ಈ ವಾರ ತೆರೆಗೆ ‘ಒಂಟಿ’

ಸಾಯಿರಾಂ ಕ್ರಿಯೇಷನ್ಸ್ ಲಾಂಛನದಲ್ಲಿ ಆರ್ಯ ಅವರು ನಿರ್ಮಿಸಿರುವ `ಒಂಟಿ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಶ್ರೀ(ಒರಟ ಐ ಲವ್ ಯು) ನಿರ್ದೇಶನದ ಈ ಚಿತ್ರದ ನಾಯಕರಾಗಿ ಚಿತ್ರದ ನಿರ್ಮಾಪಕರೂ ಆಗಿರುವ ಆರ್ಯ ಅಭಿನಯಿಸಿದ್ದಾರೆ. ಈ ಹಿಂದೆ `ಈ ಸಂಜೆ` ಚಿತ್ರದಲ್ಲಿ ನಾಯಕರಾಗಿ ನಟಿಸಿದ್ದ ಆರ್ಯ ಅವರಿಗೆ ಇದು ನಾಯಕರಾಗಿ ದ್ವಿತೀಯ ಚಿತ್ರ. ಈ ಹಿಂದೆ ಕಿಚ್ಚ ಸುದೀಪ ಅಭಿನಯದ `ಮೈ ಆಟೋಗ್ರಾ¥sóï`, `ನಂ 73 ಶಾಂತಿ ನಿವಾಸ` ಮುಂತಾದ ಚಿತ್ರಗಳಲ್ಲೂ ಆರ್ಯ ನಟಿಸಿದ್ದಾರೆ.
ಕೆ.ಕಲ್ಯಾಣ್ ಹಾಗೂ ಡಾ||ವಿ.ನಾಗೇಂದ್ರಪ್ರಸಾದ್ ಬರೆದಿರುವ ಹಾಡುಗಳಿಗೆ ಮನೋಜ್.ಎಸ್(ಶ್ರೀಲಂಕ) ಸಂಗೀತ ನೀಡಿದ್ದಾರೆ. ಕೆ.ಶಶಿಧರ್ ಛಾಯಾಗ್ರಹಣ, ಕುಮಾರ್ ಕೋಟೆಕೊಪ್ಪ ಸಂಕಲನ, ಮುರಳಿ ನೃತ್ಯ ನಿರ್ದೇಶನ ಹಾಗೂ ಮಾಸ್ ಮಾದ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
ಆರ್ಯ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿ ಮೇಘನಾರಾಜ್. ದೇವರಾಜ್, ಗಿರಿಜಾ ಲೋಕೇಶ್, ಶರತ್ ಲೋಹಿತಾಶ್ವ, ನೀನಾಸಂ ಅಶ್ವತ್, ಮಜಾಟಾಕೀಸ್ ಪವನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

This Article Has 1 Comment
  1. Pingback: Digital transformation

Leave a Reply

Your email address will not be published. Required fields are marked *

Translate »
error: Content is protected !!