ಲೂಸ್ ಮಾದ ಯೋಗೀಶ್ ನಟನೆಯ ಒಂಭತ್ತನೇ ದಿಕ್ಕು ಚಿತ್ರವನ್ನು ನವೆಂಬರ್ 19ನೇ ತಾರೀಕಿನಂದು ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
ಈ ಸಮಯದಲ್ಲಿ ಯಾವುದೇ ಭಾಷೆಯ ದೊಡ್ಡ ಸಿನಿಮಾ ಬಿಡುಗಡೆ ಆಗುವುದಿಲ್ಲ ಎಂದಾದರೆ ಒಂಭತ್ತನೇ ದಿಕ್ಕು ಪ್ರೇಕ್ಷಕರ ಮುಂದೆ ಬರಲಿದೆ ಎಂದು ನಿರ್ದೇಶಕ ದಯಾಳ್ ಪದ್ಮನಾಭನ್ ಹೇಳಿದ್ದಾರೆ.
ಲೂಸ್ ಮಾದ ಯೋಗಿ ಅವರು ನಾಯಕನಾಗಿ ನಟಿಸಿರುವ ಒಂಭತ್ತನೆ ದಿಕ್ಕು ಚಿತ್ರದಲ್ಲಿ ನಾಯಕಿ ಆಗಿ ಅದಿತಿ ಪ್ರಭುದೇವ ನಟಿಸಿದ್ದಾರೆ. ಚಿತ್ರದ ಟ್ರೇಲರ್ ಈಗಾಗಲೇ ಬಿಡುಗಡೆಯಾಗಿದೆ.
“ನಾನು ಇಲ್ಲಿಯವರೆಗೂ ಮಾಡದ ಪಾತ್ರವನ್ನು ಈ ಚಿತ್ರದಲ್ಲಿ ಮಾಡಿದ್ದೇನೆ. ದಯಾಳ್ ಅವರು ಹೇಳಿದ ಕಥೆ ತುಂಬಾ ಹಿಡಿಸಿತು. ಕಂಟೆಂಟ್ ಇರುವ ಕಮರ್ಷಿಯಲ್ ಸಿನಿಮಾ ಇದಾಗಿದೆ ” ಎಂದು ಯೋಗಿ ಹೇಳಿದ್ದಾರೆ.
” ಇದು ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದೆ. ಈ ಚಿತ್ರದ ಕಥೆ ಎರಡು ಟೈಮ್‌ಲೈನ್‌ನಲ್ಲಿ ಸಾಗುತ್ತದೆ. ನಮಗೆ ಸಿಗುವುದಿಲ್ಲ ಎಂದು ಗೊತ್ತಿದರೂ ನಾವು ಮತ್ತೊಂದು ದಾರಿಯಲ್ಲಿ ಏನನ್ನೋ ಹುಡುಕುತ್ತಾ ಹೋಗುತ್ತೇವೆ. ಅದು ಮತ್ತೊಂದು ಕಡೆ ಸಿಗುತ್ತದೆ. ಹೀಗೆ ಇಲ್ಲದ್ದ ಕಡೆ ಹುಡುಕುತ್ತಾ ಸಾಗುತ್ತೇವೆ. ಅದಕ್ಕೆ ನಾನು ಈ ಶೀರ್ಷಿಕೆ ಆಯ್ಕೆ ಮಾಡಿಕೊಂಡೆ. ಚಿತ್ರದಲ್ಲಿ ಮೂರು ಸಾಹಸ ಸನ್ನಿವೇಶಗಳಿವೆ” ಎಂದು ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕ ಆಗಿರುವ ದಯಾಳ್ ಪದ್ಮನಾಭನ್ ಹೇಳಿದ್ದಾರೆ.
ಚಿತ್ರದಲ್ಲಿ ಸಾಯಿಕುಮಾರ್, ಅಶೋಕ್, ಸುಂದರ್, ರಮೇಶ್ ಭಟ್, ಶೃತಿ ನಾಯಕ್, ಪ್ರಶಾಂತ್ ಸಿದ್ದಿ, ಮುಂತಾದರು ಇದ್ದಾರೆ. ಚಿತ್ರಕ್ಕೆ ಮಣಿಕಾಂತ್ ಕದ್ರಿ ಅವರ ಸಂಗೀತ, ರಾಕೇಶ್ ಛಾಯಾಗ್ರಹಣ ಇದೆ.
___





Be the first to comment