ಕಳೆದ ವಾರ ತೆರೆ ಕಂಡು ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ‘ಒಂದು ಸರಳ ಪ್ರೇಮ ಕಥೆ’ ಚಿತ್ರಕ್ಕೆ ವಿದೇಶಗಳಲ್ಲಿ ತೆರೆ ಕಾಣುವ ಸೌಭಾಗ್ಯ ಬಂದಿದೆ. ಈ ಸಂಬಂಧ ವಿದೇಶಗಳಲ್ಲಿ ವಿತರಣೆ ಮಾಡುವ ಕಂಪನಿ ಚಿತ್ರತಂಡವನ್ನು ಸಂಪರ್ಕ ಮಾಡಿದೆ.
ಸಿಂಪಲ್ ಸುನಿ ನಿರ್ದೇಶನದ ವಿನಯ್ ರಾಜ್ ಕುಮಾರ್ ನಟನೆಯ ‘ಒಂದು ಸರಳ ಪ್ರೇಮ ಕಥೆ’ ಚಿತ್ರವನ್ನು ನೆದರ್ ಲ್ಯಾಂಡ್ , UK , US ,ದುಬೈ ಹಾಗೂ ಇನ್ನಿತರ ಪಾಶ್ಚಿಮಾತ್ಯ ದೇಶಗಳಲ್ಲಿ ಬಿಡುಗಡೆ ಮಾಡಲು ಸ್ಯಾಂಡಲ್ ವುಡ್ ಟಾಕೀಸ್ ಕಂಪನಿ ವಿದೇಶಿ ವಿತರಣಾ ಹಕ್ಕನ್ನು ಖರೀದಿ ಮಾಡಿದ್ದಾರೆ . ಚಿತ್ರ ಶುಕ್ರವಾರದಿಂದ ವಿದೇಶಗಳಲ್ಲಿ ಬಿಡುಗಡೆಯಾಗಲಿದೆ. ಈ ಮೂಲಕ ಅನಿವಾಸಿ ಕನ್ನಡಿಗರಿಗೆ ‘ಒಂದು ಸರಳ ಪ್ರೇಮ ಕಥೆಯ’ ಘಮಲು ತಲುಪಲಿದೆ.
ಹಲವು ಟ್ವಿಸ್ಟ್ ಹೊಂದಿರುವ ‘ಒಂದು ಸರಳ ಪ್ರೇಮ ಕಥೆ’, ವಿರಳ ಪ್ರೇಮ ಕಥೆ ಆಗಿ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಪ್ರೇಕ್ಷಕರನ್ನು ರಂಜಿಸುವ ಯತ್ನದಲ್ಲಿ ಒಂದು ಸರಳ ಪ್ರೇಮ ಕಥೆ ಗೆದ್ದಿದೆ.
ನಿರ್ದೇಶಕ ಸಿಂಪಲ್ ಸುನಿ, ಹಾಸ್ಯ, ಸೆಂಟಿಮೆಂಟ್, ಚುರುಕಾದ ಸಂಭಾಷಣೆ ಮೂಲಕ ಈ ಸಿನಿಮಾವನ್ನು ಕಟ್ಟಿಕೊಡುವ ಯತ್ನವನ್ನು ಮಾಡಿದ್ದಾರೆ. ವಿನಯ್ ರಾಜಕುಮಾರ್ ಅವರು ಮಧ್ಯಮ ವರ್ಗದ ಕುಟುಂಬದ ಸಾಮಾನ್ಯ ಹುಡುಗನ ಪಾತ್ರದಲ್ಲಿ ನೋಡುಗರಿಗೆ ಇಷ್ಟ ಆಗುವಂತೆ ನಟಿಸಿದ್ದಾರೆ. ಸ್ವಾದಿಷ್ಟ, ಮಲ್ಲಿಕಾ ಸಿಂಗ್ ಅವರು ತಮ್ಮ ನಟನೆ ಮೂಲಕ ಇಷ್ಟವಾಗುತ್ತಾರೆ.
Be the first to comment