್ ಮಾಡಿಲ್ಲ. ಇಂದು ಪೋಸ್ಟರ್ ಜೊತೆಗೆ ಟೈಟಲ್ ಅನೌನ್ಸ್ ಮಾಡಲಾಗಿದೆ. ಮಹಿಳಾ ಸೈನಿಕರೊಬ್ಬರು ಸೇನಾ ಸಮವಸ್ತ್ರದಲ್ಲಿ ನಿಂತು ಹಣೆಗೆ ಕುಂಕುಮ ಇಡುವ ಪೋಸ್ಟರ್ ರಿಲೀಸ್ ಮಾಡಲಾಗಿದೆ.
ಪಾಕ್ ವಿರುದ್ಧ ಭಾರತ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆ ದೇಶಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ. ಪಹಲ್ಗಾಮ್ ದಾಳಿ ನಡೆಸಿ ಭಾರತೀಯ ಹೆಣ್ಣು ಮಕ್ಕಳ ಸಿಂಧೂರ ಅಳಿಸಿದ ಭಯೋತ್ಪಾಕದ ವಿರುದ್ಧ ಭಾರತ ನಡೆಸಿ ಈ ಕಾರ್ಯಾಚರಣೆಯನ್ನು ಸಿನಿಮಾ ರೂಪದಲ್ಲಿ ತೆರೆಗೆ ತರುವ ದೊಡ್ಡ ಪ್ರಯತ್ನಗಳು ನಡೆಯುತ್ತಿದೆ. ನಿರ್ಮಾಪಕರು ನಾ ಮುಂದು ತಾ ಮುಂದೆ ಅಂತ ಟೈಟಲ್ ರಿಜಿಸ್ಟ್ರೇಷನ್‌ಗೆ ಅರ್ಜಿ ಹಾಕಿದ್ದರು.
ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಸಿ 29ಕ್ಕೂ ಹೆಚ್ಚು ಪ್ರವಾಸಿಗರನ್ನು ಉಗ್ರರು ಕೊಂದು ಹಾಕಿದ್ದರು. ಭಾರತ ಪಹಲ್ಗಾಮ್ ದಾಳಿಗೆಆಪರೇಷನ್ ಸಿಂಧೂರ ಕಾರ್ಯಾಚರಣೆ ಮೂಲಕ 9 ಭಯೋತ್ಪಾದನ ತಾಣಗಳನ್ನು ಧ್ವಂಸ ಮಾಡಲಾಗಿದೆ. ಕಾಯಾರ್ಚರಣೆಯಲ್ಲಿ 70ಕ್ಕೂ ಹೆಚ್ಚು ಉಗ್ರರನ್ನು ಭಾರತ ಕೊಂದು ಹಾಕಿದೆ.
—-

Be the first to comment