‘ಆಪರೇಷನ್‌ ಸಿಂಧೂರʼ ಟೈಟಲ್ ಗೆ ಡಿಮ್ಯಾಂಡ್

‘ ಆಪರೇಷನ್‌ ಸಿಂಧೂರ್‌’  ಶೀರ್ಷಿಕೆಯನ್ನು ನೋಂದಾಯಿಸಲು  ಬಾಲಿವುಡ್‌ ನಿರ್ಮಾಪಕರು ತುದಿಗಾಲಲ್ಲಿ ನಿಂತಿದ್ದಾರೆ.

ಮಹಾವೀರ್ ಜೈನ್ ಫಿಲ್ಮ್ಸ್ ಈ ಶೀರ್ಷಿಕೆಯನ್ನು ನೋಂದಾಯಿಸಿದ ಮೊದಲ ಬ್ಯಾನರ್ ಆಗಿದೆ.  ಖ್ಯಾತ ನಿರ್ದೇಶಕ ಮಧುರ್ ಭಂಡಾರ್ಕರ್ ಕೂಡ ಈ ಶೀರ್ಷಿಕೆಯನ್ನು ನೋಂದಾಯಿಸಿದ್ದಾರೆ.  ಬಾಲಿವುಡ್‌ ಖ್ಯಾತ ನಿರ್ಮಾಣ ಸಂಸ್ಥೆಗಳಾದ ಜೀ ಸ್ಟುಡಿಯೋಸ್ ಮತ್ತು ಟಿ-ಸೀರೀಸ್ ಈ ಶೀರ್ಷಿಕೆಯನ್ನು ನೋಂದಾಯಿಸಿದ ನಿರ್ಮಾಣ ಸಂಸ್ಥೆಗಳು. ಈ ಎಲ್ಲಾ ಬ್ಯಾನರ್‌ಗಳು   ಇತ್ತೀಚಿನ ಕಾರ್ಯಾಚರಣೆ ಮತ್ತು ಪಹಲ್ಗಾಮ್ ದಾಳಿಯನ್ನು ಆಧರಿಸಿ ಈ ಶೀರ್ಷಿಕೆಯಡಿಯಲ್ಲಿ ಸಿನಿಮಾ ನಿರ್ಮಿಸಲು ಯೋಜನೆಗಳನ್ನು ಹಾಕಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ನಿಯಮಗಳ ಪ್ರಕಾರ ಮೊದಲು ನೋಂದಾಯಿಸಿದ ನಿರ್ಮಾಪಕರಿಗೆ ಶೀರ್ಷಿಕೆ ಸಿಗುತ್ತದೆ.  ಯಾವ ಬ್ಯಾನರ್ ಅಂತಿಮವಾಗಿ ಈ ಶೀರ್ಷಿಕೆಯೊಂದಿಗೆ ಚಿತ್ರವನ್ನು ಘೋಷಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಸಿ 29ಕ್ಕೂ ಹೆಚ್ಚು ಪ್ರವಾಸಿಗರನ್ನು ಉಗ್ರರು ಕೊಂದು ಹಾಕಿದ್ದರು. ಪಹಲ್ಗಾಮ್‌ ದಾಳಿಗೆ ಭಾರತ ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಮೂಲಕ  9 ಭಯೋತ್ಪಾದನ ತಾಣಗಳನ್ನು  ಧ್ವಂಸ ಮಾಡಲಾಗಿದೆ. 25 ನಿಮಿಷದಲ್ಲಿ ನಡೆದ   ಕಾಯಾರ್ಚರಣೆಯಲ್ಲಿ 70ಕ್ಕೂ ಹೆಚ್ಚು   ಉಗ್ರರನ್ನು ಭಾರತ ಉಡೀಸ್‌ ಮಾಡಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!