ಮೈ ಮೂವಿ ಬಜಾರ್ ನ ಮೊದಲ ವರ್ಷದ ಸಂಭ್ರಮದ ಪ್ರಯುಕ್ತ ಡಿಸೆಂಬರ್ 16ರಂದು ನಡೆಯಲಿರುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಹಿನ್ನೆಲೆ ಮೈ ಮೂವಿ ಬಜಾರ್ ಅವಾರ್ಡ್ ಲೋಗೋ ಲಾಂಚ್ ಮಾಡಲಾಯಿತು.
ಈ ಬಗ್ಗೆ ಮಾಹಿತಿ ನೀಡಿರುವ ಸಂಸ್ಥೆಯ ಮುಖ್ಯಸ್ಥ ನವರಸನ್, ಎಂ ಎಂ ಬಿ ಲೆಗಸಿಗೆ ಒಂದು ವರ್ಷ ಆಗಿದೆ. ಭಾರತದ ಸಿನಿಮಾ ವನ್ನು ಒಂದು ಸಿಂಗಲ್ ಬಟನ್ ನಲ್ಲಿ ತರುವುದು ನಮ್ಮ ಗುರಿಯಾಗಿದೆ. ಈ ವರ್ಷ ಮೈ ಮೂವಿ ಬಜಾರ್ ಪ್ರಶಸ್ತಿ ಕಾರ್ಯಕ್ರಮವನ್ನು ಜಾಲಿವುಡ್ ಸ್ಟುಡಿಯೋ ಆವರಣದಲ್ಲಿ ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿದೆ. ಪ್ರಶಸ್ತಿ ಕಾರ್ಯಕ್ರಮದ ಯೋಗವನ್ನು ಸೆಲೆಬ್ರಿಟಿಗಳ ಕೈಯಲ್ಲಿ ಲಾಂಚ್ ಮಾಡಿಸಲಾಗಿದೆ ಎಂದರು.
ಈ ವರ್ಷ ಚಿತ್ರರಂಗದಲ್ಲಿ 40 ವರ್ಷಕ್ಕಿಂತ ಹೆಚ್ಚು ಕೆಲಸ ಮಾಡಿದ ಕಾರ್ಮಿಕರಿಗೆ, ತಂತ್ರಜ್ಞರಿಗೆ ಪ್ರಶಸ್ತಿ ನೀಡಲಾಗುವುದು. ಸಿನಿಮಾ ಪೋಸ್ಟರ್ ಅಂಟಿಸುವವರಿಂದ ಹಿಡಿದು ಸಿನಿಮಾದ ಎಲ್ಲಾ ವಿಭಾಗಗಳಲ್ಲಿ ಕೆಲಸ ಮಾಡಿದ ಹಿರಿಯರನ್ನು ಗುರುತಿಸುವ ಕೆಲಸ ಆಗುತ್ತಿದೆ ಎಂದರು.
ನಟರಾದ ವಿನೋದ್ ಪ್ರಭಾಕರ್, ಅಭಿಷೇಕ್ ಅಂಬರೀಶ್, ಚಂದನ್ ಶೆಟ್ಟಿ, ಸಂಜನಾ ಆನಂದ್, ಅಪೂರ್ವ ಅವರು ಮೈ ಮೂವಿ ಮಜಾರ್ ಪ್ರಶಸ್ತಿಯ ಲೋಗೋ ಲಾಂಚ್ ಮಾಡಿದರು.
ಈ ಸಂದರ್ಭದಲ್ಲಿ ನಿರ್ಮಾಪಕರಾದ ಎಂ ರಮೇಶ್ ರೆಡ್ಡಿ, ಚಂದ್ರಶೇಖರ್, ಚೇತನ್ ಗೌಡ, ಜಗದೀಶ್, ಗೋವಿಂದ್ ರಾಜ್, ಕೃಷ್ಣ ಸಾರ್ಥಕ್, ನಿರ್ದೇಶಕರಾದ ಹರಿ ಸಂತು, ಮಹೇಶ್ ಕುಮಾರ್, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ ಎಂ ಸುರೇಶ್, ಮಾಜಿ ಅಧ್ಯಕ್ಷ ಭಾಮ ಹರೀಶ್, ಕೆ ವಿ ಚಂದ್ರಶೇಖರ್ ಇತರರು ಇದ್ದರು.
___

Be the first to comment