“ಆಪರೇಷನ್ ಕೊಂಬುಡಿಕ್ಕಿ” ನಾಯಕ ಕಿಶೋರ್

ಹಿರಿಯ ನಿರ್ದೇಶಕ ಎಸ್ ಮಹೇಂದರ್ ನಿರ್ದೇಶನದ  “ಆಪರೇಷನ್ ಕೊಂಬುಡಿಕ್ಕಿ” ಚಿತ್ರದಲ್ಲಿ ಕಿಶೋರ್ ನಾಯಕರಾಗಿ ನಟಿಸುತ್ತಿದ್ದಾರೆ.

“ಶಿವಾಜಿ ಸುರಕ್ಕಲ್” ಡಿಟೆಕ್ಟಿವ್ ಸರಣಿಗಳ ನಿರ್ಮಾಪಕ ಅನುಪ್ ಹನುಮಂತೇಗೌಡ  ತಮ್ಮ ಮೂರನೇ ನಿರ್ಮಾಣದ ಚಿತ್ರ “ಆಪರೇಷನ್ ಕೊಂಬುಡಿಕ್ಕಿ” ವನ್ನು ನಿರ್ಮಿಸಲು ಮುಂದಾಗಿದ್ದಾರೆ‌. ಅನುಪ್‌ ಹನುಮಂತೇಗೌಡ   “ಸಿಲ್ವರ್‌ ಸ್ಕ್ರೀನ್‌ ಸ್ಟುಡಿಯೋಸ್” ಎಂಬ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿ ಅದರ ಅಡಿಯಲ್ಲಿ “ಆಪರೇಷನ್‌ ಕೊಂಬುಡಿಕ್ಕಿ” ಎಂಬ ಬಿಗ್ ಬಜೆಟ್‌ ಚಿತ್ರ ನಿರ್ಮಾಣದ ಸಾಹಸಕ್ಕೆ ಕೈ ಹಾಕುತ್ತಿದ್ದಾರೆ.

 “ಕಂಠಿ” ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಪ್ರಸ್ತುತ ದಕ್ಷಿಣ ಭಾರತದ ಬಹು ಬೇಡಿಕೆಯ ನಟರಾಗಿರುವ ಅಪ್ಪಟ ಕನ್ನಡಿಗ ಕಿಶೋರ್‌ ಅವರು ಈ ಚಿತ್ರದ ನಾಯಕನಾಗಿ ಅಭಿನಯಿಸುತ್ತಿದ್ದಾರೆ.  ಕೆ.ಜಿ.ಎಫ್‌, ಸಲಾರ್‌ ಖ್ಯಾತಿಯ ರವಿ ಬಸ್ರೂರ್‌ ರವರು ಸಂಗೀತ ನೀಡಲಿದ್ದಾರೆ.

ಛಾಯಾಗ್ರಾಹಕರಾಗಿ ಹೆಬ್ಬುಲಿ, ಕ್ರಾಂತಿ ಸಿನಿಮಾಗಳ ಖ್ಯಾತಿಯ ಕರುಣಾಕರ್‌,   ದೀಪು.ಎಸ್.ಕುಮಾರ್‌ ಅವರು ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಕನ್ನಡದ ಹೆಸರಾಂತ ಕಲಾವಿದರು ಹಾಗೂ ತಂತ್ರಜ್ಞರ ಸಮಾಗಮದಲ್ಲಿ ಈ ಚಿತ್ರ ಅದ್ದೂರಿಯಾಗಿ ಮೂಡಿ ಬರಲಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!