ನಿರ್ದೇಶಕ ದಯಾಳ್ ಪದ್ಮನಾಭನ್ ಅವರ ‘ಒಂಬತ್ತನೇ ದಿಕ್ಕು’ ಸಿನಿಮಾದ ಫೋಟೋಗಳನ್ನು ಬಿಡುಗಡೆ ಮಾಡಿ ಆರಂಭದಿಂದ ಶುಭಂ ಅನ್ನುವವರೆಗೆ ಚಿತ್ರದ ಎಳೆಯನ್ನ ಬಿಟ್ಟುಕೊಟ್ಟಿದ್ದಾರೆ. ಗಆದರೆ, ಈ ‘ಒಂಬತ್ತನೇ ದಿಕ್ಕು’ ಒಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಈ ಫೋಟೋಗಳು ಗಮನಿಸಿದರೆ ಲವ್ ಇಂದ ಸಾವಿನವರೆಗೂ ಪ್ರಸ್ತಾಪವಿದೆ. ಇದರ ಮಧ್ಯೆ ಜೀವನದ ಘಟ್ಟಗಳನ್ನು ಸಹ ದಯಾಳ್ ಪದ್ಮನಾಭನ್ ಹೇಳಿದ್ದಾರೆ.
ಲೂಸ್ ಮಾದ ಯೋಗೀಶ್ ಮತ್ತು ಅದಿತಿ ಪ್ರಭುದೇವ ಅವರಿಗೆ ಪ್ರೇಮ ನಿವೇದನೆ, ಮದುವೆ, ಮಗು, ಆ ಮಗುವಿನ ಮದುವೆ ಮತ್ತು ಗೋಡೆ ಮೇಲೆ ಫೋಟೋ ಹಾಗೂ ಅದಕ್ಕೊಂದು ಹಾರ ಎಲ್ಲವನ್ನೂ ಹೇಳಿಬಿಡುತ್ತದೆ ಅಂತಾ ಪ್ರೇಕ್ಷಕ ಅಂದುಕೊಂಡರೆ ಅವೆಲ್ಲದರ ನಡುವೆ ಅನೇಕ ವಿಚಾರ ಅಡಗಿದೆ ಎನ್ನುತ್ತಾರೆ ದಯಾಳ್ ಪದ್ಮನಾಭನ್.
ಅಭಿಷೇಕ್ ಎಸ್ ಎನ್ ಈ ಫೋಟೋಗಳನ್ನು ಒಂದು ಆರ್ಡರ್‌ನಲ್ಲಿ ಸಂಗ್ರಹಿಸಿ ದಯಾಳ್ ಅವರಿಗೆ ಈ ಲಾಕ್‌ಡೌನ್ ಸಂದರ್ಭದಲ್ಲಿ ಬಳಸಲು ಸಹಾಯ ಆಗಿದ್ದಾರೆ. ಒಂಬತ್ತನೇ ದಿಕ್ಕು ಬೆಳಗ್ಗೆ 7.30 ರಿಂದ ಸಂಜೆ 4.30ರೊಳಗೆ ಜರಗುವ ಕಥೆ ಎಂದು ದಯಾಳ್ ಈ ಹಿಂದೆ ಮುಹೂರ್ತದಲ್ಲಿ ಹೇಳಿಕೊಂಡಿದ್ದರು.
ಸಂಪತ್‌ಕುಮಾರ್, ಸುಂದರ್ ವೀಣಾ, ಶ್ರುತಿ ನಾಯ್ಕ್, ಯತಿರಾಜ್, ಮಧುಸೂಧನ್ ಹಾಗೂ ಇತರರು ಈ ಪಾತ್ರವರ್ಗದಲ್ಲಿದ್ದಾರೆ. ನಿತಿಲನ್ ಕಥೆ ಒದಗಿಸಿದ್ದಾರೆ. ಮಣಿಕಾಂತ್ ಖದ್ರಿ ಸಂಗೀತ, ಪ್ರೀತಿ ಮೋಹನ್ ಸಂಕಲನ, ವಿಕ್ರಮ್ ಮೋರ್ ಸಾಹಸ, ಅವಿನಾಶ್ ಶೆಟ್ಟಿ ನಿರ್ಮಾಣ, ವೆಂಕಟ್‌ದೇವ್, ದಯಾಳ್ ಹಾಗೂ ಅಭಿಷೇಕ್ ಎಸ್ ಎನ್ ಸಂಭಾಷಣೆ ಬರೆದಿದ್ದಾರೆ.
ಈ ಚಿತ್ರದಲ್ಲಿ ನಾಯಕ ಲೂಸ್ ಮಾದ ಯೋಗಿ ಟ್ರಾವೆಲ್ ಏಜೆಂಟ್ ಆಗಿ ಪಾತ್ರ ಮಾಡಿದ್ದಾರೆ. ಮಧ್ಯಮದ ಕುಟುಂಬದ ಹುಡುಗಿಯಾಗಿ ಅದಿತಿ ಕಾಣಿಸಿಕೊಂಡಿದ್ದಾರೆ
Be the first to comment