ಕಿರುತೆರೆ ಖ್ಯಾತಿಯ ಯುವಜೋಡಿ ಜಗ್ಗಪ್ಪ, ಸುಶ್ಮಿತಾ ಅಭಿನಯದ, ವೇಂಪಲ್ಲಿ ಬಾವಾಜಿ ಅವರ ನಿರ್ದೇಶನದ ಆನ್ಲೈನ್ ಮದುವೆ, ಆïಲೈನ್ ಶೋಭನ ಚಿತ್ರದ ಟ್ರೈಲರ್ ಹಾಗೂ ೨ ಹಾಡುಗಳ ಪ್ರದರ್ಶನ ಇತ್ತೀಚೆಗೆ ನಡೆಯಿತು, ಆನ್ ಲೈನ್ ಆಪ್ ಮೂಲಕ ಜೊತೆಯಾದ ಯುವಜೋಡಿಯ ಸುತ್ತ ನಡೆಯುವ ಹಾಸ್ಯಪ್ರದಾನ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಅಪ್ಸರ ಮೂವೀಸ್ ಬ್ಯಾನರ್ ಅಡಿಯಲ್ಲಿ ವೇಂಪಲ್ಲಿ ಬಾವಾಜಿ ಅವರೇ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್ ಪಡೆದೊರುವ ಈ ಚಿತ್ರವನ್ನು ಮುಂದಿನ ತಿಂಗಳು ತೆರೆಗೆ ತರುವ ಯೋಜನೆ ನಿರ್ಮಾಪಕರದ್ದು. ಜಗಪ್ಪ, ಸುಶ್ಮಿತ, ಸೀರುಂಡೆ ರಘು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ವೇಂಪಲ್ಲಿ ಬಾವಾಜಿ ಪೂರ್ಣ ಪ್ರಮಾಣದ ಎಂಟರ್ಟೈನರ್ ಕಥಾಹಂದರ ಈ ಚಿತ್ರದಲ್ಲಿದ್ದು, ಈ ಕಥೆಗೆ ಯಾರು ಸೂಟ್ ಆಗ್ತಾರೆ ಅಂತ ಹುಡುಕಿದಾಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್ ಆಗಿದ್ದ ಜಗಪ್ಪ , ಸುಶ್ಮಿತಾ ಸಿಕ್ಕರು. ಇಡೀ ಚಿತ್ರದಲ್ಲಿ ನಗದೇ ಇರೋದಕ್ಕೆ ಗ್ಯಾಪ್ ಕೊಟ್ಟಿಲ್ಲ, ನಗದೇ ಇರುವವರಿಗೆ ಲಕ್ಷ ರೂಪಾಯಿ ಬಹುಮಾನ ಕೊಡುತ್ತೇವೆ. ಈ ಚಿತ್ರಕ್ಕೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರದ ಅತ್ತಿಬೆಲೆ ಸುತ್ತಮುತ್ತ ಅಲ್ಲದೇ ಹಾಡುಗಳನ್ನು ಆನೇಕಲ್ನ ಸುಗ್ಗಿ ರೆಸಾರ್ಟ್ ಹಾಗೂ ಕೋರಮಂಗಲದ ಪಬ್ವೊಂದರಲ್ಲಿ ಚಿತ್ರೀಕರಣ ನಡೆಸಿದ್ದೇವೆ. ಈಗಿನ ಯೂಥ್ ಎಲ್ಲದಕ್ಕೂ ಸೋಷಿಯಲ್ ಮೀಡಿಯಾ ನೋಡುತ್ತಾರೆ, ಅದೇರೀತಿ ಇದ್ದ ನಾಯಕ ನಾಯಕಿ ಹೇಗೆ ಮದುವೆಯಾಗ್ತಾರೆ ಅಂತ ಸಿನಿಮಾದಲ್ಲಿ ಹೇಳಿದ್ದೇವೆ. ಮನರಂಜನೆಗಾಗಿ ಮಾಡಿದ ಚಿತ್ರವಿದು ಎಂದು ಹೇಳಿದರು, ನಂತರ ನಾಯಕಿ ಸುಶ್ಮಿತಾ ಮಾತನಾಡುತ್ತ ಆರಂಭದಲ್ಲಿ ಹಾಡು ಇದ್ದಿಲ್ಲ, ನಂತರ ಸೇರಿಸಲಾಯಿತು, ಆಡಂಬರ ಅಬ್ಬರ ಇಲ್ಲದ ಫ್ಯಾಮಿಲಿ ಸ್ಟೋರಿಯಿದು ಎಂದರು.
ನಂತರ ನಾಯಕ ಜಗಪ್ಪ ಮಾತನಾಡಿ ಚಿತ್ರದಲ್ಲಿ ಎಲ್ಲ ಪಾತ್ರಗಳೂ ಲೀಡ್ ಆಗಿವೆ, ನಾನು ಮದುವೆಯಾಗಲು ಹುಡುಗಿಯನ್ನು ಹುಡುಕುತ್ತ ಇರುತ್ತೇನೆ, ಆಗ ಆನ್ಲೈನ್ ಆಪ್ನಲ್ಲಿ ಹುಡುಗಿಯಬ್ಬಳು ಸಿಗುತ್ತಾಳೆ. ಗಂಡ ಹೆಂಡತಿಯ ಜಗಳದ ಡೈಲಾಗ್ಗಳು ಚೆನ್ನಾಗಿ ಬಂದಿವೆ ಎಂದು ಹೇಳಿದರು, ನಾಯಕಿಯ ಸಹೋದರನಾಗಿ ಕಾಣಿಸಿಕೊಂಡಿರುವ ಸೀರುಂಡೆ ರಘು ಮಾತನಾಡಿ ನಾವೆಲ್ಲ ರಿಯಾಲಿಟಿ ಶೋನಿಂದ ಬಂದವರು, ೮ ವರ್ಷಗಳಿಂದಲೂ ಸ್ನೇಹಿತರು ಎಂದು ಹೇಳಿಕೊಂಡರು.
ಸಂಗೀತ ನಿರ್ದೇಶಕ ಅರುಣ್ ಪ್ರಸಾದ್ ಮಾತನಾಡುತ್ತ ಬಾವಾಜಿ ನನಗೆ ೮ ವರ್ಷಗಳಿಂದ ಸ್ನೇಹಿತರು, ಉತ್ತಮ ಕಾರ್ಟೂನಿಸ್ಟ್ ಕೂಡ, ಅಡ್ಜಸ್ಟ್ ಮಾಡ್ಕೊಳಿ ಸಾಂಗ್ ನಾನೇ ಬರೆದಿದ್ದೇನೆ ಎಂದು ಹೇಳಿದರು. ನಿರ್ಮಾಪಕ ಕುಮಾರ್ ಮಾತನಾಡಿ ಬಾವಾಜಿ ನನಗೆ ತುಂಬಾ ವರ್ಷಗಳ ಸ್ನೇಹಿತರು, ಒಂದೊಳ್ಳೇ ಸಿನಿಮಾ ಮಾಡಿದ್ದೇವೆ ಎಂದು ಹೇಳಿದರು.
ಜಗಪ್ಪ, ಸುಶ್ಮಿತ, ಸೀರುಂಡೆ ರಘು, ಗಜೇಂದ್ರ, ರಾಘವಿ ಸೇರಿದಂತೆ ಗಿಚ್ಚಿ ಗಿಲಿಗಿಲಿ, ಮಜಾಭಾರತ, ಕಾಮಿಡಿ ಕಿಲಾಡಿಗಳು, ಕಾರ್ಯಕ್ರಮದ ಅನೇಕ ಕಲಾವಿದರು ಅಲ್ಲದೆ ಯಶಸ್ವಿನಿ, ಚಂದನ, ಶರಣ್ಯರೆಡ್ಡಿ ಅಲ್ಲದೆ ಆಂಕರ್ ದಯಾನಂದ್ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಾಹಿತ್ಯ ಹಾಗೂ ಸಂಭಾಷಣೆಯನ್ನು ನಿರ್ದೇಶಕ ವೇಂಪಲ್ಲಿ ಬಾವಾಜೀ ಅವರೇ ಬರೆದಿದ್ದಾರೆ. ಬಾಲು ಅವರ ಕ್ಯಾಮೆರಾವರ್ಕ, ರೋಹಿತ್ ಅವರ ಸಂಕಲನ, ಅಲೆಕ್ಸ್ ಅವರ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ.
Be the first to comment