‘ಒಂಭತ್ತನೇ ದಿಕ್ಕು` ಚಿತ್ರಕ್ಕೆ ರೀರೆಕಾರ್ಡಿಂಗ್ ಪೂರ್ಣ

ಏ 9 ಸ್ಟುಡಿಯೋಸ್ ಅರ್ಪಿಸುವ, ಆ ಪಿಕ್ಚರ್ಸ್ ಅವರು ಜಿ ಸಿನಿಮಾಸ್ ಸಹಭಾಗಿತ್ವದಲ್ಲಿ ನಿರ್ಮಿಸುತ್ತಿರುವ ಹಾಗೂ ದಯಾಳ್ ಪದ್ಮನಾಭನ್ ನಿರ್ದೇಶನದ ‘ಒಂಭತ್ತನೇ ದಿಕ್ಕು’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ರೀರೆಕಾರ್ಡಿಂಗ್ ಸಹ ಪೂರ್ಣವಾಗಿದೆ. ಅವಿನಾಶ್ ಯು ಶೆಟ್ಟಿ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.

ನಿತಿಲನ್ ಅವರು ಬರೆದಿರುವ ಕಥೆಗೆ ವೆಂಕಟ್ ದೇವ್, ಅಭಿಷೇಕ್.ಎಸ್.ಎನ್ ಹಾಗೂ ದಯಾಳ್ ಪದ್ಮನಾಭನ್ ಸಂಭಾಷಣೆ ಬರೆದಿದ್ದಾರೆ. ರಾಕೇಶ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಮಣಿಕಾಂತ್ ಕದ್ರಿ ಅವರ ಸಂಗೀತ ನಿರ್ದೇಶನವಿದೆ. ಪ್ರೀತಿ ಮೋಹನ್ ಸಂಕಲನ, ವಿಕ್ರಂ ಮೋರ್ ಸಾಹಸ ನಿರ್ದೇಶನ ಹಾಗೂ ಮುರಳಿ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ಲೂಸ್ ಮಾದ ಯೋಗಿ, ಅದಿತಿ ಪ್ರಭುದೇವ, ಸಂಪತ್ ಕುಮಾರ್, ಸಾಯಿಕುಮಾರ್, ಅಶೋಕ್, ರಮೇಶ್ ಭಟ್, ಪ್ರಶಾಂತ್ ಸಿದ್ದಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!