ಸ್ಯಾಂಡಲ್ ವುಡ್ ಗೆ ಮತ್ತೊಬ್ಬ ಭರವಸೆಯ ನಟ “ಭಾರ್ಗವ್ ಕೃಷ್ಣ”

ದೀಪಾ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ “ಓಂ ಶಿವಂ” ಚಿತ್ರವು ಸೆನ್ಸರ್ ಮುಗಿಸಿ ಬಿಡುಗಡೆಗೆ ಸಿದ್ಧವಾಗಿದೆ,

ನವನಟ  ಭಾರ್ಗವ ಕೃಷ್ಣ ಅಭಿನಯದ ಚೊಚ್ಚಲ ಚಿತ್ರ ಮಗನ ಮೇಲಿನ ಪ್ರೀತಿಗೆ ತಂದೆ ಕೃಷ್ಣ K.N ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ವಿದೇಶದಲ್ಲಿ ವ್ಯಾಸಂಗ ಮಾಡಿರುವ ನಟ ಭಾರ್ಗವ್ ಕೃಷ್ಣ, ‘ಓಂ ಶಿವಂ’ ಸಿನಿಮಾ ಮೂಲಕ ಅಭಿಮಾನಿಗಳ ಮನ ಗೆಲ್ಲುತ್ತೆ ಎಂಬುದು ಇವರ ಪ್ರೀತಿಯ ಮಾತು.

ನಾಯಕಿಯಾಗಿ ವಿರಾನಿಕಾ ಶೆಟ್ಟಿ ಅಭಿನಯಿಸಿದ್ದು, ಕಾಕ್ರೋಚ್ ಸುಧೀ, ವರ್ಧನ್, ರವಿ ಕಾಳೆ, ಯಶ್ ಶೆಟ್ಟಿ, ಉಗ್ರಂ ರವಿ, ಸೂರಜ್,ಅಪೂರ್ವ, ಲಕ್ಷ್ಮಿ ಸಿದ್ದಯ್ಯ ಹಾಗೂ ಇನ್ನಿತರ ಕಲಾವಿದರು ಅಭಿನಯಿಸಿದ್ದಾರೆ.

ಚಿತ್ರವು ಪ್ರೇಮಾ ಪ್ರೀತಿ ಸುತ್ತ ನಡೆಯುವ ಕಥೆಯಾಗಿದ್ದು ಆನ್ಲೈನ್ ಮಾಫಿಯಾ ಹಾಗೂ ಡ್ರಕ್ಸ್ ದಂದೆ ಬೆಂಗಳೂರಿನಲ್ಲಿ ಹೇಗೆ ನಡೆಯುತ್ತೆ ಎಂಬುದನ್ನ ನೈಜ ಹಾಗೂ ರೋಚಕವಾಗಿ ತೋರಿಸಲಾಗಿದೆ. ಯುವಜನರು ಈ ಚಟಕ್ಕೆ ಒಳಗಾಗಿ ತಮ್ಮ ಜೀವನವನ್ನು ಹೇಗೆ ಹಾಳು ಮಾಡಿಕೊಳ್ಳುತ್ತಿದ್ದಾರೆ,ಮತ್ತೆ ಇದರಿಂದ ಹೊರಗೆ ಬರಲು ಹೇಗೆ ಪ್ರಯತ್ನ ಪಡುತ್ತಿದ್ದಾರೆ ಎಂದು ಈ ಚಿತ್ರದಲ್ಲಿ ತೋರಿಸಲಾಗಿದೆ.

ಪ್ರೀತಿ ಹೆಚ್ಚಾದಾಗ ನಾಯಕನ ಜೀವನದಲ್ಲಿ ಏನೆಲ್ಲಾ ಆಗುತ್ತೆ ನಾಯಕಿ ಪ್ರೀತಿಯ ಬಲೆಗೆ ಬಿದ್ದು ತನ್ನ ಫ್ಯಾಮಿಲಿಯನ್ನ ಹೇಗೆ ದೂರ ಮಾಡಿಕೊಳ್ಳುತ್ತಾಳೆ, ಇದರಿಂದ ತಂದೆ ತಾಯಿ ಪಡುವ ವೇದನೆ ಎಂತದ್ದು ಎಂದು ಈ ಚಿತ್ರದಲ್ಲಿ ಎಳೆ ಎಳೆಯಾಗಿ ಹೇಳಲಾಗಿದೆ.

ನಾಯಕ ನಾಯಕಿ ಪ್ರೀತಿಯಲ್ಲಿ ಗೆಲ್ಲುತ್ತಾರಾ ಅಥವಾ ತಂದೆ ತಾಯಿಯ ಪ್ರೀತಿನ ಉಳಿಸಿಕೊಳ್ಳುತ್ತಾರೆ ಎಂಬುದೇ ಕಥೆಯ ಸಾರಾಂಶವಾಗಿದೆ, ಚಿತ್ರಕ್ಕೆ ವಿಜಯ್ ಸಂಗೀತ ನೀಡಿದ್ದು, ಗೌಸ್ಪೀರ್, ಕವಿರಾಜ್,ನಾಗೇಂದ್ರ ಪ್ರಸಾದ್ ಸಾಹಿತ್ಯವಿದೆ,DOP ವೀರೇಶ್ N T A, ಸಂಕಲನ ಸತೀಶ್ ಚಂದ್ರ, ಮೇಕಪ್ ಕುಮಾರ್ ವಸ್ತ್ರಲಂಕಾರ ವಲ್ಲಿ, ಕಲ ನಿರ್ದೇಶನ ಮಲ್ಲಿಕಾರ್ಜುನ್
ಚಿತ್ರವು ಮುಂದಿನ ತಿಂಗಳಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರಕ್ಕೆ ಕಥೆ ಚಿತ್ರಕಥೆ ನಿರ್ದೇಶನ ಆಲ್ವಿನ್ ಅವರದಾಗಿರುತ್ತದೆ,
ಆಲ್ವಿನ್ ಈಗಾಗಲೇ ರಾಜ ಬಹದ್ದೂರ್ ಎಂಬ ಸಿನಿಮಾನಾ ನಿರ್ದೇಶನ ಮಾಡಿದ್ದಾರೆ.


ಸಂಭಾಷಣೆ ಮಳವಳ್ಳಿ ಸಾಯಿ ಕೃಷ್ಣ ಅವರದ್ದಾಗಿದೆ. ಪಕ್ಕಾ ಪೈಸಾ ವಸೂಲ್ ಸಿನಿಮಾ “ಓಂ ಶಿವಂ” ಅತೀ ಶೀಘ್ರದಲ್ಲೇ ತೆರೆಕಾಣಲಿದೆ.p

Be the first to comment

Leave a Reply

Your email address will not be published. Required fields are marked *

Translate »
error: Content is protected !!