“ಒಂದೊಳ್ಳೆ ಲವ್ ಸ್ಟೋರಿ” ಹಾಡು ಬಿಡುಗಡೆ ; ಫೆ.17ಕ್ಕೆ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ

ಹೊಸ ಪ್ರತಿಭೆಗಳು ಸೇರಿಕೊಂಡು ಸಿದ್ದಪಡಿಸಿರುವ ’ಒಂದೊಳ್ಳೆ ಲವ್ ಸ್ಟೋರಿ’ ಚಿತ್ರದ ಟ್ರೇಲರ್ ಹಾಗೂ ಹಾಡನ್ನು ಅಶ್ವಿನಿಪುನೀತ್‌ ರಾಜ್‌ಕುಮಾರ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಅನಿವಾಸಿ ಭಾರತೀಯ ಮೈಸೂರಿನ ನಿರಂಜನ್‌ ಬಾಬು ಪಿನಕಿನ್ ಸಿನಿಮಾಸ್ ಬ್ಯಾನರ್‌ ನಡಿಯಲ್ಲಿ ನಿರ್ಮಾಣ ಮಾಡಿ, ನಾಯಕನ ತಂದೆ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡುತ್ತಾ ಶಿವರಾಜ್‌ಕುಮಾರ್ ಟೀಸರ್, ರಮೇಶ್‌ಅರವಿಂದ್ ಮ್ಯೂಸಿಕ್ ಆಲ್ಬಂ ಹೊರತಂದರು. ಈಗ ಅಶ್ವಿನಿ ಮೇಡಂ ಬಂದಿರೋದು ನಮ್ಮ ಚಿತ್ರಕೆ ಹೆಚ್ಹು ಶಕ್ತಿ ಸಿಕ್ಕಿದೆ. ಬಹಷ್ಟು ಖರ್ಚು ಮಾಡಿದೇನೆ. ಈ ಚಿತ್ರದಿಂದ ಹದಿನಾಲ್ಕು ಹೊಸ ಪ್ರತಿಭೆಗಳು ಹುಟ್ಟಿ ಕೊಂಡಿದ್ದಾರೆ. ಅವರು ಉಳಿಯಬೇಕೆಂದು ಹೇಳಿದರು.

ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಾಯಕನಾಗಿ ಅಭಿನಯಿಸಿರುವ ಅಶ್ವಿನ್, ಸಾಮಾಜಿಕ ಜಾಲತಾಣದಲ್ಲಿ ಹೆಸರು ಮಾಡಿರುವ ಧನುಶ್ರೀ ಮತ್ತು ಗೆಳತಿಯಾಗಿ ನಟಿಸಿರುವ ನಿಶಾ ಹೆಗಡೆ ತಮ್ಮ ತಮ್ಮ ಅನಿಸಕೆಗಳನ್ನು ಹಂಚಿಕೊಂಡರು.
ಉಳಿದಂತೆ ಈ ಚಿತ್ರದಲ್ಲಿ ಕೈಲಾಸ್‌ ಪಾಲ್, ಕೆ.ಎಸ್‌.ಜಿ.ವೆಂಕಟೇಶ್, ವಿಂಧುಜ, ಮಲ್ಲುಜಮಖಂಡಿ, ಮಮತಾ ಮುಂತಾದವರು ಅಭಿನಯಿಸಿದ್ದಾರೆ. ಯೌವನಕ್ಕೆ ಬಂದು ಬದುಕು ಏನು ಎಂಬುದನ್ನು ಅರಿತುಕೊಳ್ಳುವಾಗ ಪ್ರೀತಿ ಹುಟ್ಟಿಕೊಳ್ಳುತ್ತದೆ. ಅಲ್ಲಿಂದ ನಮ್ಮ ಪಯಣ ಏನು ಬೇಕಾದರೂ ಆಗಬಹುದು. ಕೊನೆಗೆ ವಿಷಯಗಳನ್ನು ತಿಳಿದುಕೊಂಡಾಗ ಪ್ರತಿಯೊಬ್ಬರಿಗೂ ಹೌದು ಅನಿಸುತ್ತದೆ. ಹಾಗೆಯೇ ಎಲ್ಲರ ಮನಸ್ಸನ್ನು ಗೆಲ್ಲುತ್ತದೆ. ಅವನು ಪ್ರೀತಿಯಲ್ಲಿ ಮೋಸ ಹೋದರೆ, ಅವಳು ಜೀವನದಲ್ಲಿ ನಂಬಿಕೆಯನ್ನು ಕಳೆದುಕೊಂಡಿರುತ್ತಾಳೆ. ಇಬ್ಬರು ವಿಚಿತ್ರ ಸಂದರ್ಭದಲ್ಲಿ ಭೇಟಿಯಾಗುತ್ತಾರೆ. ಇಂತಹ ಆಸಕ್ತಿಕರ ಅಂಶಗಳು ಸಿನಿಮಾದಲ್ಲಿದೆ ಎಂದು ನಿರ್ದೇಶಕ ಪ್ರವೀಣ್‌ ಸುತರ್ ಚಿತ್ರದ ಕುರಿತಂತೆ ಮಾಹಿತಿ ಹಂಚಿಕೊಂಡರು.

ಏಳು ಹಾಡುಗಳಿಗೆ ಆಕಾಶ್‌ ಜಾದವ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ವಿನೋದ್ ಮಂಡ್ಯ, ಸಂಭಾಷಣೆ ವಿಜಿಯೇಂದ್ರ ಜೋಡಿದಾರ್, ಸಂಕಲನ ರಾಜ್‌ ಶಿವು ಅವರದಾಗಿದೆ. ಚಿಕ್ಕಮಗಳೂರು, ಮಂಗಳೂರು, ಕೇರಳ ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ. ಸಚಿತ್ ಫಿಲಿಂ ಮುಖಾಂತರ ವಿತರಕ ವೆಂಕಟ್ ಸುಮಾರು 80ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಈ ವಾರ ಬಿಡುಗಡೆಯಾಗುತ್ತಿದೆ

Be the first to comment

Leave a Reply

Your email address will not be published. Required fields are marked *

Translate »
error: Content is protected !!