ಭಂಡಾರಿ ಮತ್ತೆ ಬಂದಿದ್ದಾಾರೆ. ರಂಗಿತರಂಗ ಚಿತ್ರದ ಅದ್ಭುತ ವಿಜಯದ ಬಳಿಕ ರಾಜರಥ ಚಿತ್ರ ನಿರೀಕ್ಷೆಯ ಗೆಲುವು ಕಾಣಲಿಲ್ಲ.
ಆದರೆ ಅವರ ನಿರ್ದೇಶನದ ಶೈಲಿಗೆ ಮೆಚ್ಚಿದವರಲ್ಲಿ ಕಿಚ್ಚ ಸುದೀಪ್ ಕೂಡ ಒಬ್ಬರು. ಹಾಗಾಗಿಯೇ ಅವರು ಅನೂಪ್ ಜೊತೆಗೆ ಹೊಸ ಚಿತ್ರಕ್ಕೆ ಗ್ರೀನ ಸಿಗ್ನಲ್ ಕೊಟ್ಟಿದ್ದಾಾರೆ.
ಬಿಲ್ಲ ರಂಗ ಬಾಷ ವಿಶೇಷ
ಬಿಲ್ಲರಂಗ ಬಾಷ ಚಿತ್ರದಲ್ಲಿ ಸುದೀಪ ನಾಯಕರು. ಆದರೆ ಅವರು ಮೂರು ಶೇಡ್‌ನಲ್ಲಿ ಕಾಣಿಸಿಕೊಳ್ಳುತ್ತಾರ ಅಥವಾ ತ್ರಿಬಲ್ ರೋಲ್ ಮಾಡುತ್ತಿದ್ದಾಾರ ಎನ್ನುವ ವಿಚಾರವನ್ನು
ಇನ್ನೂ ರಿವೀಲ ಮಾಡಿಲ್ಲ. ಇದು ಫ್ಯಾಟಸಿ ತುಂಬಿದ ಅಡ್ವೆಚರಸ್ ಕತೆಯ ಸಿನಿಮಾ. ಈಗಷ್ಟೇ ಸ್ಕ್ರಿಪ್‌ಟ್ ಫೈನಲ್ ಆಗುತ್ತಾ ಇದೆ. ರಾಜರಥ ಚಿತ್ರ ನೋಡಿದ ಬಳಿಕವೇ
ಸುದೀಪ್ ಅನೂಪ್ ಜೊತೆಗೆ ಕೆಲಸ ಮಾಡಲು ಒಪ್ಪಿರುವುದು ವಿಶೇಷ. ಬಹುಶಃ ಸುದೀಪ್ ಅನೂಪ್ ಅವರ ಮೇಕಿಂಗ್ ಶೈಲಿಗೆ ಮನಸೋತಿರುವುದರಲ್ಲಿ ಅಚ್ಚರಿಯಿಲ್ಲ. ಆದರೆ
ಅನೂಪ್ ಪ್ರಕಾರ ರಾಜರಥ ಚಿತ್ರ ಅಟ್ಟರ್ ಫ್ಲಾಪ್ ಎನ್ನಲಾಗದು. ಯಾಕೆಂದರೆ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚು ಇದ್ದಿದ್ದೇ ಅದಕ್ಕೆ ಕಾರಣವಾಯಿತು. ಇನ್ನು ಕಲೆಕ್ಷನ್ ಎಷ್ಟಾಾಗಿದೆ
ಎಂಬ ಬಗ್ಗೆ ವಿವರವಾದ ಲೆಕ್ಕ ತಮ್ಮಲ್ಲಿಲ್ಲ. ಅದು ರಂಗಿತರಂಗದ ಸಂದರ್ಭದಲ್ಲಿಯೂ ಲೆಕ್ಕ ಇಟ್ಟಿರಲಿಲ್ಲ ಎಂದರು ಅನೂಪ್.
ಬಿಲ್ಲ , ರಂಗ ಮತ್ತು ಬಾಷಾ ಎನ್ನುವುದು ರಜನಿಕಾಂತ್ ನಟನೆಯ ಮೂರು ಚಿತ್ರಗಳ ಹೆಸರು ಎನ್ನುವುದು ಸಿನಿಮಾ ಅಭಿಮಾನಿಗಳಿಗೆ ತಿಳಿದಿರುವ ವಿಚಾರ. ಹಾಗಂತ ಅದಕ್ಕೂ ಇದಕ್ಕೂ
ಯಾವುದೇ ಸಂಬಂಧ ಇರದು. ಸುದೀಪ ಅವರಿಗೆ ಅನೂಪ ಮೂರು ಸ್ಟೋರಿಗಳನ್ನು ಹೇಳಿದ್ದರಂತೆ. ಅವುಗಳು ಎಲ್ಲವೂ ಚೆನ್ನಾಾಗಿದೆ ಎಂದ ಸುದೀಪ್‌ರಲ್ಲಿ ಇದನ್ನು ಕೈಗೆತ್ತಿಕೊಳ್ಳುವ ಬಗ್ಗೆ
ಹೇಳಿದಾಗ ಒಪ್ಪಿಗೆ ನಿಡಿದ್ದರಂತೆ. ಇದು ನನನಗೆ ಮೊದಲಿನಿಂದಲೂ ತಲೆಯಲ್ಲಿದ್ದ ಕಾನ್ಸೆಪ್‌ಟ್. ಕೊನೆಗೆ ಅವರಿಗೂ ಇದನ್ನೇ ಮಾಡುವುದು ಒಪ್ಪಿಿಗೆಯಾಯಿತು. ಚಿತ್ರದ ಕ್ಯಾನ್ವಾಾಸ್ ದೊಡ್ಡದಿದೆ. ರಾಜರಥ ಚಿತ್ರಕ್ಕೆೆ ಮುಹೂರ್ತ ಆಗಿಲ್ಲವಾದರೂ ನಾವು ಬಿಲ್ಲ ರಂಗ ಬಾಷಾ ಹೆಸರಲ್ಲಿ ಒಂದು ಕೇಕ ಕಟ್ ಮಾಡಿದ್ದೇವೆ ಎಂದರು. ಇನ್ನು ಚಿತ್ರದ ಒಂದೊಂದೇ ಪೋಸ್ಟರ್ ಬಿಡುಗಡೆ ಮಾಡುವತ್ತ ಗಮನ ಹರಿಸಲಿದ್ದೇವೆ ಎಂದಿರುವ ಅನೂಪ್, ಆ ಚಿತ್ರವನ್ನು ಚಿತ್ರಚಿತ್ತಾರದೊಂದಿಗೆ ವಿಶೇಷವಾಗಿ ಹಂಚಿಕೊಂಡರು. ಅಂದಹಾಗೆ ಈ ಸಲ ಪ್ರಥಮ ಬಾರಿಗೆ ತಮ್ಮ ಸಹೋದರ ನಿರೂಪ್
ಚಿತ್ರದಲ್ಲಿ ನಟಿಸುವ ಸಾಧ್ಯತೆ ಇರುವುದಿಲ್ಲ. ಉಳಿದಂತೆ ಕತೆ ಬೆಳವಣಿಗೆಯಲ್ಲಿ ಬದಲಾವಣೆಗಳಿದ್ದರೆ ಮುಂದಿನ ದಿನಗಳಲ್ಲಿ ತಿಳಿಸಲಿದ್ದೇನೆ ಎನ್ನುವುದು ಅನೂಪ್ ಅನಿಸಿಕೆ.
Pingback: find more
Pingback: Digital transformation