ಕಲರ್ ಫುಲ್ ಕ್ರಿಸ್ಟಲ್ ಕಂಬೈನ್ಸ್ ಲಾಂಛನದಲ್ಲಿ ಸರ್ವಶ್ರೀ ಅವರು ನರ್ಮಿಸಿರುವ ಒಂದು ಸಣ್ಣ ಬ್ರೇಕ್ ನ ನಂತರ ಚಿತ್ರವು ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಹಳ್ಳಿಯಲ್ಲಿ ನಾಲ್ಕು ಜನ ಸ್ನೇಹಿತರು ಕಟ್ಟೆಯ ಮೇಲೆ ಕುಳಿತಾಗ ನಡೆಯುವ ಘಟನೆಯ ಆಧರಾವಾಗಿ ಇಟ್ಟು ಕೊಂಡು ಲವ್, ಸಸ್ಪೆನ್ಸ್ ಹಾಗೂ ಕಾಮಿಡಿ ಕಥಾನಕವೊಂದ್ದಿರುವ ಈ ಚಿತ್ರವನ್ನು ಅಭಿಲಾಷ್ ಗೌಡ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಹಿತನ್ ಹಾಸನ್ ಕಥೆ ಮತ್ತು ಸಂಗೀತ, ನಾಗರಾಜ್ ಉಪ್ಪುಂದ ಛಾಯಾಗ್ರಹಣ, ಬೇಬಿನಾಗರಾಜ್ ಸಂಕಲನ, ಜಾಗ್ವಾರ್ ಸಣ್ಣಪ್ಪ ಸಾಹಸ, ಹರ್ಷಪ್ರಿಯ ಸಾಹಿತ್ಯ, ಜಗದೀಶ್.ಟಿ.ಪಿ ಸಂಭಾಷಣೆ ಇದೆ. ಹಿತನ್ ಹಾಸನ್, ಚೈತ್ರ, ಕಿರಣ್ ಕೂಡ್ಲಿಪೇಟೆ. ಸಿದ್ದರಾಜ್ ಕಲ್ಯಾಣ್‍ಕರ್, ಮೋಹನ್ ಮಂಡ್ಯ, ಮಹಂತೇಶ್, ಕಾವೇರಿ ಶ್ರೀಧರ್, ಮಾಲತೇಶ್,ನಾಗೇಶರಾವ್,ಸುಗುಣ,ಮುಂತಾದವರ ತಾರಾಬಳಗವಿದೆ.

Pingback: plumber East Spencer
Pingback: roofing company Auburn