ಫೆ.8ರಂದು ‘ಒಂದು ಸರಳ ಪ್ರೇಮಕಥೆ’ ರಿಲೀಸ್‌

ವಿನಯ್ ರಾಜ್‌ಕುಮಾರ್‌ ಮುಖ್ಯಭೂಮಿಕೆಯಲ್ಲಿ ಇರುವ ‘ಒಂದು ಸರಳ ಪ್ರೇಮಕಥೆ’ ಫೆ.8ರಂದು ರಿಲೀಸ್‌ ಆಗುತ್ತಿದೆ.

‘ಸಿಂಪಲ್‌’ ಸುನಿ ನಿರ್ದೇಶಿಸಿರುವ ‘ಒಂದು ಸರಳ ಪ್ರೇಮಕಥೆ’ ಸಿನಿಮಾದ ಮೊದಲ ಹಾಡು ‘ಗುನು ಗುನುಗು’ ಬಿಡುಗಡೆಯಾಗಿದೆ. ಚಿತ್ರದ ಹಾಡನ್ನು ಗೋಲ್ಡನ್ ಸ್ಟಾರ್ ಗಣೇಶ್ ಬಿಡುಗಡೆ ಮಾಡಿದ್ದಾರೆ.

‘ಗುನು ಗುನುಗು’ ಹಾಡಿಗೆ ಸಚಿನ್ ಸಂಘೈ ಸಾಹಿತ್ಯ ಬರೆದಿದ್ದು, ವೀರ್ ಸಮರ್ಥ್ ಸಂಗೀತ ನಿರ್ದೇಶನವಿದೆ. ಹಾಡಿಗೆ ಕೇಶವ್ ಆನಂದ್ ಧ್ವನಿಯಾಗಿದ್ದಾರೆ.

‘ಇವರು ‘ಸಿಂಪಲ್‌’ ಸುನಿ ಅಲ್ಲ. ಕಾಂಪ್ಲಿಕೇಟೆಡ್‌(ಕ್ಲಿಷ್ಟಕರ) ಸುನಿ’ ಎಂದ ಗಣೇಶ್‌, ‘ಕಥೆ ಮಾಡುವ ವಿಚಾರದಲ್ಲಿ ‘ಸಿಂಪಲ್‌’ ಸುನಿ ಬರವಣಿಗೆಯೇ ಭಿನ್ನ. ಸುನಿ ಜೊತೆ ನನ್ನ ಪಯಣ ಬಹಳ ವರ್ಷದ್ದು. ‘ಚಮಕ್’ ಸಿನಿಮಾ ಆದಮೇಲೆ ಹಲವು ಬಾರಿ ಕಥೆಗಳನ್ನು ಚರ್ಚಿಸಿದ್ದೇವೆ. ಒಂದೊಂದು ಬಾರಿಯೂ ಒಂದೊಂದು ಐಡಿಯಾ ತರುತ್ತಾರೆ. ‘ಒಂದು ಸರಳ’ ಪ್ರೇಮಕಥೆ’ಯೂ ವಿಭಿನ್ನವಾಗಿ ಇರುತ್ತದೆ ಅಂದುಕೊಂಡಿದ್ದೇನೆ. ಸುನಿಯ ಡೈಲಾಗ್ಸ್‌, ಬರವಣಿಗೆ ಶೈಲಿಗೆ ನಾನು ದೊಡ್ಡ ಅಭಿಮಾನಿ. ನಮ್ಮ ಭಾಷೆ, ವ್ಯಾಕರಣದ ಮೇಲೆ ಹಿಡಿತ ಇರುವ ನಿರ್ದೇಶಕರಲ್ಲಿ ಒಬ್ಬರು ಸುನಿ’ ಎಂದರು.

‘ಒಂದು ಸರಳ ಪ್ರೇಮಕಥೆ’ ಚಿತ್ರದಲ್ಲಿ ವಿನಯ್ ರಾಜ್‌ಕುಮಾರ್‌ ಗೆ ಸ್ವತಿಷ್ಠ ಕೃಷ್ಣನ್ ಹಾಗೂ ಮಲ್ಲಿಕಾ ಸಿಂಗ್‌ ಜೋಡಿಯಾಗಿದ್ದಾರೆ. ಚಿತ್ರದಲ್ಲಿ ರಾಘವೇಂದ್ರ ರಾಜ್‌ಕುಮಾರ್‌ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.

ಚಿತ್ರಕ್ಕೆ ರಾಮ್ ಮೂವೀಸ್ ಬ್ಯಾನರ್‌ನಡಿ ಮೈಸೂರು ರಮೇಶ್ ಬಂಡವಾಳ ಹೂಡಿದ್ದಾರೆ. ರಾಜೇಶ್ ನಟರಂಗ, ಅರುಣಾ ಬಾಲರಾಜ್, ಸಾಧುಕೋಕಿಲ ಮುಂತಾದವರು ತಾರಾಬಳಗದಲ್ಲಿ ಇದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!