ಸೀರಿಯಲ್ ನಟಿಗೆ ಅಶ್ಲೀಲ ವಿಡಿಯೋ ಕಳುಹಿಸಿ ಕಿರುಕುಳ ನೀಡಿದ ಕಾಮುಕನನ್ನು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.
ನವೀನ್ ಬಂಧಿತ ಆರೋಪಿ. ನಟಿ ನೀಡಿದ ದೂರು ಆಧರಿಸಿ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನ ವಶಕ್ಕೆ ಪಡೆದಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿ ‘NAVEENZ’ ಎಂಬ ಫೇಸ್‌ಬುಕ್ ಖಾತೆಯಿಂದ ನಟಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದ. ನಟಿ ಅದನ್ನು ಸ್ವೀಕರಿಸದ ಹಿನ್ನೆಲೆ ಮೆಸೆಂಜರ್ ಮೂಲಕ ಮೆಸೇಜ್ ಮಾಡತೊಡಗಿದ್ದ. ದಿನ ಕಳೆದಂತೆ ಕಿರುಕುಳದ ಪ್ರಮಾಣ ಹೆಚ್ಚಾಗಿದ್ದು, ನಟಿಗೆ ಗುಪ್ತಾಂಗದ ವಿಡಿಯೋ ಕಳುಹಿಸುವ ಮೂಲಕ ಲೈಂಗಿಕ ಕಿರುಕುಳ ನೀಡುತ್ತಿದ್ದ.
ಆರೋಪಿಗೆ ಹಲವು ಬಾರಿ ನಟಿ ಎಚ್ಚರಿಕೆ ನೀಡಿದರೂ ಕಿರುಕುಳ ನಿಲ್ಲದ ಹಿನ್ನೆಲೆಯಲ್ಲಿ ನಟಿ ಆರೋಪಿಯ ಅಕೌಂಟ್ ಬ್ಲಾಕ್ ಮಾಡಿದ್ದರು. ಆತ ಬೇರೆ ಖಾತೆಯಿಂದ ಮತ್ತೆ ಮೆಸೇಜ್ ಮಾಡಿ ವಿಕೃತ ವರ್ತನೆ ಮುಂದುವರಿಸಿದ್ದ. ನ.1ರಂದು ಸ್ವತಃ ನಟಿ ಆರೋಪಿಯನ್ನು ನಾಗರಭಾವಿಯ ನಂದನ್ ಪ್ಯಾಲೆಸ್ ಬಳಿ ಭೇಟಿ ಮಾಡಿ ಎಚ್ಚರಿಕೆ ನೀಡಿದರೂ ಬದಲಾವಣೆಯಾಗಲಿಲ್ಲ.
ಇದರಿಂದ ಬೇಸತ್ತ ನಟಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ತನಿಖೆ ಮುಂದುವರಿದಿದೆ.





Be the first to comment