ಶ್ರೀ, ತಾರಕ್, ಮಿಲನ ಚಿತ್ರಗಳ ನಿರ್ಮಾಪಕ ಕೆ.ಎಸ್. ದುಶ್ಯಂತ್ ಅರ್ಪಿಸಿ, ರಿಯಲ್ ವೆಲ್ತ್ ವೆಂಚರ್ ಪ್ರೊಡಕ್ಷನ್ಸ್ ಸಂಸ್ಥೆಯಿAದ ಮೂಡಿಬರುತ್ತಿರುವ ಕಶ್ಯಪ್ ದಾಕೋಜುರವರ ಚಿತ್ರ ಒಂದು ಗಂಟೆಯ ಕಥೆ. ಇದಕ್ಕೂ ಮುನ್ನ ಪ್ರೇಮಿ ನಂಬರ್ ಒನ್, ಕರಾವಳಿ ಹುಡುಗಿ, ಮಿಸ್ಟರ್ ಡೂಪ್ಲಿಕೇಟ್ ಚಿತ್ರಗಳನ್ನು ನಿರ್ಮಿಸಿದ್ದ ಕಶ್ಯಪ್ ದಾಕೋಜುರವರಿಗೆ ಈ ಚಿತ್ರ ನಾಲ್ಕನೇ ಚಿತ್ರವಾಗಿದ್ದು,
ನೈಜ ಘಟನೆಯೊಂದರ ಸ್ಪೂರ್ತಿಯಿಂದ ತಯಾರಾದ ಈ ಚಿತ್ರವೂ ಬಹುಮುಖ್ಯ ಸಂದೇಶದೊದಿಗೆ ಸಂಪೂರ್ಣ ಹಾಸ್ಯಮಯವಾಗಿ ಮೂಡಿಬಂದಿರುತ್ತದೆ. ಒಟ್ಟು ಈ ಚಿತ್ರದಲ್ಲಿ ೧೩೦ಜನ ಕಲಾವಿದರಿದ್ದು ಹಾಸ್ಯಮಯವಾಗಿ ಸಾಗುತ್ತಾ ಗಂಭೀರವಾಗಿ ಮುಗಿಯುವುದೇ ಈ ಚಿತ್ರದ ಚಿತ್ರಕತೆಯ ಹೈಲೆಟ್. ಕೇರಳ, ಆಂಧ್ರ, ಮಡಿಕೇರಿ ಬೆಂಗಳೂರಿನಲ್ಲಿ ಚಿತ್ರದ ಹಾಡು, ಸನ್ನಿವೇಶಗಳು ಚಿತ್ರೀಕರಣವಾಗಿದ್ದು ಇತ್ತೀಚಿಗಷ್ಟೇ ಬಹಳಷ್ಟು ಜನ ಖ್ಯಾತ ಕಲಾವಿದರು ಚಿತ್ರದ ಟ್ರಯಲರ್, ಹಾಡುಗಳನ್ನು ಕೇಳಿ ಪ್ರಶಂಸಿಸಿದ್ದಾರೆ..
ಖ್ಯಾತ ನಾಯಕ ನಟ ದುನಿಯ ವಿಜಯ್ ರವರು ಚಿತ್ರದ ಟ್ರಯಲರ್ ಬಿಡುಗಡೆ ಮಾಡಿದ್ದು, ಟ್ರಯಲರ್ ನೋಡಿದ ಪ್ರಣಯ ರಾಜ ಶ್ರೀನಾಥ್, ಸುನಿಲ್ ರಾವ್, ಶ್ರೀನಗರ ಕಿಟ್ಟಿ, ದಿಗಂತ್, ಅವಿನಾಶ್, ಪದ್ಮಜಾರಾವ್, ಅಚ್ಯುತ್ ಕುಮಾರ್, ಮಯೂರ್ ಪಟೇಲ್, ಮಯೂರಿ ಕ್ಯಾಥರಿನ್, ಅರ್ಚನಾ ಉಡುಪ, ಶ್ರೀನಿವಾಸ್ ಉಡುಪರವರು ಚಿತ್ರದ ಬಗ್ಗೆ ಹೃದಯ ತುಂಬಿ ಮಾತನಾಡಿದ್ದಾರೆ. ಚಿತ್ರದ ಮೊದಲ ಟ್ರಯಲರ್ ಡಿ ಬೀಟ್ಸ್ ಕಂಪೆನಿಯ ಮೂಲಕ ಫೆಬ್ರವರಿ ೧೪ರಂದು ಯೂಟ್ಯೂಬ್ನಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಮುಖ್ಯ ಭೂಮಿಕೆಯಲ್ಲಿ ಅಜಯ್ ರಾಜ್ (ನಂಜುಡ) ಶನಾಯ ಕಾಟ್ವೆ, ಸ್ವಾತಿ ಶರ್ಮ, ಪಾಪಾ ಪಾಂಡು ಚಿದಾನಂದ್, ಪ್ರಶಾಂತ್ ಸಿದ್ಧಿ, ಪುಟ್ಟ ಗೌರಿ ಖ್ಯಾತಿಯ ಚಂದ್ರಕಲ, ಯಶವಂತ್ ಸರ್ ದೇಶಪಾಂಡೆ, ನಾಗೇಂದ್ರ ಷಾ, ಮಿಮಿಕ್ರಿ ಗೋಪಿ, ಸಿಲ್ಲಿ ಲಲ್ಲಿ ಆನಂದ್, ಕುಳ್ಳ ಸೋಮು, ಮಜಾ ಟಾಕೀಸ್ ರೆಮೊ, ರುಕ್ಮಿಣಿ ಎಂದು ಬಹುದೊಡ್ಡ ತಾರಾಗಣವೆ ಇದೆ… ಮತ್ತೆ ಮುಂಗಾರು ಖ್ಯಾತಿಯ ದ್ವಾರಕಿ ರಾಘವ್ ಚಿತ್ರಕತೆ, ಸಾಹಿತ್ಯ ಬರೆದು
ನಿರ್ದೇಶನ ಮಾಡಿದ್ದು ಚಿತ್ರಕ್ಕೆ ಡೆನ್ನಿಸ್ ವಲ್ಲಭನ್ ಸಂಗೀತ, ಸೂರ್ಯಕಾಂತ್ ಛಾಯಾಗ್ರಹಣವಿರುತ್ತದೆ. ಉಳಿದಂತೆ ಸಂಕಲನ ಗಣೇಶ್ ಮಲ್ಲಯ್ಯ, ಸಹ ನಿರ್ಮಾಣ ಅನುಪ್ ಬಜಾಜ್, ಶ್ವೇತ ದಾಕೊಜು, ನಿರ್ಮಾಣ ನಿರ್ವಹಣೆ, ರವಿ ಸಫೈರ್, ಸಹ ನಿರ್ದೇಶನ ಸಂತೋಷ್. ಎಮ್, ಆದರ್ಶ್ ಯಕ್ಷ, ಪ್ರಚಾರ ಕಲೆ ಮಣಿ ಮತ್ತು ಪತ್ರಿಕಾ ಸಂಪರ್ಕ ಸುಧಿಂದ್ರ ವೆಂಕಟೇಶ್ ಮಾಡಿದ್ದು ಚಿತ್ರ ಸಧ್ಯದಲ್ಲೇ ತೆರೆಕಾಣಲು ಸಿದ್ದವಾಗಿರುತ್ತದೆ.
Pingback: sex offenders in my area map